ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಂಪಿ ಕನ್ನಡ ವಿವಿ ಮುನ್ನೋಟ ಕಾರ್ಯಾಗಾರ

By *ರೋಹಿಣಿ,ಬಳ್ಳಾರಿ
|
Google Oneindia Kannada News

UR Ananthmurthy
ಬಳ್ಳಾರಿ, .ಏ.11: 'ಕನ್ನಡನಾಡು ಮತ್ತು ಕನ್ನಡ ವಿಶ್ವವಿದ್ಯಾಲಯದ ಮುನ್ನೋಟ' ವಿಷಯದ ಮೇಲೆ ಸಮಾಲೋಚನಾ ಕಾರ್ಯಾಗಾರ ಏಪ್ರಿಲ್ 12 ರ ಸೋಮವಾರ ಮತ್ತು ಏಪ್ರಿಲ್ 13 ರ ಮಂಗಳವಾರ ಕನ್ನಡ ವಿಶ್ವವಿದ್ಯಾಲಯದ ಭುವನ ವಿಜಯದಲ್ಲಿ ನಡೆಯಲಿದೆ.

ಡಾ. ಯು.ಆರ್. ಅನಂತಮೂರ್ತಿ ಅವರು ಏಪ್ರಿಲ್ 12 ರಂದು ಈ ಕಾರ್ಯಾಗಾರವನ್ನು ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ವಿಶ್ರಾಂತ ಕುಲಪತಿ ಡಾ. ಚಂದ್ರಶೇಖರ ಕಂಬಾರ ಭಾಗವಹಿಸಲಿದ್ದಾರೆ. ಕುಲಪತಿ ಡಾ. ಎ. ಮುರಿಗೆಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

ಏಪ್ರಿಲ್ 12 ರಂದು ವಿಶ್ರಾಂತ ಕುಲಪತಿ ಡಾ. ಎಂ.ಎಂ. ಕಲಬುರ್ಗಿ ಅಧ್ಯಕ್ಷತೆಯಲ್ಲಿ ಸಮಾಲೋಚನೆ ಒಂದು'ಕನ್ನಡ ವಿಶ್ವವಿದ್ಯಾಲಯ ನಡೆದುಬಂದ ದಾರಿ' ಕುರಿತಾದ ಸಮಾಲೋಚನೆಯಲ್ಲಿ ಡಾ. ಹಿ.ಚಿ. ಬೋರಲಿಂಗಯ್ಯ ಇವರು 'ಕನ್ನಡ ವಿಶ್ವವಿದ್ಯಾಲಯವು ಕನ್ನಡ ನಾಡನ್ನು ಪರಿಭಾವಿಸಿಕೊಂಡ ಪರಿ' ಟಿಪ್ಪಣಿ ಹಾಗೂ ಡಾ. ರಹಮತ್ ತರೀಕೆರೆ ಅವರು 'ಕನ್ನಡ ವಿಶ್ವವಿದ್ಯಾಲಯದ ಸಂಶೋಧನಾ ನೆಲೆಗಳು' ಟಿಪ್ಪಣಿ ಮತ್ತು ಡಾ. ಕರೀಗೌಡ ಬೀಚನಹಳ್ಳಿ ಅವರು 'ಕನ್ನಡ ವಿಶ್ವವಿದ್ಯಾಲಯದ ಆಡಳಿತಾತ್ಮಕ ನೆಲೆಗಳು' ಕುರಿತಾಗಿ ಟಿಪ್ಪಣಿ ಮಂಡಿಸಲಿದ್ದಾರೆ.

ಸಂವಾದಕಾರರಾಗಿ ಡಾ. ಬಿ.ಎಂ. ಪುಟ್ಟಯ್ಯ, ಡಾ. ಮೋಹನ ಕುಂಟಾರ, ಡಾ. ಸಿ. ಮಹಾದೇವ, ಡಾ. ಎಚ್. ನಾಗವೇಣಿ, ಡಾ. ಅಮರೇಶ ನುಗಡೋಣಿ, ಡಾ.ವೀರೇಶ್ ಬಡಿಗೇರ, ಧರ್ಮವೀರ, ತುಕಾರಾಂ ನಾಯಕ ಭಾಗವಹಿಸಲಿದ್ದಾರೆ.

