ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ ಸಿಬಿಗೆ ಮತ್ತೆ ಮಣ್ಣು ಮುಕ್ಕಿಸಿದ ಡೆಕ್ಕನ್

By Mahesh
|
Google Oneindia Kannada News

Royal Challengers gifts Chargers a win‎
ನಾಗ್ಪುರ, ಏ.12 : ಸೆಮಿಫೈನಲ್ ಪ್ರವೇಶದ ಕನಸಿನೊಂದಿಗೆ ಮೈದಾನಕ್ಕಿಳಿದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 13 ರನ್ನುಗಳಿಂದ ಸೋಲಿನ ರುಚಿ ಉಣಿಸಿ, ಹೈದರಾಬಾದ್ ನ ಡೆಕ್ಕನ್ ಚಾರ್ಜಸ್ ತಂಡ ಗೆಲುವಿನ ನಗೆ ಬೀರಿತು. ಐಪಿಲ್ 3 ಟ್ವಿಂಟಿ20 ಪಂದ್ಯಾವಳಿಗಳಲ್ಲಿ ಡೆಕ್ಕನ್ ವಿರುದ್ಧ ಆರ್ ಸಿಬಿ ಸತತ ಎರಡನೇ ಸೋಲು ಕಂಡಿದೆ. ಸೋಮವಾರದ ಸೋಲಿನಿಂದ ಬೆಂಗಳೂರಿಗೆ ಸೆಮಿಫೈನಲ್ ಹಾದಿ ಸ್ವಲ್ಪ ಕಠಿಣವಾಗಿದೆ.

ಡೆಕ್ಕನ್ ಚಾರ್ಜರ್ಸ್ ಒಡ್ಡಿದ 152 ಸವಾಲನ್ನು ಸಾಧಿಸಲು ವಿಫಲವಾದ ಬೆಂಗಳೂರು ತಂಡ 19.4 ಓವರುಗಳಲ್ಲಿ 138 ರನ್ನುಗಳಿಗೆ ತನ್ನೆಲ್ಲಾ ವಿಕೆಟ್ ಒಪ್ಪಿಸಿ ಹೀನಾಯ ಸೋಲು ಅನುಭವಿಸಿತು. ಇದರೊಂದಿಗೆ ಆಡಿರುವ 12 ಪಂದ್ಯಗಳಲ್ಲಿ ತಲಾ ಆರು ಸೋಲು ಹಾಗೂ ಜಯಗಳೊಂದಿಗೆ 12 ಅಂಕ ಸಂಪಾದಿಸಿರುವ ಅನಿಲ್ ಕುಂಬ್ಳೆ ಬಳಗ ಕಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದರೂ ಸೆಮಿಫೈನಲ್ ಹಾದಿ ಸುಗಮಗೊಳಿಸಲು ಉಳಿದಿರುವ ಎರಡೂ ಪಂದ್ಯಗಳನ್ನು ಗೆಲ್ಲಲೇ ಬೇಕಾದ ಒತ್ತಡದಲ್ಲಿದೆ. ಆಡಂ ಗಿಲ್‌ಕ್ರಿಸ್ಟ್ ಪಡೆ ಕೂಡಾ ಆಡಿರುವ 12 ಪಂದ್ಯಗಳಲ್ಲಿ ತಲಾ ಆರು ಜಯ ಹಾಗೂ ಸೋಲುಗಳೊಂದಿಗೆ 12 ಅಂಕ ಕಲೆ ಹಾಕಿದ್ದು, ಪಾಯಿಂಟ್ ಪಟ್ಟಿಯಲ್ಲಿ ಐದನೇ ಸ್ಥಾನಕ್ಕೆ ನೆಗೆತ ಕಂಡಿದೆ.

ಅಂಕಪಟ್ಟಿಗಾಗಿ ಇಲ್ಲಿ ಕ್ಲಿಕ್ಕಿಸಿ
ಐಪಿಎಲ್ 3 ಪಂದ್ಯಗಳ ಪಟ್ಟಿ
ಚಾಲೆಂಜರ್ಸ್ vs ಚಾರ್ಜರ್ಸ್ : ಕನ್ನಡದಲ್ಲಿ ಸ್ಕೋರ್

ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿಬಿ , ಉತ್ತಮ ಆರಂಭ ಕಂಡಿತು. ವೇಗಿ ಡೇಲ್ ಸ್ಟೈನ್ ಮೂರು ವಿಕೆಟ್ ಗಳಿಸಿ ಡೆಕ್ಕನ್‌ಗೆ ಶಾಕ್ ನೀಡಿದರು. ನಾಯಕ ಗಿಲ್‌ಕ್ರಿಸ್ಟ್ (೦)ಮತ್ತು ಟಿ. ಸುಮನ್‌(೦) ಅಲ್ಲದೆ ಹರ್ಷಲ್ ಗಿಬ್ಸ್‌‌ರನ್ನು (12) ಕ್ಲೀನ್ ಬೌಲ್ಡ್ ಮಾಡಿದರು.

