ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಗದೀಶ್ ಸಿಂಗ್ ಖೇಹರ್ ನೂತನ ಸಿಜೆ

By Mrutyunjaya Kalmat
|
Google Oneindia Kannada News

Karnataka High Court
ನವದೆಹಲಿ, ಏ. 11 : ಉತ್ತರಖಂಡ್ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಜಗದೀಶ್ ಸಿಂಗ್ ಖೇಹರ್ ಅವರನ್ನು ಕರ್ನಾಟಕದ ಮುಖ್ಯನ್ಯಾಯಮೂರ್ತಿಯಾಗಿ ವರ್ಗಾವಣೆ ಮಾಡಲು ಸುಪ್ರಿಂಕೋರ್ಟ್ ನ್ಯಾಯಮೂರ್ತಿಗಳ ವರಿಷ್ಠ ಸಮಿತಿ ಶಿಫಾರಸ್ಸು ಮಾಡಿದೆ.

ದಿಲ್ಲಿ ಹೈಕೋರ್ಟ್ ಹಂಗಾಮಿ ಮುಖ್ಯನ್ಯಾಯಮೂರ್ತಿ ಮದನ್ ಲೋಕೋರ್ ಅವರು ಕರ್ನಾಟಕ ಹೈಕೋರ್ಟ್ ಮುಖ್ಯನ್ಯಾಯಮೂರ್ತಿ ಆಗಲು ಆಸಕ್ತಿ ತೋರದಿರುವ ಹಿನ್ನೆಲೆಯಲ್ಲಿ ವರಿಷ್ಠ ಸಮಿತಿ ಖೇಹರ್ ಅವರ ಹೆಸರನ್ನು ಶಿಫಾರಸ್ಸು ಮಾಡಿದೆ. 1952ರ ಆಗಸ್ಟ್ 28ರಂದು ಜನಿಸಿದ ಖೇಹರ್ ಅವರು ಚಂಡೀಗಢ್ ದ ಸರಕಾರಿ ಕಾಲೇಜಿನಲ್ಲಿ ಪದವಿ ಪಡೆದರು.

1977ರಲ್ಲಿ ಪಂಜಾಬ್ ವಿವಿಯ ಕಾನೂನು ಪದವಿ ಪಡೆದು 1979ರಲ್ಲಿ ಎಲ್ಎಲ್ಎಂ ಪೂರ್ಣಗೊಳಿಸಿದರು. 1979ರಲ್ಲಿ ವಕೀಲ ವೃತ್ತಿ ಆರಂಭಿಸಿದ ಖೇಹರ್ 1992ರಲ್ಲಿ ಪಂಜಾಬ್ ಹೆಚ್ಚುವರಿ ಅಡ್ವೋಕೇಟ್ ಜನರಲ್ ಆದರು. 1999ರಲ್ಲಿ ಪಂಜಾಬ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ನೇಮಕವಾದ ಅವರು, 2009 ನವೆಂಬರ್ 29ರಂದು ಉತ್ತರಖಂಡ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X