ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮೊಬೈಲನ್ನು ಸ್ಮಾರ್ಟ್ ಫೋನ್ ಮಾಡಿಕೊಳ್ಳಿ

By * ಮಲೆನಾಡಿಗ
|
Google Oneindia Kannada News

Blackmail VAS for your mobiles
ಬೆಂಗಳೂರು, ಏ.2: ಮೊಬೈಲ್ ಫೋನ್ ನಲ್ಲಿ ಯಾವುದೇ ಕಿರಿಕಿರಿ ಇಲ್ಲದೆ ಇಮೇಲ್ ಓದಿ, ಪ್ರತಿಕ್ರಿಯಿಸುವ ಸೌಲಭ್ಯ ಲಭ್ಯವಾದರೆ ಯಾರು ತಾನೆ ಬೇಡ ಎನ್ನುವುದಿಲ್ಲ. ಬೆಂಗಳೂರು ಮೂಲದ ಮೊಬೈಲ್ ಅನ್ವಯ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಫಿಫ್ತ್ ಸಿ ಸಲ್ಯೂಷನ್ಸ್ (Fifth C) ಈ ಸೌಲಭ್ಯವನ್ನು ಗ್ರಾಹಕರಿಗೆ ನೀಡುತ್ತಿದೆ.

ಜಿಪಿಆರ್ ಎಸ್(GPRS) , ಮೊಬೈಲ್ ಇಂಟರ್ ನೆಟ್ ಯೋಜನೆ ಅಥವಾ ದುಬಾರಿ ವೆಚ್ಚದ ಸ್ಮಾರ್ಟ್ ಫೋನ್ ಇಲ್ಲದಿರುವ ಅನೇಕ ಗ್ರಾಹಕರಿಗೆ ಬ್ಲಾಕ್ ಮೇಲ್ ಎಂಬ ಮೌಲ್ಯಾಧಾರಿತ ಸೇವೆ(VAS) ವರದಾನವಾಗಲಿದೆ.

ಎಲ್ಲಿ ಲಭ್ಯ? ಏನು ಉಪಯೋಗ: ಬ್ಲಾಕ್ ಮೇಲ್ ಸೇವೆ ಸದ್ಯಕ್ಕೆ ಯೂನಿವರ್ಸೆಲ್ ಹಾಗೂ ಸಂಗೀತಾ ಮೊಬೈಲ್ ಮಳಿಗೆಗಳಲ್ಲಿ ಲಭ್ಯವಿದೆ. ಕೆಫೆ ಕಾಫಿ ಡೇ ಅಥವಾ ದುಬಾರಿ ಕಾಫಿ ಪ್ರಿಯರ ಒಂದು ಕಪ್ ಕಾಫಿ ಬೆಲೆ ತೆತ್ತರೆ ನಿಮ್ಮ ಫೋನ್ ಗೆ ಬ್ಲಾಕ್ ಮೇಲ್ ಸೇವೆ ಲಭ್ಯ ಎಂದು ಸಂಸ್ಥೆ ಜಾಹೀರಾತು ನೀಡುತ್ತಿದೆ.

ಸುಮಾರು 49 ರು ನೀಡಿ ಜಿಪಿಆರ್ ಸಿ ಅಥವಾ ಸ್ಮಾರ್ಟ್ ಫೋನ್ ನಲ್ಲಿ ಸಿಗಬಹುದಾದ ಸೌಲಭ್ಯಗಳನ್ನು ಪಡೆಯಬಹುದಾಗಿದೆ. ಸ್ಪಷ್ಟವಾಗಿ ಹೇಳುವುದಾದರೆ ಬ್ಲಾಕ್ ಬೆರಿ ರೀತಿಯ ಸ್ಮಾರ್ಟ್ ಫೋನ್ ಗಳಲ್ಲಿ ಸಿಗುವ ಮೌಲ್ಯಾಧಾರಿತ ಸೇವೆಗಳು ಕೇವಲ 49 ರು.ಗಳಿಗೆ ನಿಮಗೆ ಲಭ್ಯವಾಗಲಿದೆ.

