ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹ್ಯಾಟ್ಸ್ ಆಫ್ ಬೆಂಗಳೂರಿಯನ್ಸ್, ಸಿಎಂ

By Mrutyunjaya Kalmat
|
Google Oneindia Kannada News

Yeddyurappa
ಬೆಂಗಳೂರು, ಏ. 5 : ಬಿಬಿಎಂಪಿ ಚುನಾವಣೆಯಲ್ಲಿ ಜಯಭೇರಿ ಬಾರಿಸಿದ್ದಕ್ಕೆ ಅತೀವ ಸಂತಸ ವ್ಯಕ್ತಪಡಿಸಿದ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬೆಂಗಳೂರಿಗರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಬಿಜೆಪಿ ಸರಕಾರದ ಆಡಳಿತವನ್ನು ಬೆಂಬಲಿಸಿರುವ ಮತದಾರ, ಅಭಿವೃದ್ಧಿಗೆ ಅಡ್ಡಗಾಲು ಹಾಕುತ್ತಿರುವ ಪಕ್ಷಗಳಿಗೆ ಮಂಗಳಾರತಿ ಎತ್ತಿದ್ದಾರೆ. ಇನ್ನು ಮುಂದಾದರೂ ಆ ಪಕ್ಷ ನಾಯಕರು ಇದರಿಂದ ಪಾಠ ಕಲಿಯಬೇಕು ಕಿವಿ ಮಾತು ಹೇಳಿದ್ದಾರೆ.

ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ ಬಹಮತ ಪಡೆದ ನಂತರ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮುಂದಿನ ದಿನಗಳಲ್ಲಾದರೂ ಅಭಿವೃದ್ಧಿ ಕಾರ್ಯಗಳಿಗೆ ಕಲ್ಲು ಹಾಕುವ ಕೆಲಸ ಮಾಡಬೇಡಿ ಎಂದು ಅವರು ಪ್ರತಿಪಕ್ಷಗಳಲ್ಲಿ ಮನವಿ ಮಾಡಿಕೊಂಡರು.

ಬೆಂಗಳೂರನ್ನು ಜಾಗತಿಕ ಮಹಾನಗರವನ್ನಾಗಿ ಮಾಡುವುದು ಬಿಜೆಪಿ ಸರಕಾರದ ಗುರಿ. ನೂತನವಾಗಿ ಆಯ್ಕೆಯಾಗಿರುವ ಕಾರ್ಪೋರೇಟರ್ ಗಳು, ಶಾಸಕರು, ಸಂಸದರ ಸಹಭಾಗಿತ್ವದಲ್ಲಿ ಈ ಗುರಿ ಈಡೇರಿಸಲು ಶ್ರಮವಹಿಸುತ್ತೇವೆ ಎಂದರು.

ಬಿಬಿಎಂಪಿ, ಬಿಡಿಎ ಸಂಸ್ಥೆಗಳು ಸೇರಿದಂತೆ ವಿವಿಧ ಇಲಾಖೆಯಲ್ಲಿ ಸುಮಾರು 6 ಸಾವಿರ ಕೋಟಿ ಕಾಮಗಾರಿ ಪ್ರಗತಿಯಲ್ಲಿದೆ. ಮುಂದಿನ ಮೂರು ವರ್ಷದೊಳಗೆ 22,500 ಕೋಟಿ ರುಪಾಯಿ ಕಾಮಗಾರಿಗಳನ್ನು ಇಷ್ಟರಲ್ಲೇ ಅನುಷ್ಠಾನಗೊಳಿಸಲಾಗುವುದು. ಮಹಾನಗರದ ಚಿತ್ರಣವನ್ನೇ ಬದಲಾಯಿಸುತ್ತೇವೆ. ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು 22 ತಿಂಗಳಲ್ಲಿ ಸಾಕಷ್ಟು ಅಭಿವೃದ್ದಿ ಕಾರ್ಯಗಳನ್ನು ಮಾಡಿದ್ದರಿಂದ ಬೆಂಗಳೂರಿನ ಜನ ಬಿಜೆಪಿ ಬೆಂಬಲಿಸಿದ್ದಾರೆ. ಈ ಮೂಲಕ ಅಭಿವೃದ್ದಿ ಪರ ಎಂಬುದನ್ನು ಮತದಾರ ಸಾಬೀತಾಪಡಿಸಿದ್ದಾರೆ.

ನಗರ ಪ್ರದೇಶಗಳ ಅಭಿವೃದ್ಧಿ ವಿರೋಧಿ ಜೆಡಿಎಸ್ ಬಿಬಿಎಂಪಿ ಚುನಾವಣೆಯಲ್ಲಿ ಹೀನಾಯ ಸೋಲು ಅನುಭವಿಸಿದೆ. ನೈಸ್ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಗಾಲು ಹಾಕುತ್ತಿರುವ ದೇವೇಗೌಡರಿಗೆ ಈ ಫಲಿತಾಂಶ ಸೂಕ್ತ ಪಾಠ ಕಲಿಸಿದೆ. ಇನ್ನಾದರೂ ಆ ಪಕ್ಷದ ನಾಯಕರು ಅಭಿವೃದ್ಧಿ ಕಾಮಗಾರಿಗಳಿಗೆ ಬೆಂಬಲ ನೀಡಬೇಕು. ಇದು ನನ್ನ ವಿನಮ್ರ ಮನವಿ ಎಂದು ಯಡಿಯೂರಪ್ಪ ಹೇಳಿದರು.

ಗೆಲುವಿನ ಮಾಲೆ ಧರಿಸಿದವರು : ವಾರ್ಡ್ 1ರಿಂದ 100
ಗೆಲುವಿನ ಮಾಲೆ ಧರಿಸಿದವರು : ವಾರ್ಡ್ 101ರಿಂದ 198

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X