ತ್ವರಿತ ಅಲರ್ಟ್ ಗಳಿಗಾಗಿ
For Daily Alerts
ಎಂಬತ್ತೆರಡರ ಸ್ವಾತಂತ್ರ್ಯ ಹೋರಾಟಗಾರ ದಾಂಪತ್ಯಕ್ಕೆ
ಓಂಪ್ರಕಾಶ್ ಹಾಗೂ 50 ವರ್ಷದ ಗಾಸಿಯಾ ಬೇಗಂ ಮುದುವೆಯಾಗಲು ನಿರ್ಧರಿಸಿದ್ದು ಜೀವನದ ಉಳಿದ ಅವಧಿಯನ್ನು ಜತೆಯಾಗಿ ಬಾಳಲು ತೀರ್ಮಾನಿಸಿದ್ದಾರೆ. ಮದುವೆ ನೋಂದಣಿಗಾಗಿ ಕೆಲವು ದಿನಗಳ ಹಿಂದೆ ಇವರು ಅರ್ಜಿ ಸಲ್ಲಿಸಿದ್ದಾಗಿ ಉಪವಿಭಾಗೀಯ ಮೆಜಿಸ್ಟ್ರೇಟ್ ಘನಶ್ಯಾಂ ಸಿಂಗ್ ಹೇಳಿದ್ದಾರೆ.
ಸೀತಾಪುರ ಮೂಲದ ಗಾಸಿಯಾ ಅವರು ಘಾರಿಪುಕ್ತ ಗ್ರಾಮದ ಓಂಪ್ರಕಾಶ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಒಬ್ಬರನ್ನೊಬ್ಬ್ಬರು ಇಷ್ಟಪಟ್ಟಿರುವ ಅವರು ಮದುವೆಯಾಗಲು ಬಯಸಿದ್ದಾರೆ. ಆದರೆ ಓಂಪ್ರಕಾಶ್ ಮಕ್ಕಳಿಗೆ ಈ ಮದುವೆ ಇಷ್ಟವಿಲ್ಲ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾಗಿ ಅವರು ದೂರಿದ್ದಾರೆ. ಓಂಪ್ರಕಾಶ್ ಮಕ್ಕಳು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
Comments
Story first published: Saturday, April 10, 2010, 15:51 [IST]