• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಡೆಕ್ಕನ್ 360ಯಲ್ಲಿ ರಿಲಯನ್ಸ್ ರೊಕ್ಕ

By Mrutyunjaya Kalmat
|

ಬೆಂಗಳೂರು, ಏ. 17 : ಕ್ಯಾಪ್ಟನ್ ಗೋಪಿನಾಥ್ ಮಾಲೀಕತ್ವದ ನೂತನ ಕಾರ್ಗೋ ವಿಮಾನಯಾನ ಮತ್ತು ಲಾಜಿಸ್ಟಿಕ್ ಕಂಪನಿ 360ರಲ್ಲಿ ಮುಖೇಶ್ ಅಂಬಾನಿಯವರ ರಿಲಯನ್ಸ್(ಆರ್ ಐಎಲ್) ಬಂಡವಾಳ ಹೂಡಲಿದೆ. ಇದರೊಂದಿಗೆ ರಿಲಯನ್ಸ್ ಇಂಡಸ್ಟ್ರೀಸ್ ಸರಕು ವಿಮಾನಯಾನ ಮತ್ತು ಲಾಜಿಸ್ಟಿಕ್ ಕ್ಷೇತ್ರವನ್ನು ಪ್ರವೇಶಿಸಿದೆ.

ಆದರೆ, ಹೂಡಿಕೆಯ ಮೊತ್ತ ಕುರಿತು ಉಭಯ ಕಂಪನಿಗಳು ಯಾವುದೇ ವಿವರವನ್ನು ಬಹಿರಂಗಪಡಿಸಿಲ್ಲ. ಈ ವಹಿವಾಟು ಷೇರು ಮಾರಾಟವಲ್ಲ, ರಿಲಯನ್ಸ್ ನಮ್ಮ ಕಂಪನಿಯಲ್ಲಿ ಹೂಡಿಕೆ ಮಾಡಿದೆ. ನೂತನ ಸಂಸ್ಥೆಯಲ್ಲಿ ಆರ್ಐಎಲ್ ಶೇ.26ರಷ್ಟು ಹೊಂದಲಿದೆ ಎಂದು ಗೋಪಿನಾಥ್ ಹೇಳಿದ್ದಾರೆ. ಮಾಲ್ಯದ ಕುರಿತು ಅವರು ಯಾವುದೇ ಮಾಹಿತಿ ನೀಡಿಲ್ಲ.

ಡೆಕ್ಕನ್ 360 ರ ಆಡಳಿತ ಮಂಡಳಿಯ ರಿಲಯನ್ಸ್ ಇಂಡಸ್ಟ್ರೀಸ್ ನ 2 ನಾಮನಿರ್ದೇಶಿತ ಸದಸ್ಯರನ್ನು ಹೊಂದಲಿದೆ. ಒಟ್ಟು 5 ಜನ ಸದಸ್ಯರನ್ನು ಈ ಆಡಳಿತ ಮಂಡಳಿ ಹೊಂದಿದೆ. ಕೆಲ ಖಾಸಗಿ ಈಕ್ವಿಟಿ ಸಂಸ್ಥೆಗಳು ಹಾಗೂ ಬೃಹತ್ ಹೂಡಿಕೆದಾರರ ಜೊತೆ ಮಾತುಕತೆ ನಡೆಸಲಾಗಿತ್ತು. ಅದಾಗ್ಯೂ ರಿಲಯನ್ಸ್ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡಿದ್ದೇವೆ. ಕೇವಲ ಗರಿಷ್ಠ ಬಿಡ್ಡಿಂಗ್ ಮಾತ್ರವಲ್ಲ. ಈ ವಹಿವಾಟಿನ ಪೂರ್ಣ ಲಾಭ ಪಡೆಯಲು ಈ ನಿರ್ಧಾರ ತೆಗೆದುಕೊಂಡಿದ್ದೇವೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X