ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಚುನಾವಣೆ : ಮತಎಣಿಕೆ ಆರಂಭ

By Prasad
|
Google Oneindia Kannada News

BBMP election results
ಬೆಂಗಳೂರು, ಏ. 5 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ ನಡೆದ ಪ್ರಪ್ರಥಮ ಚುನಾವಣೆಯ ಫಲಿತಾಂಶ ಏಪ್ರಿಲ್ 5ರ ಸೋಮವಾರ ಪ್ರಕಟವಾಗಲಿದೆ. ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಬೆಂಗಳೂರಿನ ಚುಕ್ಕಾಣಿ ಹಿಡಿಯಲು ತುದಿಗಾಲಲ್ಲಿ ನಿಂತಿವೆ.

ಜೊತೆಗೆ ಈ ಚುನಾವಣೆ ಕೂಡ ಬೆಂಗಳೂರು ಮಹಾನಗರದ ಜನತೆಗೆ ಕೂಡ ಅತ್ಯಂತ ಮಹತ್ವದ ಚುನಾವಣೆಯಾಗಿತ್ತು. ಮೂಲಸೌಕರ್ಯಗಳಿಂದ ವಂಚಿತವಾಗಿರುವ ಜನತೆಗೆ ಸೌಕರ್ಯಗಳನ್ನು ದಕ್ಕಿಸಿಕೊಳ್ಳಲು ಈ ಚುನಾವಣೆ ಅಗತ್ಯವಾಗಿತ್ತು. ವಿಪರ್ಯಾಸವೆಂಬಂತೆ ಮಹತ್ವದ ಮತದಾನದ ದಿನ ಬೆಂಗಳೂರಿನ ಜನತೆಯೇ ಮತ ಹಾಕುವಲ್ಲಿ ಅಷ್ಟೊಂದು ಆಸಕ್ತಿ ತೋರಿರಲಿಲ್ಲಿ. ಒಟ್ಟಾರೆ ಪ್ರತಿಶತ 44ರಷ್ಟು ಮಾತ್ರ ಮತದಾನವಾಗಿ ಬೆಂಗಳೂರಿರ ನಿರ್ಲಕ್ಷತೆಗೆ ಕನ್ನಡಿ ಹಿಡಿದಿತ್ತು. ಏನೇ ಆದರೂ, ಆಯ್ಕೆಯಾದ ಪ್ರತಿನಿಧಿಯಿಂದ ಕೆಲಸ ತೆಗೆದುಕೊಳ್ಳುವ ಗುರುತರ ಜವಾಬ್ದಾರಿ ಇನ್ನು ಬೆಂಗಳೂರಿನ ನಾಗರಿಕರ ಮೇಲಿದೆ.

ನಗರದ 28 ಕೇಂದ್ರಗಳಲ್ಲಿ ಮತ ಎಣಿಕೆ ಈಗಾಗಲೆ ಪ್ರಾರಂಭವಾಗಿದೆ. 198 ವಾರ್ಡುಗಳಲ್ಲಿ ನಿಂತಿದ್ದ ಅಭ್ಯರ್ಥಿಗಳ ಹಣೆಬರಹ ಕೆಲವೇ ಗಂಟೆಗಳಲ್ಲಿ ನಿರ್ಧಾರವಾಗಲಿದೆ. ಒಟ್ಟು ನಾಲ್ಕು ಹಂತಗಳಲ್ಲಿ ಮತಎಣಿಕೆ ನಡೆಯಲಿದೆ. ಮಧ್ಯಾಹ್ನ 12ರ ಹೊತ್ತಿಗೆ ಸಂಪೂರ್ಣ ಚಿತ್ರಣ ದೊರೆಯಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X