ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಎಂಬತ್ತೆರಡರ ಸ್ವಾತಂತ್ರ್ಯ ಹೋರಾಟಗಾರ ದಾಂಪತ್ಯಕ್ಕೆ

By Rajendra
|
Google Oneindia Kannada News

Freedom fighter decides to tie the knot (file photo)
ಮುಜಾಫರ್ ನಗರ, ಏ.10: ಜೀವನದ ಅಂತಿಮ ದಿನಗಳನ್ನು ಎಣಿಸುತ್ತಿರುವ ಸ್ವಾತಂತ್ರ್ಯ ಹೋರಾಟಗಾರರೊಬ್ಬರು 82ರ ಇಳಿವಯಸ್ಸಿನಲ್ಲಿ ದಾಂಪತ್ಯ ಜೀವನಕ್ಕೆ ಅಡಿಯಿಡಲು ನಿರ್ಧರಿಸಿದ್ದಾರೆ. ಅಕ್ಕರೆಯಿಂದ ನೋಡಿಕೊಳ್ಳುತ್ತಿದ್ದ ಕೆಲಸದಾಕೆಯನ್ನು ಈ ವಯೋವೃದ್ಧ ವರಿಸುವುದಾಗಿ ತಿಳಿಸಿದ್ದಾರೆ.

ಓಂಪ್ರಕಾಶ್ ಹಾಗೂ 50 ವರ್ಷದ ಗಾಸಿಯಾ ಬೇಗಂ ಮುದುವೆಯಾಗಲು ನಿರ್ಧರಿಸಿದ್ದು ಜೀವನದ ಉಳಿದ ಅವಧಿಯನ್ನು ಜತೆಯಾಗಿ ಬಾಳಲು ತೀರ್ಮಾನಿಸಿದ್ದಾರೆ. ಮದುವೆ ನೋಂದಣಿಗಾಗಿ ಕೆಲವು ದಿನಗಳ ಹಿಂದೆ ಇವರು ಅರ್ಜಿ ಸಲ್ಲಿಸಿದ್ದಾಗಿ ಉಪವಿಭಾಗೀಯ ಮೆಜಿಸ್ಟ್ರೇಟ್ ಘನಶ್ಯಾಂ ಸಿಂಗ್ ಹೇಳಿದ್ದಾರೆ.

ಸೀತಾಪುರ ಮೂಲದ ಗಾಸಿಯಾ ಅವರು ಘಾರಿಪುಕ್ತ ಗ್ರಾಮದ ಓಂಪ್ರಕಾಶ್ ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದರು. ಒಬ್ಬರನ್ನೊಬ್ಬ್ಬರು ಇಷ್ಟಪಟ್ಟಿರುವ ಅವರು ಮದುವೆಯಾಗಲು ಬಯಸಿದ್ದಾರೆ. ಆದರೆ ಓಂಪ್ರಕಾಶ್ ಮಕ್ಕಳಿಗೆ ಈ ಮದುವೆ ಇಷ್ಟವಿಲ್ಲ. ತಮ್ಮ ಇಚ್ಛೆಗೆ ವಿರುದ್ಧವಾಗಿ ಮದುವೆ ನೋಂದಣಿಗೆ ಅರ್ಜಿ ಸಲ್ಲಿಸಿದ್ದಾಗಿ ಅವರು ದೂರಿದ್ದಾರೆ. ಓಂಪ್ರಕಾಶ್ ಮಕ್ಕಳು ಪೊಲೀಸ್ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X