ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗಾರ್ಮೆಂಟ್ ದಾಸ್ತಾನು ನುಂಗಿ ಹಾಕಿದ ಅಗ್ನಿ

By Mahesh
|
Google Oneindia Kannada News

Golukdas Garment godown gutted in fire
ಬೆಂಗಳೂರು, ಏ.16: ಬೆಂಕಿಯ ಕೆನ್ನಾಲಗೆಗೆ ಸಿಕ್ಕಿ, ಗಾರ್ಮೆಂಟ್ ನ ಗೋದಾಮಿನಲ್ಲಿ ದಾಸ್ತಾನು ಮಾಡಿದ್ದ ಬೃಹತ್ ಜವಳಿ ರಾಶಿ ನಾಶವಾದ ಘಟನೆ ಇಂದು ಯಶವಂತಪುರ ಬಳಿ ನಡೆದಿದೆ. ಆದರೆ, ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ.

ಇಂದು ಮುಂಜಾನೆ 3.20 ರ ವೇಳೆಗೆ ಗೋರಗುಂಟೆಪಾಳ್ಯದಲ್ಲಿರುವ ಗೋಕಲ್ ದಾಸ್ ಎಕ್ಸ್ ಪೋರ್ಟ್ ಗೆ ಸೇರಿದ ಗಾರ್ಮೆಂಟ್ ನಲ್ಲಿ ಬೆಂಕಿ ಕಾಣಿಸಿಕೊಂಡಿತು. ಸುದ್ದಿ ತಿಳಿದ ತಕ್ಷಣ, ಘಟನಾ ಸ್ಥಳಕ್ಕೆ 30 ಅಗ್ನಿಶಾಮಕದಳದ ವಾಹನಗಳು ಧಾವಿಸಿ ಬಂದವು. ಸುಮಾರು 4 ಗಂಟೆಗಳ ಕಾಲ ಎಡಬಿಡದೆ ಬೆಂಕಿಯ ಮೇಲೆ ಯುದ್ಧ ಸಾರಿದ ಅಗ್ನಿ ಶಾಮಕ ಸಿಬ್ಬಂದಿಗಳು, ಕೊನೆಗೂ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿರುವ ಸಾಧ್ಯತೆಯಿದೆ.ಸುಮಾರು 8 ಸಾವಿರದಿಂದ 10 ಸಾವಿರ ಚ.ಅ ವಿಸ್ತೀರ್ಣದ ಗಾರ್ಮೆಂಟ್ ಗೋದಾಮು ಸಂಪೂರ್ಣ ಸುಟ್ಟು ಕರಕಲಾಗಿದೆ. ಬೆಂಕಿ ಆಕಸ್ಮಿಕದಿಂದ ಎಷ್ಟು ನಷ್ಟವಾಗಿದೆ ಎಂದು ಸದ್ಯಕ್ಕೆ ಹೇಳಲಾಗದು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥ ಚಂಗಪ್ಪ ಹೇಳಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X