ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜೂ. 30 : ನಂಬರ್ ಪೋರ್ಟಬಿಲಿಟಿ ಶುರು ?

By Mrutyunjaya Kalmat
|
Google Oneindia Kannada News

Mobile number portability delayed again to Jun 30
ನವದೆಹಲಿ, ಮಾ. 31 : ಬಹುನಿರೀಕ್ಷಿತ ಮೊಬೈಲ್ ನಂಬರ್ ಪೋರ್ಟಬಿಲಿಟಿ ಸೇವೆಗೆ ಮತ್ತೆ ವಿಘ್ನ ಎದುರಾಗಿದ್ದು, ಇದೇ ಮಾರ್ಚ್ 31ಕ್ಕೆ ಆರಂಭವಾಗಬೇಕಿದ್ದ ಈ ಸೇವೆ ಜೂನ್ 30 ರಿಂದ ಕಾರ್ಯಾರಂಭ ಮಾಡಲಿದೆ ಕೇಂದ್ರ ಸರಕಾರ ಹೇಳಿದೆ.

ಕಳೆದ ವರ್ಷ ಡಿಸೆಂಬರ್ 31 ಕ್ಕೆ ನಂಬರ್ ಪೋರ್ಟಬಿಲಿಟಿ ಆರಂಭವಾಗುತ್ತದೆ ಎಂದು ಸರಕಾರ ಹೇಳಿತ್ತು. ಅದರೆ, ವಿವಿಧ ಕಾರಣಗಳಿಂದ 2010ರ ಮಾರ್ಚ್ 31 ರೊಳಗೆ ಈ ಸೇವೆ ಆರಂಭಿಸುವುದಾಗಿ ಹೇಳಿತ್ತು. ಇದೀಗ ಮತ್ತೆ ತಾಂತ್ರಿಕ ನೆಪವೊಡ್ಡಿ ಜೂನ್ 30ಕ್ಕೆ ನಂಬರ್ ಪೋರ್ಟೆಬಿಲಿಟಿ ಆರಂಭಿಸುವುದಾಗಿ ಸರಕಾರ ಘೋಷಿಸಿದೆ.

ನಂಬರ್ ಪೋರ್ಟೆಬಿಲಿಟಿ ಅಂದರೆ, ಮೊಬೈಲ್ ಕಂಪನಿ ಬದಲಾದರೆ, ಸೆಲ್ ಫೋನ್ ಸಂಖ್ಯೆ ಬದಲಾಗುವ ಆತಂಕವಿಲ್ಲ. ಯಾವುದೇ ಕಂಪನಿಯ ಸಿಮ್ ಕಾರ್ಡ್ ಹೊಂದಿದ್ದರೂ ಮೊದಲಿದ್ದ ಸಂಖ್ಯೆಯೇ ಉಳಿಯಲಿದೆ. ಮೊಬೈಲ್ ನಂಬರ್ ಪೋರ್ಟಬಿಲಿಟಿ ಸೌಲಭ್ಯ ಒದಗಿಸಲು ಟೆಲ್ಕಾರ್ಡಿಯಾ ಟೆಕ್ನಾಲಜೀಸ್ ಸಂಸ್ಥೆಯ ಅಂಗ ಸಂಸ್ಥೆ ಎಂ ಎನ್ ಪಿ ಗೆ ಕೇಂದ್ರ ದೂರ ಸಂಪರ್ಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ.

ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೋಲ್ಕತ್ತಾ ನಗರದಲ್ಲಿ ಮೊದಲು ಈ ಸೇವೆ ಕಲ್ಪಿಸಲಾಗುವುದು. ಟೆಲ್ಕಾರ್ಡಿಯಾ ಸಂಸ್ಥೆಯು ವಿಶ್ವಾದ್ಯಂತ ಈ ಸೇವೆ ನೀಡುತ್ತಿದ್ದು ಭಾರತದಲ್ಲೂ ಉತ್ತಮ ಸೇವೆ ನೀಡುವ ವಿಶ್ವಾಸವಿದೆ ಎಂದು ಕಂಪನಿ ಸಿಇಓ ರಿಚರ್ಡ್ ಜಾಕೋಲೆಫ್ ತಿಳಿಸಿದ್ದಾರೆ. ಕೇಂದ್ರ ದೂರ ಸಂಪರ್ಕ ಇಲಾಖೆ ಹತ್ತು ವರ್ಷದ ಅವಧಿಗೆ ಅನುಮತಿ ನೀಡಿದೆ. ಆಯಾ ಮೊಬೈಲ್ ಕಂಪನಿ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X