ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಐಪಿಎಲ್ :ಠುಸ್ ಆದ ಯೂಸುಫ್, ಕ್ಲಿಕ್ ಆದ ಕೆಪಿ

By Mahesh
|
Google Oneindia Kannada News

Ruthless KP seals big win for Bangalore
ಜೈಪುರ, ಏ.15: ಡಿಎಲ್ ಎಫ್ ಐಪಿಎಲ್ ಮೂರನೇ ಆವೃತ್ತಿಯ ಉಪಾಂತ್ಯ ಹಂತ ತಲುಪಲು ಆರ್ ಸಿಬಿ ಹಾಗೂ ಅರ್ ಆರ್ ತಂಡಗಳು ನಡೆಸಿದ ಸೆಣಸಾಟದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ದಾಖಲಿಸಿತು.

ಗೆಲ್ಲಲು 131ರ ಸುಲಭ ಗುರಿ ಪಡೆದ ಅನಿಲ್ ಕುಂಬ್ಳೆ ಬಳಗ ಕೆವಿನ್ ಪೀಟರ್‌ಸನ್ ಬಾರಿಸಿದ ಆಕರ್ಷಕ ಅರ್ಧಶತಕ (62) ನೆರವಿನಿಂದ 15.4 ಓವರುಗಳಲ್ಲಿ ಐದು ವಿಕೆಟ್ ನಷ್ಟಕ್ಕೆ ಗುರಿ ತಲುಪಿತು.ಬೆಂಗಳೂರು ತಂಡ ಒಟ್ಟು ಆಡಿರುವ 13 ಪಂದ್ಯಗಳಲ್ಲಿ ಏಳು ಜಯ ಹಾಗೂ ಆರು ಸೋಲನ್ನು ಕಂಡು ಒಟ್ಟು 14 ಅಂಕ +0.467 ರನ್‌ರೇಟ್‌ ಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಮತ್ತೊಂದೆಡೆ ಬೆಂಗಳೂರು ವಿರುದ್ಧ ಮುಗ್ಗರಿಸಿರುವ ಶೇನ್ ವಾರ್ನ್ ಪಡೆ ಆಡಿರುವ 13 ಪಂದ್ಯಗಳಲ್ಲಿ ಆರು ಜಯ ಹಾಗೂ ಏಳು ಸೋಲುಗಳೊಂದಿಗೆ ಒಟ್ಟು 12 ಅಂಕ ಕಲೆ ಹಾಕಿದ್ದು, ಅಂಕಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ.ಬೆಂಗಳೂರಿನ ಕೊನೆಯ ಲೀಗ್ ಪಂದ್ಯ ಮುಂಬೈ ವಿರುದ್ಧ ಏಪ್ರಿಲ್ 17ರಂದು ನಡೆಯಲಿದೆ.

ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ
ಐಪಿಎಲ್ 3 ಪಂದ್ಯಗಳ ಪಟ್ಟಿ
ಚಾಲೆಂಜರ್ಸ್ vs ಚಾರ್ಜರ್ಸ್ : ಕನ್ನಡದಲ್ಲಿ ಸ್ಕೋರ್

131ರ ಸಾಧಾರಣ ಮೊತ್ತ ಬೆನ್ನತ್ತಿದ್ದ ಬೆಂಗಳೂರಿನ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕ ಜಾಕ್ವಾಸ್ ಕಾಲಿಸ್ ಶೂನ್ಯ ಗಳಿಸಿ ನಿರ್ಗಮಿಸಿದರೆ ಮನೀಷ್ ಪಾಂಡೆ (14) ಮತ್ತೊಮ್ಮೆ ವಿಫಲರಾದರು. ಈ ಹಂತದಲ್ಲಿ ಜೊತೆಗೂಡಿದ ಕೆವಿನ್ ಪೀಟರ್‌ಸನ್ ಮತ್ತು ರಾಬಿನ್ ಉತ್ತಪ್ಪ ಜೋಡಿ ಬಿರುಸಿನಿಂದ ರನ್ ಪೇರಿಸಲು ತೊಡಗಿದರು. ಕೇವಲ 29 ಎಸೆತಗಳನ್ನು ಎದುರಿಸಿದ ಪೀಟರ್‌ಸನ್ ಹತ್ತು ಬೌಂಡರಿ ಹಾಗೂ ಎರಡು ಭರ್ಜರಿ ಸಿಕ್ಸರುಗಳ ನೆರವಿನಿಂದ 62 ರನ್ ಗಳಿಸಿದರು.

