ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಾರವಾರದಲ್ಲಿ 26 ಮೀನುಗಾರರು ಪಾರು

By Prasad
|
Google Oneindia Kannada News

Goa fishermen rescued in Karwar
ಕಾರವಾರ, ಏ. 16 : ಕಾರವಾರದ ಬೈತ್ ಕೋಲ್ ಬಂದರು ಬಳಿ ಗೋವಾಕ್ಕೆ ಸೇರಿದ ದೋಣಿಯೊಂದರಲ್ಲಿ ನೀರು ತುಂಬಿ ಮುಳುಗುವ ಭೀತಿಯಲ್ಲಿತ್ತು. ಸಕಾಲದಲ್ಲಿ ನೆರವು ದೊರೆತಿದ್ದರಿಂದ ದೋಣಿ ಮತ್ತು ಅದರಲ್ಲಿದ್ದ ಮೀನುಗಾರರನ್ನು ಪಾರು ಮಾಡಲಾಗಿದೆ.

ಕಾರವಾರ ಬಂದರಿನಿಂದ ಸುಮಾರು ಮೂರು ಕಿ.ಮೀ. ದೂರದಲ್ಲಿರುವ ಲೈಟ್ ಹೌಸ್ ಬಳಿ ಬೆಳಗಿನ ಜಾವ ಗೋವಾಕ್ಕೆ ಸೇರಿದ ಗೋಲ್ಡನ್ ಸೀ ಎಂಬ ದೋಣಿಯಲ್ಲಿ ನೀರು ಸೇರಿಕೊಳ್ಳಲಾರಂಭಿಸಿತ್ತು. ದೋಣಿಯಲ್ಲಿ ಗೋವಾದ 26 ಮೀನುಗಾರರಿದ್ದರು.

ಇದನ್ನು ಗಮನಿಸಿದ ಮಂಗಳೂರಿಗೆ ಸೇರಿದ ದೋಣಿಯಲ್ಲಿದ್ದವರು ಮೀನುಗಾರರನ್ನು ಪಾರು ಮಾಡಿ ದೋಣಿಯನ್ನು ಕಾರವಾರ ಬಂದರು ಬಳಿಗೆ ಎಳೆತಂದಿದ್ದಾರೆ. ದೋಣಿಯಲ್ಲಿ ಸೇರಿಕೊಂಡಿರುವ ನೀರನ್ನು ಹೊರತೆಗೆಯುವ ಕಾರ್ಯ ಭರದಿಂದ ಸಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X