ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಲಿನ ದರ ಹೆಚ್ಚಳಕ್ಕೆ ಮುಹೂರ್ತವಿಟ್ಟ ಸಿಎಂ

By Mahesh
|
Google Oneindia Kannada News

Yeddyurappa hints at hike in nandini milk price
ಮೈಸೂರು, ಏ.6: ಬಿಬಿಎಂಪಿ ಚುನಾವಣೆ ನಂತರ ನೀರಿನ ದರ ಏರಿಕೆ ಮಾಡಿದ ಬೆನ್ನಲ್ಲೇ ಹಾಲಿನ ದರ ಏರಿಕೆ ಕುರಿತಂತೆ ಇನ್ನೆರಡು ದಿನಗಳಲ್ಲಿ ನಿರ್ಧಾರ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ತಿಳಿಸಿದರು.

ದರ ಏರಿಕೆಯಿಂದ ಬರುವ ಹೆಚ್ಚುವರಿ ಹಣವನ್ನು ಹಾಲು ಉತ್ಪಾದಕರಿಗೆ ನೀಡಿ ಹೈನುಗಾರಿಕೆ ಅಭಿವೃದ್ಧಿಗೆ ಪ್ರೋತ್ಸಾಹ ಕೊಡುವ ಉದ್ದೇಶ ನಮಗಿದೆ ಎಂದು ಹೇಳಿದರು. ಹಾಲಿನ ದರ ಹೆಚ್ಚಳಕ್ಕೆ ಮೊದಲೇ ತಾತ್ವಿಕ ಒಪ್ಪಿಗೆ ನೀಡಲಾಗಿತ್ತಾದರೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಚುನಾವಣೆಯ ಕಾರಣ ತಡೆಹಿಡಿಯಲಾಗಿತ್ತು. ಈಗ ಮತಹಾಕಿ ಗೆಲ್ಲಿಸಿಕೊಟ್ಟ ಬೆಂಗಳೂರು ಜನತೆಯೇ ಬಿಜೆಪಿ ಸರಕಾರಕ್ಕೆ ಹಾಲಿನ ದರ ಏರಿಕೆಗೆ ಲೈಸೆನ್ಸ್ ನೀಡಿದಂತಾಗಿದೆ. ನೀರಿನ ಜೊತೆಗೆ ಹಾಲಿನ ದರವೂ ಏರುತ್ತಿರುವುದರಿಂದ ಬಡಜನತೆಗೆ ದುಬಾರಿ ಹಾಲಿನ ಜೊತೆಗೆ ನೀರನ್ನು ಬೆರೆಸಿ ಸೇವಿಸುವ ಅವಕಾಶವೂ ಇಲ್ಲದಂತಾಗಲಿದೆ.

ಮೈಸೂರು ಜಿಲ್ಲೆಗೆ ಉಸ್ತುವಾರಿ ಸಚಿವರನ್ನು ಶೀಘ್ರದಲ್ಲೇ ನೇಮಿಸಲಾಗುವುದು, ಸದ್ಯಕ್ಕೆ ಸಚಿವ ಸಂಪುಟ ವಿಸ್ತರಣೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಆದರೆ, ಯಾರನ್ನು ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಗುಟ್ಟನ್ನು ಸಿಎಂ ಬಿಟ್ಟುಕೊಡಲಿಲ್ಲ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿ ಶೋಭಾ ಕರಂದ್ಲಾಜೆ ಅವರು ಈ ಮುಂಚೆ ಸಮರ್ಥವಾಗಿ ಕಾರ್ಯ ನಿರ್ವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X