ಪೀಟರ್‌ಸನ್‌ಗೆ ಉತ್ತಮ ಸಾಥ್ ನೀಡಿದ ಉತ್ತಪ್ಪ 21 ಎಸೆತಗಳಲ್ಲಿ ಎರಡು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 26 ರನ್ ಗಳಿಸಿದರು. ವಿರಾಟ್ ಕೊಹ್ಲಿ 14 ರನ್ ಗಳಿಸಿದರು.ವಿರಾಟ್ ಕೊಹ್ಲಿ ಜೊತೆ ಹೊಂದಾಣಿಕೆ ಕೊರತೆ ಅನುಭವಿಸಿದ್ದ ಪೀಟರ್‌ಸನ್ ರನೌಟ್‌ಗೆ ಬಲಿಯಾಗಿದ್ದರು. ಈ ಹಂತದಲ್ಲಿ ಸಿಟ್ಟಿಗೆದ್ದ ಪೀಟರ್‌ಸನ್ ತನ್ನ ಸಹ ಆಟಗಾರರ ವಿರುದ್ಧವೇ ರೊಚ್ಚಿಗೆದ್ದಿದ್ದರು. ಕೊನೆಗೆ ಬಂದ ರೋಸ್ ಟೇಲರ್ (10*) ಮತ್ತು ರಾಹುಲ್ ದ್ರಾವಿಡ್ (5*) ರನ್ ಗಳಿಸುವ ಮೂಲಕ ತಂಡದ ಗೆಲುವನ್ನು ಸುಲಭಗೊಳಿಸಿದರು.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ತಾನ ದಾಂಡಿಗರಿಗೆ ಬೆಂಗಳೂರಿನ ನಿಖರ ದಾಳಿ ಮುಂದೆ ರನ್ ಗಳಿಸಲಾಗಲಿಲ್ಲ. ಆರಂಭಿಕರಾದ ಎಂ. ಜೆ. ಲಂಬ್ (9), ನಮನ್ ಓಜಾ (7) ಮತ್ತು ಎ.ಜಿ. ಪೌಣಿಕರ್ (0) ಬೇಗನೆ ನಿರ್ಗಮಿಸಿದರು.ನಂತರ ಬಂದ ಶೇನ್ ವಾಟ್ಸನ್ (22) ಮತ್ತು ಜುಂಜುನ್‌ವಾಲಾ (13) ಸ್ವಲ್ಪ ಪ್ರತಿರೋಧ ನೀಡಿದರೂ ಹೆಚ್ಚು ಹೊತ್ತು ಸಾಗಲಿಲ್ಲ. ಸ್ಫೋಟಕ ಬ್ಯಾಟ್ಸ್‌ಮನ್ ಯೂಸುಫ್ ಪಠಾಣ್ (11) ಮತ್ತೊಮ್ಮೆ ವಿಫಲರಾದರು.

ಕೊನೆಗೆ ಬಂದ ವೋಜ್ಸ್ ಅಜೇಯ 28 ಮತ್ತು ರಾವುತ್ ಔಟಾಗದೆ 32 ರನ್ ಗಳಿಸುವ ಮೂಲಕ ತಂಡವನ್ನು ಸಮಧಾನಕರ ಮೊತ್ತದತ್ತ ಮುನ್ನಡೆಸಿದರು.ಒಟ್ಟಾರೆಯಾಗಿ ರಾಜಸ್ತಾನ ತಂಡ ನಿಗದಿತ 20 ಓವರುಗಳಲ್ಲಿ ಆರು ವಿಕೆಟ್ ನಷ್ಟಕ್ಕೆ 130 ರನ್ ಗಳಿಸಲಷ್ಟೇ ಶಕ್ತವಾಯಿತು. ಬೆಂಗಳೂರು ಪರ ಪಂಕಜ್ ಸಿಂಗ್ ಎರಡು ವಿಕೆಟ್ ಕಿತ್ತರೆ ಡೇಲ್ ಸ್ಟೈನ್, ವಿನಯ್ ಕುಮಾರ್ ಮತ್ತು ಜಾಕ್ವಾಸ್ ಕಾಲಿಸ್ ತಲಾ ಒಂದು ವಿಕೆಟ್ ಕಿತ್ತರು.

ರಾಜಸ್ತಾನ ರಾಯಲ್ಸ್ ವಿರುದ್ಧ ಎದುರಾದ ಭರ್ಜರಿ ಜಯದ ನಂತರ ಪ್ರತಿಕ್ರಿಯೆ ನೀಡಿರುವ ಪಂದ್ಯಶ್ರೇಷ್ಠ ವಿಜೇತ ಆಟಗಾರ ಬೆಂಗಳೂರು ತಂಡದ ಆಟಗಾರ ಕೆವಿನ್ ಪೀಟರ್‌ಸನ್, ಪಂದ್ಯವನ್ನು ಆದಷ್ಟು ಬೇಗ ಕೊನೆಗೊಳಿಸಲು ನಾವು ಬಯಸಿದ್ದೆವು ಎಂದು ಹೇಳಿಕೊಂಡಿದ್ದಾರೆ. ಸೆಮಿಫೈನಲ್ ಪ್ರವೇಶಕ್ಕೆ ನೆಟ್ ರನ್‌ರೇಟ್ ಪ್ರಾಮುಖ್ಯವೆನಿಸಲಿರುವುದರಿಂದ ಪಂದ್ಯವನ್ನು 15 ಓವರುಗಳ ಮುಂಚಿತವಾಗಿ ಮುಕ್ತಾಯಗೊಳಿಸಲು ನಾವು ಬಯಸಿದ್ದೆವು ಎಂದವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X