ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಷ್ಯಾ ವಿಮಾನ ಅಪಘಾತದಲ್ಲಿ 132 ಜನರ ಸಾವು

By Prasad
|
Google Oneindia Kannada News

Poland president Lech Kaczynski
ಸ್ಮೋಲೆನಸ್ಕ್ (ರಷ್ಯಾ), ಏ. 10 : ರಷ್ಯಾದಲ್ಲಿ ಸಂಭವಿಸಿದ ಭೀಕರ ವಿಮಾನ ಅಪಘಾತದಲ್ಲಿ ಪೋಲಂಡ್ ಅಧ್ಯಕ್ಷ ಲೇಚ್ ಕಾಜಿನಸ್ಕಿ ಸೇರಿದಂತೆ 132 ಜನ ಸಾವಿಗೀಡಾಗಿದ್ದಾರೆ. ಪಶ್ಚಿಮ ರಷ್ಯಾದಲ್ಲಿರುವ ಸ್ಮೋಲೆನಸ್ಕ್ ಏರ್ಪೋರ್ಟ್ ಬಳಿ ಈ ಅಪಘಾತ ಸಂಭವಿಸಿದೆ.

ವಿಮಾನ ಅಪಘಾತದಲ್ಲಿ ಯಾರೂ ಬದುಕಿ ಉಳಿದಿಲ್ಲ ಎಂದು ಸ್ಥಳೀಯ ರಾಜ್ಯಪಾಲರು ದೃಢಪಡಿಸಿದ್ದಾರೆ. ಪೋಲಂಡ್ ಅಧ್ಯಕ್ಷರು ತಮ್ಮ ಪತ್ನಿ ಮತ್ತು ಹಿರಿಯ ಅಧಿಕಾರಿಗಳ ಸಮೇತ ಕ್ಯಾಟಿನ್ ಹತ್ಯಾಕಾಂಡದ 70ನೇ ವಾರ್ಷಿಕೋತ್ಸವದಲ್ಲಿ ಪಾಲ್ಗೊಳ್ಳಲು ರಷ್ಯಾಗೆ ತೆರಳಿದ್ದರು. ಅವರು ಮಾಸ್ಕೋದಿಂದ ಸ್ಮೋಲೆನಸ್ಕ್ ಗೆ ತೆರಳುತ್ತಿದ್ದರು.

ದಟ್ಟ ಮುಂಜು ಇದ್ದ ಕಾರಣ ವಿಮಾನ ಅಪಘಾತಕ್ಕೀಡಾಗಿದೆ. ಗಿಡಕ್ಕೆ ತಾಗಿ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ವಿಮಾನ ಚೂರುಚೂರಾಗಿದೆ ಎಂದು ಸ್ಮೋಲೆನಸ್ಕ್ ಗವರ್ನರ್ ಸೆರ್ಗೆಯ್ ಅಂಟುಫೀವ್ ರಷ್ಯಾದ ಟಿವಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X