ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲ್ಲಲ್ಲಿ ಮಳೆ, ಗುಲ್ಬರ್ಗದಲ್ಲಿ ಬಿಸಿಲಧಾರೆ

By Shami
|
Google Oneindia Kannada News

Karnataka weather report
ಬೆಂಗಳೂರು, ಏ. 16 : ಶುಕ್ರವಾರ ರಾಜ್ಯದಲ್ಲಿ ಅತ್ಯಧಿಕ ತಾಪಮಾನ ಬಯಲುಸೀಮೆ ಗುಲ್ಬರ್ಗದಲ್ಲಿ ದಾಖಲಾಗಿದೆ. ಇಂದಿನ ಗರಿಷ್ಠ ಉಷ್ಣಾಂಶ 42.3 ಡಿಗ್ರಿ ಸೆಲ್ಸಿಯಸ್ ತಲುಪಿದ್ದು ಜಿಲ್ಲೆಯಾದ್ಯಂತ ಸೂರ್ಯ ಬೆಂಕಿ ಉಂಡೆ ಉಗುಳುತ್ತಿದ್ದಾನೆ. ಬಹುತೇಕ ಇತರ ಜಿಲ್ಲೆಗಳಲ್ಲಿ ಕೂಡ ಒಟ್ಟಾರೆ ಒಣ ಹವೆಯೇ ಮುಂದುವರೆದಿದೆ. ಈ ಮಧ್ಯೆ ಅಲ್ಲಲ್ಲಿ ಅಲ್ಪ ಸ್ವಲ್ಪ ಮಳೆ ಬಿದ್ದಿದ್ದು ಶಾಖ ತಕ್ಕಮಟ್ಟಿಗೆ ಕಡಿಮೆ ಆಗಿದೆ.

ಮಳೆ ಪ್ರಮಾಣ ತುಮಕೂರು 2 ಸೆಂ.ಮೀ., ಬಾದಾಮಿ, ಶಿಕಾರಿಪುರ, ಸಕಲೇಶಪುರ ಮತ್ತು ಕುಣಿಗಲ್ ನಲ್ಲಿ ತಲಾ 1 ಸೆಂ.ಮೀಟರ್ ನಷ್ಟು ಮಳೆ ಆಗಿದೆ. ಅನೇಕ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಉಷ್ಣಾಂಶಕ್ಕಿಂತ ಅಧಿಕ ಪ್ರಮಾಣದಲ್ಲಿ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕ, ಕರಾವಳಿ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಅನೇಕ ಸ್ಥಳಗಳಲ್ಲಿ ಸೆಖೆ ಸೆಖೆ ಪರಿಸ್ಥಿತಿ ಮುಂದುವರೆಯುತ್ತಲೇಯಿದೆ.

ಭಾನುವಾರದವರೆಗೆ ಲಭ್ಯವಾಗಿರುವ ಹವಾಮಾನ ಇಲಾಖೆಯ ಮುನ್ನೋಟದ ಪ್ರಕಾರ ರಾಜ್ಯದಲ್ಲಿ ಚದುರಿದಂತೆ ಮಳೆ, ಗುಡುಗು ಸಮೇತ ಭೋರ್ಗರೆತ ಮಳೆ ಆದರೂ ಆಗಬಹುದು. ಆದರೆ, ಇಂಥದೇ ತಾಲೂಕಿನಲ್ಲಿ ಇಷ್ಟೇ ಬಿಸಿಲು ಇರುತ್ತದೆ, ಇಷ್ಟೇ ಪ್ರಮಾಣದಲ್ಲಿ ಮಳೆ ಆಗುತ್ತದೆ ಎಂಬ ಬಗ್ಗೆ ಅಂಕಿಅಂಶಗಳು ದೊರೆತಿಲ್ಲ.

ಬೆಂಗಳೂರಿನ ಹವಾಮಾನ ಮುನ್ನೋಟ : ಸಾಮಾನ್ಯವಾಗಿ ಮೋಡಮುಸುಕಿದ ವಾತಾವರಣ. ಬೃಹತ್ ಬೆಂಗಳೂರಿನ ಕೆಲವು ವಾರ್ಡುಗಳಲ್ಲಿ ಸಾಯಂಕಾಲ ತುಂತುರು ಮಳೆ ಅಥವಾ ಸ್ವಲ್ಪ ಜೋರಾದ ಮಳೆಯೇ ಸುರಿಯುವ ಸಾಧ್ಯತೆ ಇದೆ ಎಂದು ವರದಿ ಹೇಳುತ್ತದೆ. ರಾಜಧಾನಿಯ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಸಿಯಸ್.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X