ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೀರ್ಘ ವಾರಾಂತ್ಯ ರಜೆಗಳ ಆರಂಭ!

By Shami
|
Google Oneindia Kannada News

Jesus Christ
ಬೆಂಗಳೂರು, ಮಾ. 31 : ಏಪ್ರಿಲ್ 1 ನೆ ತಾರೀಖಿನಿಂದ ಒಂದಲ್ಲಾ ಒಂದು ರೀತಿಯ ದೀರ್ಘ ವಾರಾಂತ್ಯದ ರಜೆಗಳ ಆರಂಭ ಸಮೀಪಿಸುತ್ತಿದೆ. ಪ್ರಸಕ್ತ ಆರ್ಥಿಕ ವರ್ಷದ ಮೊದಲ ದಿವಸವಾದ್ದರಿಂದ ಏಪ್ರಿಲ್ 1 ಗುರುವಾರ ಬ್ಯಾಂಕುಗಳಿಗೆ ರಜೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯದ ಎರಡೂ ಬ್ಯಾಂಕಿಂಗ್ ವ್ಯವಸ್ಥೆಗೆ ಅನ್ವಯಿಸುತ್ತದೆ. ಹಾಗಾಗಿ ಬ್ಯಾಂಕುಗಳ ಬಾಗಿಲು ಕಿಟಕಿಗಳು ತೆರೆದಿದ್ದರೂ ಖಾತೆದಾರರ ಬ್ಯಾಂಕಿಂಗ್ ಚಟುವಟಿಕೆಗಳು ಸ್ಥಭ್ಧವಾಗುತ್ತವೆ.

ವರ್ಷದ ಕೊನೆಯ ದಿನ ಎಂದರೆ ಬ್ಯಾಂಕಿನ ಶಾಖೆಗಳಲ್ಲಿ ಆಯಾ ವರ್ಷದಲ್ಲಿ ಮಾಡಿದ ಆರ್ಥಿಕ ಪಾಪಗಳನ್ನು ತೊಳೆದು ಬುಕ್ಕು ಲೆಕ್ಕಗಳನ್ನು ಸ್ವಚ್ಛವಾಗಿರುವಂತೆ ತೋರಿಸುವ ದಿನ. ಇನ್ನು ನಿಮ್ಮ ಚೆಕ್ಕುಗಳು ಕ್ಲಿಯರ್ ಆಗುವುದಿಲ್ಲ. ನಿಮ್ಮ ಖಾತೆಗೆ ಹೊಸ ಹಣದ ಆಗಮನವಿಲ್ಲ. ಹಾಗೇನಾದರೂ ಇದ್ದಲ್ಲಿ ಸೋಮವಾರದತನಕ ಕಾಯಬೇಕು.

ಶುಕ್ರವಾರ ಗುಡ್ ಫ್ರೈಡೇ. ಯೇಸು ಕ್ರಿಸ್ತನನ್ನು ಶಿಲುಬೆಗೇರಿಸಿದ ದಿನ. ಆತನನ್ನು ಶಿಲುಬೆಗೆ ಏರಿಸಿದ್ದು ಇತಿಹಾಸ ಅಥವಾ ಐತಿಹ್ಯಗಳ ಪ್ರಕಾರ ಕ್ರಿಸ್ತಪೂರ್ವ 33ರಲ್ಲಿ ಎಂದು ನಂಬಲಾಗಿದೆ. ಪುಣ್ಯಾತ್ಮರಿಗೆ ಸಾವು ತಂದು ಕೊಟ್ಟ ಈ ದಿನವನ್ನು ಪಾಪ ತೊಳೆದುಕೊಳ್ಳುವ ದಿನವನ್ನಾಗಿ ಗಮನಿಸುವುದು ಕ್ರೈಸ್ತ ಜನಾಂಗದಲ್ಲಿ ಪದ್ದತಿ. ಈ ದಿನವನ್ನು ಬ್ಲ್ಯಾಕ್ ಡೇ, ಹೋಲಿ ಡೇ, ಗುಡ್ ಪ್ರೈಡೇ ಎಂದೂ ಕರೆಯಲಾಗುತ್ತದೆ.

ಶುಭ ಶುಕ್ರವಾರದಂದು ಬ್ಯಾಂಕು, ಕೇಂದ್ರ, ರಾಜ್ಯ ಸರಕಾರದ ಕಚೇರಿಗಳಿಗೆ ರಜೆ. ಕೆಲವು ಖಾಸಗಿ ಕಂಪನಿ, ಕಚೇರಿಗಳೂ ರಜೆ ಘೋಷಿಸುವುದುಂಟು. ಶನಿವಾರ ಬ್ಯಾಂಕುಗಳಿಗೆ ಮಾಮೂಲಿನಂತೆ ಅರ್ಧ ದಿವಸದ ಕೆಲಸ. ದೈನಂದಿನ ಬ್ಯಾಂಕಿಂಗ್ ಚಟುವಟಿಕೆಗಳು ಸಾಧ್ಯವಾದರೂ ಚೆಕ್, ಡ್ರಾಫ್ಟ್ ರೂಪಾಯಿ ನೋಟುಗಳಾಗಿ ಕರಗಿ ಕೈಗೆ ಬಾರದು. ಶನಿವಾರ ಭಾನುವಾರ ಯಥಾಪ್ರಕಾರ ರಜಾ ಇರುವುದನ್ನು ನಾವು ನೆನಪಿಸುವ ಅಗತ್ಯವಿಲ್ಲ. ಗುರುವಾರವೂ ರಜೆ ಗುಜರಾಯಿಸಿ ರಜಾ ಪ್ರವಾಸ ತೆರಳುವ ತಮ್ಮ ಓದುಗರಿಗೆ ಹಾಲಿಡೇ ಗ್ರೀಟಿಂಗ್ಸ್. ಮತ್ತೆ ಸೋಮವಾರ ಬೆಳಗ್ಗೆ ನೋಡುವಾ. ಅವತ್ತು ಬೆಳಗ್ಗೆ ಬೆಳಗ್ಗೇನೇ ಬಿಬಿಎಂಪಿ ಚುನಾವಣಾ ಫಲಿತಾಂಶಗಳನ್ನು ಕಾಫಿ ಕುಡಿಯುತ್ತಾ ಗಮನಿಸೋಣ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X