ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಂಗಳೂರಲ್ಲಿ ಹುಲಿ ರಕ್ಷಿಸಿ ಜಾಗೃತಿ ಆಂದೋಲನ

By Prasad
|
Google Oneindia Kannada News

Save Tiger campaign in Mangaluru
ಮಂಗಳೂರು, ಏ. 9 : ಕರ್ನಾಟಕದಲ್ಲಿ ಹುಲಿಗಳ ಸಂತತಿ ಅಳಿವಿನ ಅಂಚಿನಲ್ಲಿದೆ. ಕಾಡುಗಳಲ್ಲಿ ಸ್ವಚ್ಛಂದವಾಗಿ ಅಲೆಯುವ ರಾಷ್ಟ್ರೀಯ ಪ್ರಾಣಿಯನ್ನು ಸಂರಕ್ಷಿಸದಿದ್ದರೆ ಇನ್ನು ಮುಂದೆ ಪ್ರಾಣಿ ಸಂಗ್ರಹಾಲಯಗಳಲ್ಲಿ ಮಾತ್ರ ಕಾಣಲು ಸಾಧ್ಯ. ಪ್ರಾಣಿ ಸಂಗ್ರಹಾಲಯದಲ್ಲಿ ಕೂಡ ಹುಲಿಗಳು ಸಂಪೂರ್ಣ ಸುರಕ್ಷಿತವಾಗಿಲ್ಲ ಎಂಬುದಕ್ಕೆ ಇತ್ತೀಚೆಗೆ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಆದ ಹುಲಿ ಹತ್ಯೆಯೇ ಕಾರಣ.

ಇದನ್ನು ಮನಗಂಡಿರುವ ಮೂರು ಸಂಸ್ಥೆಗಳು 'ಹುಲಿ ರಕ್ಷಿಸಿ' ಎಂಬ ಜಾಗೃತಿ ಆಂದೋಲನವನ್ನು ಏಪ್ರಿಲ್ 11, ಭಾನುವಾರದಂದು ಹಮ್ಮಿಕೊಂಡಿವೆ. ಬೆಂಗಳೂರಿನ ಜಿ.ಎನ್.ಎಸ್. ಯಾಮಿನಿ ಫೌಂಡೇಷನ್, ಮಂಗಳೂರಿನ ಲಯನ್ಸ್ ಕ್ಲಬ್ ಮತ್ತು ಸಂಗಮ್ ಫ್ರೆಂಡ್ಸ್ ಕ್ಲಬ್ ಗಳು ಜಂಟಿಯಾಗಿ ಈ ಅಭಿಯಾನಕ್ಕೆ ಚಾಲನೆ ನೀಡಲಿವೆ.

ಉದ್ಘಾಟನೆ : ಭಾನುವಾರ ಬೆಳಿಗ್ಗೆ 10.45ಕ್ಕೆ.
ಸ್ಥಳ : ಸಂಗಮ್ ಫ್ರೆಂಡ್ಸ್ ಕ್ಲಬ್ ಜೆಪ್ಪಿನ ಮೊಗರು, ಲಯನ್ಸ್ ಕ್ಲಬ್ ಹತ್ತಿರ, ಮಂಗಳೂರು.

ಮಹಾಬಲ ಶೆಟ್ಟಿ (ಅಧ್ಯಕ್ಷರು, ಲಯನ್ಸ್ ಕ್ಲಬ್, ಮಿಲಾಗ್ರೇಸ್, ಮಂಗಳೂರು), ಪುಷ್ಪರಾಜ್ ಶೆಟ್ಟಿ (ಉಪಾಧ್ಯಕ್ಷರು, ಸಂಗಮ್ ಫ್ರೆಂಡ್ಸ್ ಕ್ಲಬ್, ಜೆಪ್ಪಿನ ಮೊಗರು, ಮಂಗಳೂರು), ಶೋಭಾ ಎಂ.ಲೋಲನಾಥ್ (ಕಿರುತೆರೆ ನಟಿ ಹಾಗೂ ಕಾರ್ಯದರ್ಶಿ, ಜಿ.ಎನ್.ಎಸ್. ಯಾಮಿನಿ ಫೌಂಡೇಷನ್, ಬೆಂಗಳೂರು) ಇವರು ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X