ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರಿಯ ಪತ್ರಕರ್ತ ಬೆ.ಸು.ನಾ ಮಲ್ಯ ನೆನಪು

By *ವಿಕ ಸುದ್ದಿ ಲೋಕ
|
Google Oneindia Kannada News

Journalist BSN Mallya
ಕಾರ್ಕಳ, ಏ.2: ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಪತ್ರಕರ್ತ ಬೆಳುವಾಯಿ ಸುಬ್ರಾಯ ನಾರಾಯಣ ಮಲ್ಯ(84) ಪಟ್ಟಣದ ತೆಳ್ಳಾರುನಲ್ಲಿರುವ ಸ್ವಗೃಹ ದಲ್ಲಿ ಅಲ್ಪಕಾಲದ ಅಸೌಖ್ಯದಿಂದ ಗುರುವಾರ ನಿಧನರಾದರು. 1927 ರಲ್ಲಿ ಜನಿಸಿದ ಬೆ.ಸು.ನಾ. ಮಲ್ಯ ಅವಿವಾಹಿತರಾಗಿದ್ದರು. ಬೆಂಗಳೂರಿನಲ್ಲಿ ನೆಲೆಸಿ 41 ವರ್ಷಗಳ ಕಾಲವಿಕ್ರಮ ವಾರಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸಿದ್ದರು.

ರಾಜ್ಯದ ಮೊದಲ ಪತ್ರಿಕಾ ಅಕಾಡೆಮಿಯ ಸದಸ್ಯರಾಗಿದ್ದು, ಸಾಹಿತ್ಯಕ್ಷೇತ್ರದಲ್ಲಿ ಸುನಾಮ ಎಂಬ ಕಾವ್ಯನಾಮದಿಂದ ಖ್ಯಾತರಾಗಿದ್ದರು. ಅಖಿಲ ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷರಾಗಿ ಸತತ ಮೂರು ವರ್ಷ ಆಯ್ಕೆಯಾಗಿದ್ದರು. ಸಂಜೆ ಪೆರ್ವಾಜೆಯಲ್ಲಿ ಅವರ ಅಂತಿಮ ಸಂಸ್ಕಾರ ನಡೆಯಿತು.

ಬೆಸುನಾ ಮಲ್ಯ ಅವರ ಜೀವನದ ಸಂಕ್ಷಿಪ್ತ ಚಿತ್ರಣ:

*1927ರಲ್ಲಿ ದ.ಕ. ಜಿಲ್ಲೆಯ ಕಾರ್ಕಳದ ಬಳಿಯ ಬೆಳುವಾಯಿಯಲ್ಲಿ ಸುಬ್ರಾಯ ನಾರಾಯಣ ಮಲ್ಯ ಜನನ.
*ವಿದ್ಯಾಭ್ಯಾಸದ ತರುವಾಯ ಕೆನರಾ ಬ್ಯಾಂಕ್‌ನಲ್ಲಿ ಉದ್ಯೋಗ .
*1940 ರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರ್ ಎಸ್ ಎಸ್ ) ಸಂಪರ್ಕ.
*1948 ರಲ್ಲಿ ಬೆಂಗಳೂರಿನಲ್ಲಿ 'ವಿಕ್ರಮ' ವಾರಪತ್ರಿಕೆ ಪ್ರಾರಂಭ, ಗದಗಿನಲ್ಲಿದ ಬ್ಯಾಂಕ್ ಉದ್ಯೋಗ ಬಿಟ್ಟು ಬೆಸುನಾ ಅವರಿಂದ ಸಂಪಾದಕತ್ವ ಸ್ವೀಕಾರ.
*1948 ರಲ್ಲಿ ಆರೆಸ್ಸೆಸ್ ಕರೆಯಿತ್ತ ಸತ್ಯಾಗ್ರಹ' ಆಂದೋಲನದಲ್ಲಿ ಭಾಗಿಯಾಗಿ, ಜೈಲುವಾಸ ಅನುಭವಿಸಿ, ಜೀವನ ಪೂರ್ತಿ ಅವಿವಾಹಿತರಾಗಿದ್ದರು.
*1953ರಿಂದ 1996 ವರೆಗೆ ಸ್ವಾವಲಂಬಿ ಪತ್ರಿಕೆಯಾಗಿ 'ವಿಕ್ರಮ' ಹೊರಹೊಮ್ಮಲ್ಲು ಮಲ್ಯರ ಪರಿಶ್ರಮ ಕಾರಣ.
*ಕನ್ನಡ ಪತ್ರಿಕೋದ್ಯಮಕ್ಕೆ ಸಂಬಂಧಿಸಿದಂತೆ ಪಾರಿಭಾಷಿಕ ಶಬ್ದಕೋಶ ರಚಿಸಿದ್ದಾರೆ.
*ಕಡಿದಾಳ್ ಮಂಜಪ್ಪ, ಎಸ್ ನಿಜಲಿಂಗಪ್ಪ,ತಿ.ತಾ. ಶರ್ಮ, ಮುತ್ಸದ್ದಿ ರಾರಾಜಿ, ನ್ಯಾಯಮೂರ್ತಿ ಎಂ.ರಾಮಾಜೋಯಿಸ್ ಸೇರಿದಂತೆ ಅಪಾರ ಮಿತ್ರವೃಂದವನ್ನು ಮಲ್ಯರು ಪಡೆದಿದ್ದರು.
*ಸದಾ ಚಿಂತನಶೀಲ ಸುನಾಮ(ಬೇಸುನಾ ಮಲ್ಯರ ಕಾವ್ಯನಾಮ)ರಿಗೆ ರಾಷ್ಟ್ರದ ಉನ್ನತ ಪತ್ರಿಕಾ ಪ್ರಶಸ್ತಿ 'ನಚಿಕೇತ' ನೀಡಿ ಅಂದಿನ ವಾಜಪೇಯಿ ಸರ್ಕಾರ ಗೌರವಿಸಿತ್ತು.
*1975 ರಲ್ಲಿ ತುರ್ತು ಪರಿಸ್ಥಿತಿಯಲ್ಲಿ ವಾಜಪೇಯಿ,ಲಾಲ್‌ಕೃಷ್ಣ ಅಡ್ವಾಣಿ ಜತೆಗೆ ಸೆರೆಮನೆ ವಾಸ ಅನುಭವಿಸಿದ್ದರು.
*ಕನ್ನಡ, ಸಂಸ್ಕೃತ, ಇಂಗ್ಲಿಷ್, ಹಿಂದಿ, ಮರಾಠಿ, ಕೊಂಕಣಿ ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದರು.
*ಭಾರತ ವೃತ್ತ ಪತ್ರಿಕಾ ಸಂಘದ ಕಾರ್ಯಸಮಿತಿ ಸದಸ್ಯ, ರಾಜ್ಯದ ಪ್ರಪ್ರಥಮ ಪತ್ರಿಕಾ ಅಕಾಡೆಮಿ ಸದಸ್ಯ, ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಪತ್ರಿಕಾ ಸಂಪಾದಕರ ಸಂಘದ ಅಧ್ಯಕ್ಷ, ದೂರವಾಣಿ ಸಮಿತಿ ಸದಸ್ಯ, ಅಖಿಲ ಭಾರತ ಸಂಪಾದಕ ಕಾರ್ಯಪಡೆ ಸದಸ್ಯ, ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ್ಯ ಪ್ರಥಮ ಕಾರ್ಯದರ್ಶಿ, ರಾಜ್ಯ ದೂರಸಂಪರ್ಕ ವರ್ತುಲದ ಸಲಹಾ ಸಮಿತಿ ಸದಸ್ಯರಾಗಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X