ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೆಪಿ ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ

By Mahesh
|
Google Oneindia Kannada News

Poornachandra Tejaswi Smaraka, Kuppali
ತೀರ್ಥಹಳ್ಳಿ, ಮಾ.31: ಸಾಹಿತಿ ದಿವಂಗತ ಕೆಪಿ ಪೂರ್ಣಚಂದ್ರ ತೇಜಸ್ವಿ ಅವರ ಸ್ಮಾರಕ ಲೋಕಾರ್ಪಣೆ ಹಾಗೂ ವಿಚಾರ ಸಂಕೀರಣ ಕಾರ್ಯಕ್ರಮವನ್ನು ತಾಲೂಕಿನ ಕುಪ್ಪಳಿಯಲ್ಲಿ ಏ.4 ಹಾಗೂ ಏ.5 ರಂದು ಹಮ್ಮಿಕೊಳ್ಳಲಾಗಿದೆ. ಈ ಸಂದರ್ಭದಲ್ಲಿ ತೇಜಸ್ವಿ ಪುಸ್ತಕಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಅವರ ಛಾಯಾಚಿತ್ರಗಳ ಪ್ರದರ್ಶನವಿರುತ್ತದೆ. ಕುಪ್ಪಳಿಯ ತೇಜಸ್ವಿ ಸ್ಮಾರಕ ನಿರ್ಮಾಣ ಸಮಿತಿ ಹಾಗೂ ಮೂಡಿಗೆರೆಯ ವಿಸ್ಮಯ ಪ್ರತಿಷ್ಥಾನ ಸಂಸ್ಥೆಗಳು ಈ ಕಾರ್ಯಕ್ರಮಗಳನ್ನು ಆಯೋಜಿಸಿವೆ.

ಏ.4, ಭಾನುವಾರ ಕಾರ್ಯಕ್ರಮಗಳ ವಿವರ:
ಬೆಳಗ್ಗೆ 10.30ಕ್ಕೆ
ಕೆಪಿ ಪೂರ್ಣಚಂದ್ರ ತೇಜಸ್ವಿ ವಿಚಾರ ಸಂಕಿರಣ
ಉದ್ಘಾಟನೆ: ಪ್ರಸನ್ನ, ರಂಗಕರ್ಮಿ, ಹೆಗ್ಗೋಡು
ಅಧ್ಯಕ್ಷತೆ: ಡಾ.ಕೆ.ಚಿದಾನಂದ ಗೌಡ, ವಿಶ್ರಾಂತ ಕುಲಪತಿಗಳು

ಬೆಳಗ್ಗೆ 11.30 ಕ್ಕೆ ಗೋಷ್ಠಿ:1
ಅಧ್ಯಕ್ಷತೆ : ಡಾ. ಗಿರಡ್ಡಿ ಗೋವಿಂದರಾಜು, ವಿಮರ್ಶಕರು
ಸಾಮಾಜಿಕ ಅನುಸಂಧಾನ: ಡಾ. ಮೊಗಳ್ಳಿ ಗಣೇಶ್, ಕನ್ನಡ ವಿವಿ, ಹಂಪಿ
ವೈಜ್ಞಾನಿಕ ಅನುಸಂಧಾನ: ನಟರಾಜ್ ಬೂದಾಳ್, ಲೇಖಕರು, ತುಮಕೂರು

ಮಧ್ಯಾಹ್ನ 2.30ಕ್ಕೆ ಗೋಷ್ಠಿ:2
ಅಧ್ಯಕ್ಷತೆ: ಪ್ರೊ.ಟಿಪಿ ಅಶೋಕ, ವಿಮರ್ಶಕರು, ಸಾಗರ
ನಿಸರ್ಗದ ಅನುಸಂಧಾನ: ಡಾ. ಚಂದ್ರಶೇಖರ ನಂಗಲಿ, ಪ್ರಾಂಶುಪಾಲರು, ಹಾನಗಲ್
ದೇಸಿ ಅನುಸಂಧಾನ: ಡಾ. ರಹಮತ್ ತರೀಕೆರೆ, ಕನ್ನಡ ವಿವಿ, ಹಂಪಿ

ಸಂಜೆ 6.30ಕ್ಕೆ ಸಂಗೀತ ಕಾರ್ಯಕ್ರಮ
ಖ್ಯಾತ ಸರೋದ್ ವಾದಕ ರಾಜೀವ್ ತಾರಾನಾಥ್ ಅವರ ಶಿಷ್ಯ ವಿಜೇತ್ ಅಣತಿ ಅವರಿಂದ ಸರೋದ್ ವಾದನ
ತಬಲಾ: ಡಾ. ಸಂತೋಷ್ ಚಂದಾವರ್ಕರ್, ಮೈಸೂರು
**
ದಿನಾಂಕ: 05.04.2010 ಸೋಮವಾರದ ಕಾರ್ಯಕ್ರಮಗಳು

ಬೆಳಗ್ಗೆ 10.30 ಕ್ಕೆ ಸಾಹಿತಿ ಡಾ. ಚಂದ್ರಶೇಖರ ಕಂಬಾರ ಆವರಿಂದ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಸ್ಮಾರಕ ಲೋಕಾರ್ಪಣೆ .
ತೇಜಸ್ವಿ ಚಿತ್ರಸಂಪುಟ ಬಿಡುಗಡೆ: ಪ್ರೊ.ಎಂಎಚ್ ಕೃಷ್ಣಯ್ಯ, ಅಧ್ಯಕ್ಷರು ಕರ್ನಾಟಕ ಸಾಹಿತ್ಯ ಅಕಾಡೆಮಿ
ಅಧ್ಯಕ್ಷತೆ: ಬಿಎಲ್ ಶಂಕರ್, ಅಧ್ಯಕ್ಷರು, ವಿಸ್ಮಯ ಪ್ರತಿಷ್ಠಾನ, ಮೂಡಿಗೆರೆ
ಮುಖ್ಯ ಅತಿಥಿಗಳು: ಹಂ ಪ ನಾಗರಾಜಯ್ಯ, ಅಧ್ಯಕ್ಷರು ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ, ಕುಪ್ಪಳಿ
ಕಿಮ್ಮನೆ ರತ್ನಾಕರ್ ,ಶಾಸಕರು , ತೀರ್ಥಹಳ್ಳಿ
ಕಡಿದಾಳ್ ಶಾಮಣ್ಣ, ಅಧ್ಯಕ್ಷರು, ತೇಜಸ್ವಿ ಸ್ಮಾರಕ ನಿರ್ಮಾಣ ಸಮಿತಿ, ಕುಪ್ಪಳಿ

ಕಾರ್ಯಕ್ರಮದ ವಿವರಗಳಿಗೆ ಸಂಪರ್ಕ ವಿಳಾಸ:
ಕಡಿದಾಳ್ ಪ್ರಕಾಶ್, ಕಡಿದಾಳ್, ಹಾರೋಗೊಳಿಗೆ ಅಂಚೆ.
ತೀರ್ಥಹಳ್ಳಿ ತಾಲ್ಲೂಕು, ಶಿವಮೊಗ್ಗ ಜಿಲ್ಲೆ -577 485
ದೂ:0818-254727
ಮೊ:94483 37723
ವೆಬ್ : http://www.tejaswivismaya.com/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X