ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶಿ ಆರ್ಥಿಕ ಮಾದರಿ ಬೇಡ : ಪಿತ್ರೋಡಾ

By Mrutyunjaya Kalmat
|
Google Oneindia Kannada News

Sam Pitroda
ಬೆಂಗಳೂರು, ಏ. 15 : ಬಳಕೆ ಆಧರಿತ ಪಾಶ್ಚಾತ್ಯ ಆರ್ಥಿಕ ಮಾದರಿ ಭಾರತಕ್ಕೆ ಯೋಗ್ಯವಲ್ಲ. ಈ ಮಾದರಿಯ ಅನುಕರಣೆ ಬೇಡ ಎಂದು ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ ಸಲಹೆ ಮಾಡಿದ್ದಾರೆ.

ಮೈಕ್ರೋಸಾಫ್ಟ್ ಆಯೋಜಿಸಿದ್ದ ಟೆಕ್ ಎಡ್ 2010 ತಂತ್ರಜ್ಞಾನ ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಿದ ಅವರು, ಹೊಸತನ, ವಿನೂತನ ಎಂಬ ಸ್ವಂತಿಕೆ ನಮ್ಮದಾಗಬೇಕು ಎಂದರು. ಅಭಿವೃದ್ಧಿಗಾಗಿ ತನ್ನದೇ ಆದ ಆರ್ಥಿಕ ಮಾದರಿಬೇಕು. ವಿಶೇಷವಾಗಿ ಶಿಕ್ಷಣ, ಆರೋಗ್ಯದಂತಹ ಕ್ಷೇತ್ರಗಳಲ್ಲಿ ಹೊಸ ಅಭಿವೃದ್ಧಿ ಮಾದರಿಗಳಿಗೆ ಭಾರತ ಒತ್ತು ನೀಡಬೇಕಾಗಿದೆ ಎಂದು ಹೇಳಿದರು.

ನಗರದ ಪ್ರದೇಶಗಳನ್ನು ಹೊರತುಪಡಿಸಿ ಗ್ರಾಮೀಣ ಭಾಗಗಳು ಹೊರಗುತ್ತಿಗೆ ಕೇಂದ್ರಗಳಾಗಿ ರೂಪಗೊಳ್ಳಬೇಕು. ಬೆಂಗಳೂರು ಅಮೆರಿಕದ ಬ್ಯಾಕ್ ಆಫೀಸ್ ಆಗುವುದಾದರೆ ನಗರ ಪ್ರದೇಶಗಳಿಗೆ ಬ್ಯಾಕ್ ಆಫೀಸ್ ಆಗಿ ಗ್ರಾಮೀಣ ಪ್ರದೇಶಗಳು ಏಕೆ ಆಗಬಾರದು ಎಂದು ಪಿತ್ರೋಡಾ ಪ್ರಶ್ನಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X