ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈದ್ಗಾ ಮೈದಾನ ಇನ್ನು ಚೆನ್ನಮ್ಮ ಮೈದಾನ

By Rajendra
|
Google Oneindia Kannada News

Hubli Edgah Maidan
ಹುಬ್ಬಳ್ಳಿ, ಏ.1: ಈದ್ಗಾ ಮೈದಾನವೆಂದೇ ಖ್ಯಾತಿ ಪಡೆದಿದ್ದ ನಗರದ ಹೃದಯ ಭಾಗದಲ್ಲಿರುವ ಕಿತ್ತೂರು ಚೆನ್ನಮ್ಮ ಮೈದಾನಕ್ಕೆ ನೂತನ ಮೇಯರ್ ವೆಂಕಟೇಶ್ ಮೇಸ್ತ್ರಿ ಬುಧವಾರ (ಮಾ.31) "ಕಿತ್ತೂರು ರಾಣಿ ಚೆನ್ನಮ್ಮ ಮೈದಾನ" ಎಂದು ಮರು ನಾಮಕರಣ ಮಾಡಿದ್ದಾರೆ.

ಪ್ರತಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಸದಸ್ಯರ ತೀವ್ರ ವಿರೋಧದ ನಡುವೆಯೇ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಈ ಆದೇಶ ನೀಡಿದ್ದಾರೆ. ಈದ್ಗಾ ಮೈದಾನವೆಂದೇ ಖ್ಯಾತಿ ಪಡೆದಿದ್ದ ಈ ಮೈದಾನ ರಾಷ್ಟ್ರಧ್ವಜಾರೋಹಣ ನೆರವೇರಿಸುವುದಕ್ಕೆ ಸಂಬಂಧಿಸಿದಂತೆ ಪ್ರತಿಭಟನೆ, ಲಾಠಿ ಚಾರ್ಜ್, ಗೋಲಿಬಾರ್ ಗಳಂತಹ ಅಹಿತಕರ ಘಟನೆಗಳಿಗೆ ಸಾಕ್ಷಿಯಾಗಿತ್ತು.

ಇತ್ತೀಚೆಗೆ ಹುಬ್ಬಳ್ಳಿ ಈದ್ಗಾ ಮೈದಾನಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶದ ವಿರುದ್ಧ ಅಂಜುಮನ್ ಇಸ್ಲಾಂ ಸಂಸ್ಥೆ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಈ ಮೂಲಕ ಅದು ಕರ್ನಾಟಕ ಹೈಕೋರ್ಟ್ ಈ ಹಿಂದೆ ನೀಡಿದ್ದ ಆದೇಶವನ್ನು ಎತ್ತಿ ಹಿಡಿದಂತಾಗಿತ್ತು. ಪರಿಣಾಮವಾಗಿ ಈದ್ಗಾ ಮೈದಾನದಲ್ಲಿ ವರ್ಷಕ್ಕೆ 2 ಬಾರಿ ಮಾತ್ರ ನಮಾಜ್ ಮಾಡಲು ಮುಸ್ಲಿಂ ಬಾಂಧವರಿಗೆ ಅವಕಾಶ ಇದ್ದು, ಮಿಕ್ಕಂತೆ ಈ ಮೈದಾನ ಪಾಲಿಕೆಯ ಸ್ವತ್ತಾಗಿರಲಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X