• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪಾಲಿಕೆಯಲ್ಲಿ ಪ್ರಮೀಳೆಯರ ಕಾರಬಾರು

By Mrutyunjaya Kalmat
|

ಬೆಂಗಳೂರು, ಏ. 6 : ಮಹಿಳಾ ಮೀಸಲಾತಿ ಜಾರಿಗೆ ಸಂಬಂಧಿಸಿದಂತೆ ತೀವ್ರ ಪರ ವಿರೋಧಗಳ ಬೆನ್ನಲ್ಲೇ ಬೆಂಗಳೂರಿನ ಮತದಾರರು ಮಾತ್ರ ಈ ಬಾರಿ ಮಹಿಳಾ ಮತದಾರರಿಗೆ ಆಶೀರ್ವಾದ ಮಾಡಿದ್ದಾರೆ. ಬಿಬಿಎಂಪಿಯ 198 ವಾರ್ಡ್ ಗಳಲ್ಲಿ ಸುಮಾರು 87 ವಾರ್ಡ್ ಗಳಲ್ಲಿ ಮಹಿಳಾ ಕಾರ್ಪೋರೇಟರ್ ಗಳು ಆಯ್ಕೆಯಾಗಿರುವುದು ಈ ಚುನಾವಣೆಯ ವಿಶೇಷವಾಗಿದೆ.

2001 ರಲ್ಲಿ ಕೇವಲ 17 ಮಹಿಳಾ ಕಾರ್ಪೋರೇಟರ್ ಗಳನ್ನು ಬೆಂಗಳೂರು ಪಾಲಿಕೆ ಇದೀಗ 87 ಗಡಿ ತಲುಪಿರುವುದು ದೊಡ್ಡ ಸಾಧನೆಯಾಗಿದೆ. 87 ಮಹಿಳಾ ಕಾರ್ಪೋರೇಟರ್ ಗಳಲ್ಲಿ 67 ವಾರ್ಡ್ ಗಳಿಂದ ಮೀಸಲು ಮಹಿಳಾ ಅಭ್ಯರ್ಥಿ ಗೆಲುವು ಸಾಧಿಸಿದ್ದರೆ, ಉಳಿದ 19 ವಾರ್ಡ್ ಗಳಲ್ಲಿ ಸಾಮಾನ್ಯ ಮಹಿಳಾ ಅಭ್ಯರ್ಥಿ ವಿಜಯದ ನಗೆಬೀರಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಒಟ್ಟು 1,343 ಅಭ್ಯರ್ಥಿಗಳು ಕಣಕ್ಕಿಳಿದಿದ್ದರೆ, ಅದರಲ್ಲಿ ಸ್ವತಂತ್ರ ಅಭ್ಯರ್ಥಿ ಸೇರಿ 438 ಮಹಿಳಾ ಅಭ್ಯರ್ಥಿಗಳು ಅಖಾಡದಲ್ಲಿರು. ಆಯ್ಕೆಯಾಗಿರುವ ಮಹಿಳಾ ಅಭ್ಯರ್ಥಿಗಳಲ್ಲಿ ಹೊಂಗಸಂದ್ರದ ಬಿಜೆಪಿ ಅಭ್ಯರ್ಥಿ ಸುಕಂದಾ ರಾಮಚಂದ್ರ ಅವರು 13,218 ಮತಗಳಿಂದ ಜಯದಾಖಲಿಸಿ ಪಾಲಿಕೆ ಪ್ರವೇಶಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X