ಏ.13 ರ ಮಂಗಳವಾರ ಬೆಳಿಗ್ಗೆ 10 ಕ್ಕೆ 'ಕರ್ನಾಟಕದ ಸವಾಲು-ಸಾಧ್ಯತೆಗಳು ಮತ್ತು ಕನ್ನಡ ವಿಶ್ವವಿದ್ಯಾಲಯ' ಸಭೆ. ವಿಶ್ರಾಂತ ಕುಲಪತಿ ಡಾ. ಎಚ್.ಜೆ. ಲಕ್ಕಪ್ಪಗೌಡ ಅಧ್ಯಕ್ಷತೆ. ಕೋ. ಚನ್ನಬಸಪ್ಪ, ಕಡಿದಾಳ್ ಶಾಮಣ್ಣ, ಶೂದ್ರ ಶ್ರೀನಿವಾಸ, ಕೆ.ಟಿ. ಶಿವಪ್ರಸಾದ್, ಪ್ರೊ. ಎಂ.ಎಚ್. ಕೃಷ್ಣಯ್ಯ, ಗುರುಮೂರ್ತಿ ಪೆಂಡಕೂರು, ಡಾ. ಜಿ.ಕೆ .ಗೋವಿಂದರಾವ್, ಡಾ. ಕಾಳೇಗೌಡ ನಾಗವಾರ, ಡಾ. ಕೆ. ದುರ್ಗಾದಾಸ್, ಡಾ. ಬಂಜಗೆರೆ ಜಯಪ್ರಕಾಶ್, ಹೊನಕೆರೆ ನಂಜುಂಡೇಗೌಡ, ಬಿ.ಎಂ. ಕುಮಾರಸ್ವಾಮಿ, ಡಾ. ಪಾಂಡುರಂಗಬಾಬು, ಡಾ. ಶೈಲಜಾ ಹಿರೇಮಠ, ಡಾ. ಎಂ. ಉಷಾ, ರಮೇಶ ನಾಯಕ ಸಮಾಲೋಚಕರಾಗಿ ಭಾಗವಹಿಸಲಿದ್ದಾರೆ.

ಸಂವಾದಕರಾಗಿ ಡಾ. ಎಫ್.ಟಿ. ಹಳ್ಳಿಕೇರಿ, ಡಾ. ಕೆ. ರವೀಂದ್ರನಾಥ್, ಡಾ. ಸಿ.ಎಸ್. ವಾಸುದೇವನ್, ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಡಾ. ಚಲುವರಾಜು, ಡಾ. ಮಲ್ಲಿಕಾರ್ಜುನ ವಣೇನೂರು, ಡಾ. ತಾರಿಹಳ್ಳಿ ಹನುಮಂತಪ್ಪ, ಡಾ. ಎಂ. ಕೊಟ್ರೇಶ್, ಇಸ್ಮಾಯಿಲ್ ಜಬೀರ್, ಕೆ.ಸಿ. ಚೆನ್ನಮ್ಮ ಭಾಗವಹಿಸುವರು.

ಈ ಸಮಾಲೋಚನೆ ಕಾರ್ಯಾಗಾರದಲ್ಲಿ ವಿಶೇಷ ಆಹ್ವಾನಿತರಾಗಿ ಡಾ. ಬಿ. ಶೇಷಾದ್ರಿ, ದರೋಜಿ ಈರಮ್ಮ, ನಾ. ಡಿಸೋಜ, ರಂಜಾನ್ ದರ್ಗಾ, ಸಿ. ಚೆನ್ನಬಸವಣ್ಣ, ಹೆಚ್. ಗೋಪಾಲ್, ಡಾ. ಬಸವರಾಜ ಮಲಶೆಟ್ಟಿ, ರತನ್‌ಚಂದ್ ಜೈನ್, ಡಾ. ಮಲ್ಲಿಕಾ ಘಂಟಿ, ಪತ್ರಕರ್ತ ಪರಶುರಾಮ ಕಲಾಲ್, ಮುಕ್ತಿಯಾರ್ ಪಾಷಾ, ಜಂಬಯ್ಯ ನಾಯಕ್, ರಾಮಕೃಷ್ಣ, ಪಿ. ಅಬ್ದುಲ್ಲಾ, ಪೂಜಾರ್ ದುರುಗಪ್ಪ, ಡಾ. ಉಳ್ಳೇಶ್ವರ ಭಾಗವಹಿಸಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X