• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಬಿಬಿಎಂಪಿ ಫಲಿತಾಂಶ : ಅಂಕೆ ಸಂಖ್ಯೆಗಳ ಆಟ ಆರಂಭ

By Prasad
|

ಬೆಂಗಳೂರು, ಏ. 5 : ಬಿಬಿಎಂಪಿ ಗದ್ದುಗೆ ಹಿಡಿಯುವ ಓಟದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷ ಮತ್ತು ವಿರೋಧಪಕ್ಷ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ.

ಬೆಳಿಗ್ಗೆ 10 ಗಂಟೆ ಹೊತ್ತಿಗೆ ಪ್ರಕಟಿಸಲಾದ 60 ವಾರ್ಡುಗಳ ಪೈಕಿ ಬಿಜೆಪಿ 33 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡಿದ್ದು, ಕಾಂಗ್ರೆಸ್ ಎರಡೇ ಹೆಜ್ಜೆ ಹಿಂದಿದೆ. ಕಾಂಗ್ರೆಸ್ 26 ವಾರ್ಡುಗಳಲ್ಲಿ ಜಯ ಸಾಧಿಸಿದೆ. ಜೆಡಿಎಸ್ 7 ಸ್ಥಾನಗಳನ್ನು ತನ್ನದಾಗಿಸಿಕೊಂಡಿದೆ.

ಮೈತ್ರಿಯ ಇಂಗಿತ ವ್ಯಕ್ತಪಡಿಸಿದ್ದ ಕಾಂಗ್ರೆಸ್ ಮತ್ತು ಜೆಡಿಎಸ್ ಒಂದಾದರೆ ಬಿಜೆಪಿಗೆ ಗದ್ದುಗೆಯೇರುವುದು ಸ್ವಲ್ಪ ಕಷ್ಟದ ಮಾತಾಗಲಿದೆ. ಮಧ್ಯಾಹ್ನ 12ರ ಹೊತ್ತಿಗೆ ಸ್ಪಷ್ಟ ಚಿತ್ರಣ ದೊರೆಯಲಿದೆ.

ಅಧಿಕಾರಕ್ಕೆ ಬರಲು 126 ಸ್ಥಾನಗಳನ್ನು ಯಾವುದೇ ಪಕ್ಷ ಗೆಲ್ಲಬೇಕು. ಕೊನೆಗೆ ವಿಧಾನಸಭೆ, ವಿಧಾನಪರಿಷತ್ ಮತ್ತು ಲೋಕಸಭಾ ಸದಸ್ಯರ ಮತಗಳು ಕೂಡ ನಿರ್ಣಾಯಕವಾಗಲಿವೆ. ಈ ಮತಗಳ ಬಲಾಬಲ ಹೀಗೆದೆ. ಬಿಜೆಪಿ 31, ಜೆಡಿಎಸ್ 15, ಕಾಂಗ್ರೆಸ್ 6. ಅಧಿಕಾರಕ್ಕೆ ಬಿಜೆಪಿ ಪಕ್ಷ ಬರಬೇಕಾದರೆ 95 ಸ್ಥಾನಗಳನ್ನು ಗೆಲ್ಲಲೇಬೇಕು. ಕಾಂಗ್ರೆಸ್ ಮತ್ತು ಜೆಡಿಎಸ್ ಜಂಟಿಯಾಗಿ 105 ಸ್ಥಾನಗಳನ್ನು ಗೆದ್ದರೆ ಮೇಯರ್ ಪೀಠ ಮೈತ್ರಕೂಟಕ್ಕೆ ಲಭಿಸಲಿದೆ. ಇದು ಸದ್ಯದ ಲೆಕ್ಕಾಚಾರ.

ಬಿಬಿಎಂಪಿ ಚುನಾವಣಾ : ಫಲಿತಾಂಶ (1ರಿಂದ 100)

ಬಿಬಿಎಂಪಿ ಚುನಾವಣಾ : ಫಲಿತಾಂಶ (101ರಿಂದ 198)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X