ನಂತರ ರೋಹಿತ್ ಶರ್ಮಾ(51 ರನ್, 46 ಎಸೆತ) ಹಾಗೂ ಮೊನಿಷ್ ಮಿಶ್ರಾ (41 ರನ್, 30 ಎಸೆತ)ಉತ್ತಮ ಜೊತೆಯಾಟದ ಮೂಲಕ ಚೇತರಿಕೆಯ ಬ್ಯಾಟಿಂಗ್ ಪ್ರದರ್ಶಿಸಿದರು. ಆಮೇಲೆ, ಆಂಡ್ರ್ಯೂ ಸೈಮಂಡ್ಸ್ 19 ಹಾಗೂ ರೈನ್ ಹ್ಯಾರಿಸ್ ಅಜೇಯ 13 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 150ರ ಗಡಿ ದಾಟಿಸಿದರು.

ಠುಸ್ ಆದ ಕಾಲಿಸ್, ಮನೀಷ್ ಜೋಡಿ: ಆರ್ ಸಿಬಿ ಆರಂಭಿಕ ಆಟಗಾರರ ವೈಫಲ್ಯ ಕಂಡಿತು. ಮನೀಷ್ ಖಾತೆ ತೆರೆಯದೇ ಔಟಾದರೆ, ಕಾಲಿಸ್ 37 ಎಸೆತಗಳಲ್ಲಿ ಕೇವಲ 27 ರನ್ ಗಳಿಸಿದರು.ಆದರೆ ರಾಹುಲ್ ದ್ರಾವಿಡ್ ಜೊತೆ 74 ರನ್ ಜೊತೆಯಾಟದಲ್ಲಿ ಕಾಲಿಸ್ ಭಾಗಿಯಾದರು. ದ್ರಾವಿಡ್ ಉತ್ತಮ ಆಟ ಪ್ರದರ್ಶಿಸಿ ಕೇವಲ 35 ಎಸೆತಗಳಲ್ಲಿ 49 ರನ್ ಗಳಿಸಿದರು.

ನಂತರ ಬಂದವರಲ್ಲಿ ಉತ್ತಪ್ಪ ಹೊರತು ಪಡಿಸಿ ಉಳಿದವರು ಕ್ರೀಸ್ ಗೆ ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಗೆ ಮರಳಿದರು. ರೋಸ್ ಟೇಲರ್ (1), ವಿರಾಟ್ ಕೊಹ್ಲಿ (3), ಕ್ಯಾಮರೂನ್ ವೈಟ್ (4), ವಿನಯ್ ಕುಮಾರ್ (4), ಡೇಲ್ ಸ್ಟೈನ್ (0) ಮತ್ತು ಕೆ.ಪಿ. ಅಪ್ಪಣ್ಣ (1) .ಉತ್ತಪ್ಪ ಕೇವಲ 20 ಎಸೆತಗಳಲ್ಲಿ ಮೂರು ಸಿಕ್ಸರುಗಳ ನೆರವಿನಿಂದ 34 ರನ್ ಗಳಿಸಿದರು. ಡೆಕ್ಕನ್ ಪರ ಹ್ಯಾರಿಸ್, ಆರ್.ಪಿ. ಸಿಂಗ್, ಪ್ರಗ್ಯಾನ್ ಓಜಾ ಮತ್ತು ಹರ್ಮಿತ್ ಸಿಂಗ್ ತಲಾ ಎರಡು ವಿಕೆಟ್ ಕಿತ್ತರೆ ಆಂಡ್ರ್ಯೂ ಸೈಮಂಡ್ಸ್ ಒಂದು ವಿಕೆಟ್ ಪಡೆದರು. ಉತ್ತಮ ಬೌಲಿಂಗ್ ಪ್ರದರ್ಶಿಸಿ ಎರಡು ವಿಕೆಟ್ ಕಿತ್ತ ಹರ್ಮಿತ್ ಸಿಂಗ್ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X