ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯನನ್ನೇ ಸಾನಿಯಾ ವರಿಸಲಿ: ಸೇನೆ

By Mahesh
|
Google Oneindia Kannada News

Sania mirza
ಮುಂಬೈ, ಏ.2:ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಯಾವ ದೇಶದ ಪರ ಆಡಬೇಕು ಎಂಬುದು ವಿವಾದವಾಗಿರುವ ಬೆನ್ನಲ್ಲೇ, ಸಾನಿಯಾ ಮಿರ್ಜಾ ಅವರು ಭಾರತೀಯ ವರನನ್ನು ಮದುವೆಯಾಗಲಿ ಎಂದು ಶಿವಸೇನೆ ತನ್ನ ಮುಖವಾಣಿ ಸಾಮ್ನಾ ಪತ್ರಿಕೆಯಲ್ಲಿ ತಾಕೀತು ಮಾಡಿದೆ.ಭಾರತದ ಅಸಂಖ್ಯಾತ ಅಭಿಮಾನಿಗಳ ಭಾವನೆಗಳಿಗೆ ಸಾನಿಯಾ ಬೆಲೆ ಕೊಡುವುದೆ ಆದರೆ, ಆಕೆ ಭಾರತದ ಪರ ಆಡಬೇಕು ಹಾಗೂ ಮಲ್ಲಿಕ್ ಜೊತೆ ಮದುವೆ ಆಗಬಾರದು ಎಂದು ಶಿವಸೇನೆ ಕಾರ್ಯಕರ್ತ ನರ್ವೆಕರ್ ಹೇಳಿದ್ದಾರೆ.

ಭಾರತದ ಪರ ಟೆನ್ನಿಸ್ ಆಡುವ ಇಚ್ಛೆ ಸಾನಿಯಾಗೆ ಇದ್ದರೆ, ಆಕೆ ಭಾರತೀಯನನ್ನು ಮದುವೆ ಆಗಬೇಕು. ನಿಜವಾದ ಭಾರತೀಯಳೇ ಆಗಿದ್ದರೆ ಪಾಕಿಸ್ತಾನಿಯ ಮೇಲೆ ಮೋಹಗೊಳ್ಳುತ್ತಿರಲಿಲ್ಲ ಎಂದು ಸೇನೆ ಕಿಡಿಕಾರಿದೆ. ಮದುವೆ ನಂತರ ಗಂಡನ ಮನೆ ಸೇರುವುದರಿಂದ ಭಾರತ ಪರ ಟೆನ್ನಿಸ್ ಆಡಲು ಹೇಗೆ ಸಾಧ್ಯ? ಪಾಕಿಸ್ತಾನಿ ಪ್ರಜೆಯಾಗಿ ಭಾರತಕ್ಕೆ ಆಡುವುದೆಂದರೆ ಅದು ಅಸಾಧ್ಯದ ಮಾತು.ಸಾನಿಯಾ ಇಷ್ಟಬದಂತೆ ಆಡಲು ಭಾರತ ದೇಶವೇನು ಟೆನ್ನಿಸ್ ಆಟದ ಚೆಂಡಲ್ಲ ಎಂದು ಸಾಮ್ನಾದಲ್ಲಿ ಹೇಳಲಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X