ಬ್ಲಾಕ್ ಮೇಲ್ ಸೇವೆ ಪಡೆಯಲು ನಿಮ್ಮ ಮೊಬೈಲ್ ಫೋನ್ ನಲ್ಲಿ ಜಾವಾ ಸೌಲಭ್ಯ ಇದ್ದರೆ ಸಾಕು. ಈಗಂತೂ ಎಲ್ಲಾ ಮೊಬೈಲ್ ಗಳಲ್ಲಿ ಜಾವಾ ಸೌಲಭ್ಯ ಇರುತ್ತದೆ ಅಲ್ಲದೆ ಅದು ಹೈ ಎಂಡ್ ಸ್ಮಾರ್ಟ್ ಫೋನ್ ಗಳಿಗೆ ಹೋಲಿಸಿದರೆ ಅತ್ಯಂತ ಮಿತವ್ಯಯಿ ಕೂಡ.

ಬ್ಲಾಕ್ ಮೇಲ್ ಸೇವೆಯು ಜಿಎಸ್ ಎಂ ಸೇವೆಯುಳ್ಳ ಎಲ್ಲಾ ಬಗೆಯ ಮೊಬೈಲ್ ಗಳಲ್ಲಿ ಬ್ಲಾಕ್ ಮೇಲ್ ಅಳವಡಿಸಬಹುದು ಹೀಗಾಗಿ ವಿಸ್ಟೃತ ಸಂಪರ್ಕ ಜಾಲ ಹಾಗೂ ನಂಬರ್ ಪೋರ್ಟಬಲಿಟಿ ಆದರೂ ನಿರಂತರ ಸಂಪರ್ಕ ಹೊಂದಲು ಸಾಧ್ಯವಿದೆ.

ಹೆಚ್ಚಾಗಿ ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಿಗಳನ್ನು ಆಕರ್ಷಿಸಲು ಬ್ಲಾಕ್ ಮೇಲ್ ರೂಪಿಸಲಾಗಿದೆ. ಫೇಸ್ ಬುಕ್, ಆರ್ಕುಟ್ ಮುಂತಾದ ಸೋಷಿಯಲ್ ನೆಟ್ ವರ್ಕಿಂಗ್ , ಉದ್ಯೋಗವಕಾಶ ಶೋಧನೆಗೆ ನೌಕ್ರಿ, ಮಾನ್ ಸ್ಟರ್ ಮುಂತಾದ ತಾಣಗಳನ್ನು ವೀಕ್ಷಿಸಬಹುದು. ಅಲ್ಲದೆ ತ್ವರಿತ ಗತಿಯಲ್ಲಿ ಇಮೇಲ್ ಸೌಲಭ್ಯವನ್ನು ಹೊಂದಲು ಬ್ಲಾಕ್ ಮೇಲ್ ಸಹಕಾರಿ ಎಂದು ಸಂಸ್ಥೆ ಹೇಳಿದೆ.

ಬ್ಲಾಕ್ ಮೇಲ್ ಸೌಲಭ್ಯ ತಂತ್ರಾಂಶವನ್ನು (www.blacmail.in) ತಾಣದಿಂದ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಬಹುದು. ನಂತರ ಮೊಬೈಲ್ ಮಳಿಗೆಗಳಲ್ಲಿ ರು.49 ನೀಡಿ ಮೌಲ್ಯಾಧಾರಿತ ಸೇವೆ ಪಡೆಯಬಹುದು. ಒಟ್ಟಿನಲ್ಲಿ ಬ್ಲಾಕ್ ಮೇಲ್ ಮೂಲಕ ಸಾಧಾರಣ ಮೊಬೈಲನ್ನು ಸ್ಮಾರ್ಟ್ ಫೋನ್ ನಂತೆ ಬಳಸಬಹುದು ಎನ್ನುತ್ತದೆ ಫಿಫ್ತ್ ಸಿ ಸಲ್ಯೂಷನ್ ಸಂಸ್ಥೆ.

ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ:
Fifth C Solutions Pvt. Ltd, Bangalore.

ದೂರವಾಣಿ: +91 80 221011 33/44

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X