ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಜೀವ ಹಂತಕಿ ನಳಿನಿ ಬಿಡುಗಡೆ ನಿರಾಕರಣೆ

By Mrutyunjaya Kalmat
|
Google Oneindia Kannada News

Nalini Sridharan
ಚೆನ್ನೈ, ಏ. 6 : ಮಾಜಿ ಪ್ರಧಾನಮಂತ್ರಿ ದಿವಂಗತ ರಾಜೀವ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ನಳನಿ ಶ್ರೀಧರನ್ ಅವರನ್ನು ಅವಧಿಗೆ ಮುಂಚೆ ಬಿಡುಗಡೆ ಮಾಡಬೇಕೆನ್ನುವ ಮನವಿಯನ್ನು ಮದ್ರಾಸ್ ಹೈಕೋರ್ಟ್ ಮತ್ತೊಮ್ಮೆ ತಿರಸ್ಕರಿಸಿದೆ. ಈ ಮೂಲಕ ನ್ಯಾಯಾಲಯ ಸತತ ಮೂರು ಬಾರಿ ನಳನಿ ಅವರ ಬಿಡುಗಡೆಯನ್ನು ನ್ಯಾಯಾಲಯ ನಿರಾಕರಿಸಿದೆ.

ನ್ಯಾಯಮೂರ್ತಿ ಎಲಿಫ್ ಧರ್ಮರಾಜ್ ಮತ್ತು ಕೆಕೆ ಶಶಿಧರನ್ ಅವರನ್ನು ಒಳಗೊಂಡ ವಿಭಾಗೀಯ ಪೀಠ, 44 ವರ್ಷದ ನಳನಿ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿ ಶಿಕ್ಷೆಯ ಅವಧಿಗೆ ಮುನ್ನ ಬಿಡುಗಡೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ. ನಳನಿ ಎಂಬ ಅಪರಾಧಿಗೆ ಯಾವ ಮಾನದಂಡದ ಮೇಲೆ ಶಿಕ್ಷೆಯ ಅವಧಿಗೆ ಮುಂಚಿತವಾಗಿ ಬಿಡುಗಡೆ ಮಾಡಬೇಕು. ಅವಧಿಗೂ ಮುನ್ನ ನನ್ನನ್ನು ಬಿಡುಗಡೆಗೊಳಿಸಿ ಎಂದು ಕೇಳುವ ಹಕ್ಕು ಕೂಡಾ ಆಕೆಗಿಲ್ಲ. ಮಾಜಿ ಪ್ರಧಾನಿಯೊಬ್ಬರನ್ನು ಹತ್ಯೆಗೈದಿರುವುದು ಪೂರ್ವನಿಯೋಜಿತ ಸಂಚು. ಇದರಿಂದ ಬಿಡುಗಡೆ ಅಸಾಧ್ಯ ಎಂದು ಹೈಕೋರ್ಟ್ ಹೇಳಿದೆ.

1991 ಮೇ 21 ರಂದು ತಮಿಳುನಾಡಿನ ಶ್ರೀಪೆರಂಬದೂರಿನಲ್ಲಿ ಎಲ್ ಟಿಟಿಇ ನಡೆಸಿದ ಮಾನವ ಬಾಂಬ್ ಮೂಲಕ ಮಾಜಿ ಪ್ರಧಾನಮಂತ್ರಿ ರಾಜೀವ ಗಾಂಧಿ ಅವರನ್ನು ಹತ್ಯೆಗೈಯಲಾಗಿತ್ತು. ಎಲ್ ಟಿಟಿಇ ಪ್ರಭಾಕರನ್ ಪ್ರಮುಖ ರೂವಾರಿಯಾಗಿದ್ದರೆ, ಶಿವರಸನ್, ಶುಭಾ ಸೇರಿದಂತೆ 9 ಮಂದಿ ಹಂತಕರನ್ನು ಬೆಂಗಳೂರು ಪೊಲೀಸರು ಕೋಣನಕುಂಟೆಯಲ್ಲಿ ಹತ್ಯೆಗೈದಿದ್ದರು. ರಾಜೀವ ಹತ್ಯೆಗೆ ನಳನಿ ಸಹಕರಿಸಿದ್ದರಿಂದ ಆಕೆಗೆ ಜೀವಾವಧಿ ಶಿಕ್ಷೆಗೆ ಒಳಗಾಗಿದ್ದಾರೆ. ಸುಮಾರು 18 ವರ್ಷದಿಂದ ಅವರು ಜೈಲಿನಲ್ಲಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X