ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಏಪ್ರಿಲ್ 1 ರಿಂದ ಜನಗಣತಿ ಆರಂಭ

By Mrutyunjaya Kalmat
|
Google Oneindia Kannada News

Pratibha Patil
ನವದೆಹಲಿ, ಮಾ. 31 : ಸಮಗ್ರ ಗುರುತು ದತ್ತಾಂಶಗಳನ್ನು ತಯಾರಿಸುವ ಸಲುವಾಗಿ 2011ರ ಜನಗಣತಿಗೆ ಸರಕಾರ ಗುರುವಾರ ಚಾಲನೆ ನೀಡಲಿದೆ. ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಈ ಬೃಹತ್ ಯೋಜನೆಗೆ ಅಧಿಕೃತ ಚಾಲನೆ ನೀಡಲಿದ್ದಾರೆ.

35 ರಾಜ್ಯಗಳು ಹಾಗೂ 9 ಕೇಂದ್ರಾಡಳಿತ ಪ್ರದೇಶದ ಸೇರಿದಂತೆ ಸುಮಾರು 112 ಕೋಟಿ ಜನತೆ ಈ ಗಣತಿ ವ್ಯಾಪ್ತಿಗೆ ಒಳಪಡಲಿದ್ದಾರೆ. ಗಣತಿ ವೇಳೆ ಇದೇ ಮೊದಲ ಬಾರಿಗೆ ಮನೆ ಸದಸ್ಯರು ಹೊಂದಿರುವ ಮೊಬೈಲ್ ಫೋನ್, ಕಂಪ್ಯೂಟರ್ ಅಂತರ್ಜಾಲ, ಶುದ್ಧ ಹಾಗೂ ಶುದ್ದವಲ್ಲದ ಕುಡಿಯುವ ನೀರು, ಬೆರಳಚ್ಚು ಹಾಗೂ ಭಾವಚಿತ್ರ ಸೇರಿದಂತೆ ದೇಶದ ಭದ್ರತೆಯನ್ನು ಬಲಪಡಿಸುವ ಅಗತ್ಯ ಮಾಹಿತಿಗಳನ್ನು ಗಣತಿದಾರರು ಸಂಗ್ರಹಿಸಲಿದ್ದಾರೆ.

ಗಣತಿ ಕಾರ್ಯ ಮುಗಿದ ನಂತರ ಸರಕಾರವು ರಾಷ್ಟ್ರೀಯ ಜನಸಂಖ್ಯಾ ನೋಂದಣಿ(ಎನ್ ಪಿಆರ್)ಯನ್ನು ರಚಿಸಲಿದ್ದು, ಇದರಿಂದ ಒಂದೇ ದಾಖಲಾತಿಯಲ್ಲಿ ದೇಶದ ಸಮಗ್ರ ಜಮಸಂಖ್ಯೆಯ ಚಿತ್ರಣ ಸರಕಾರಕ್ಕೆ ಲಭಿಸಲಿದೆ. ಎನ್ ಪಿಆರ್ ಪೂರ್ಣಗೊಂಡ ಬಳಿಕ ಸರಕಾರ ಪ್ರತಿಯೊಬ್ಬರಿಗೂ ವಿಶಿಷ್ಟ ಗುರುತಿನ ಚೀಟಿಯನ್ನು ನೀಡಲಿದೆ. ಈ ಗುರುತಿನ ಚೀಟಿಯೂ ವ್ಯಕ್ತಿ ಬೆರಳಚ್ಚು, ಭಾವಚಿತ್ರ ಮತ್ತಿತರ ಮಾಹಿತಿಗಳನ್ನು ಒಳಗೊಂಡಿರುತ್ತದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X