ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತದಲ್ಲಿ ಫೇಸ್ ಬುಕ್ ಹಿಂದಿಕ್ಕಿದ ಆರ್ಕುಟ್

By Mahesh
|
Google Oneindia Kannada News

Orkut trumps Facebook in India: ComScore Study
ಬೆಂಗಳೂರು, ಏ.8: ವೆಬ್ ಲೋಕದ ಅಧಿಪತ್ಯಕ್ಕಾಗಿ ಸಾಮಾಜಿಕ ಜಾಲತಾಣಗಳಾದ ಆರ್ಕುಟ್ ಹಾಗೂ ಫೇಸ್ ಬುಕ್ ಜಟಾಪಟಿಯಲ್ಲಿ ಕೊನೆಗೂ ಆರ್ಕುಟ್ ಕೊಂಚ ಮೇಲುಗೈ ಸಾಧಿಸಿದೆ. ವಿಶ್ವದೆಲ್ಲೆಡೆ ಫೇಸ್ ಬುಕ್ ತನ್ನ ಜನಪ್ರಿಯತೆಯನ್ನು ಕಾಯ್ದುಕೊಂಡಿದ್ದರೂ, ಭಾರತದಲ್ಲಿ ಆರ್ಕುಟ್ ತನ್ನ ವೆಬ್ ಜಾಲವನ್ನು ಇನ್ನಷ್ಟು ಹರಡುತ್ತಾ ಹೆಚ್ಚೆಚ್ಚು ಜನರಿಗೆ ಹತ್ತಿರವಾಗಿದೆ ಎನ್ನುತ್ತದೆ ಸಮೀಕ್ಷೆ.

ಯಾವ ಸಮಾಜಿಕ ವೆಬ್ ತಾಣದಲ್ಲಿ ಹೆಚ್ಚು ಸಂಚಾರ ದಟ್ಟಣೆ ಅಧಿಕ ಎಂಬುದನ್ನು ನಿರ್ಧರಿಸಲು ಯುಕೆ ಮೂಲದ ಕಾಮ್ ಸ್ಕೋರ್ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ ಭಾರತದಲ್ಲಿ ಫೇಸ್ ಬುಕ್ ಗಿಂತ ಆರ್ಕುಟ್ ಬಳಕೆದಾರರು ಹೆಚ್ಚಾಗಿದ್ದಾರೆ ಎಂದು ತಿಳಿದು ಬಂದಿದೆ.

ಏಷ್ಯಾ ಪೆಸಿಫಿಕ್ ರಾಷ್ಟ್ರಗಳಲ್ಲಿ ಕಾಮ್ ಸ್ಕೋರ್ ನಡೆಸಿದ ಸಮೀಕ್ಷೆಯಂತೆ ಶೇ.46.8 ಜಾಲಿಗರು ಗೂಗಲ್ ಸ್ವಾಮ್ಯದ ಆರ್ಕುಟ್ ವೆಬ್ ತಾಣದಲ್ಲಿ ವಿಹರಿಸುತ್ತಾರಂತೆ. ಆದರೆ, ಫೇಸ್ ಬುಕ್ ವಿಶ್ವಮಟ್ಟದಲ್ಲಿ ತನ್ನ ಹಿಡಿತ ಕಾಯ್ದುಕೊಂಡಿದೆ. ಫಿಲಿಫೈನ್ಸ್(84.5%), ಇಂಡೋನೇಷಿಯಾ(84.9%), ಸಿಂಗಪುರ(72.1 %) ಹೀಗೆ ಫೇಸ್ ಬುಕ್ ಬಳಕೆದಾರರ ಪಟ್ಟಿ ಬೆಳೆಯುತ್ತದೆ. ಆರ್ಕುಟ್, ಫೇಸ್ ಬುಕ್ ಅಲ್ಲದೆ, ತೈವಾನ್ ನಲ್ಲಿ ವ್ರೆಂಚ್ .ಸಿಸಿ , ದಕ್ಷಿಣ ಕೊರಿಯಾದಲ್ಲಿ ಸೈವಲ್ರ್ಡ್, ಜಪಾನಿನಲ್ಲಿ ಮಿಎಕ್ಸಿ ತಾಣಗಳು ಜನಪ್ರಿಯವಂತೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X