ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರಾಮಣ್ಣ ಮಾಸ್ತರ್ ಕನ್ನಡಪ್ರಭ ಶ್ರೇಷ್ಠ ವ್ಯಕ್ತಿ

By Shami
|
Google Oneindia Kannada News

Ramu Moolagi, Kannada Prabha Best Person of the Year
ಹುಬ್ಬಳ್ಳಿ, ಮಾ.30 : ಏಶಿಯಾದಲ್ಲೇ ದೊಡ್ಡದಾದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಮಾಲಿಗಳ ಮಕ್ಕಳಿಗೆ ಶಾಲೆಗಳನ್ನು ಮಾಡಿ ಅವರಿಗೆ ವಿದ್ಯಾಭ್ಯಾಸ ನೀಡುವಲ್ಲಿ 10 ವರ್ಷಗಳಿಂದ ಡಾ. ರಾಮು ಮೂಲಗಿಯವರು ಮಾಡುತ್ತಿರುವ ಸತತ ಸೇವೆ ಸ್ಮರಣೀಯವಾದದ್ದೆಂದು ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ಲಾಘಿಸಿದ್ದಾರೆ.

ಅವರು 'ಕನ್ನಡ ಪ್ರಭ ವರ್ಷದ ಶ್ರೇಷ್ಠ ವ್ಯಕ್ತಿ" ಪ್ರಶಸ್ತಿಯನ್ನು ಹುಬ್ಬಳ್ಳಿಯ ಪ್ರಾಥಮಿಕ ಶಾಲಾ ಶಿಕ್ಷಕರಾದ ಡಾ.ರಾಮು ಮೂಲಗಿಯವರಿಗೆ ಸೋಮವಾರ ಪ್ರದಾನ ಮಾಡಿ ಮಾತನಾಡುತ್ತಿದ್ದರು.

ಇಂದು ರಾಮಣ್ಣ ಮಾಸ್ತರ್ ಅಂತಹವರ ಅಗತ್ಯ ಹಿಂದೆಂದಿಗಿಂತಲೂ ಬಹಳವಿದೆ ಎಂದ ಮುಖ್ಯ ಮಂತ್ರಿಗಳು, ಗೋಯೆಂಕಾ ಪ್ರತಿಷ್ಠಾನದ ಈ ಪ್ರಶಸ್ತಿಗೆ ಪಾತ್ರರಾದ ಡಾ ಮೂಲಗಿಯವರು ಅಭಿನಂದನಾರ್ಹರು. ಅವರ ಪ್ರಯತ್ನಕ್ಕೆ ಎಲ್ಲ ರೀತಿಯ ನೆರವನ್ನೂ ಸರ್ಕಾರದಿಂದ ನೀಡಲಾಗುವುದೆಂದರು. ಹುಬ್ಬಳ್ಳಿಯಲ್ಲಿ ಶಿಕ್ಷಣ ಪಡೆಯುತ್ತಿರುವ ಎಲ್ಲಾ 130 ವಿದ್ಯಾರ್ಥಿಗಳಿಗೆ ಸರ್ಕಾರದ ನೆರವಿನ ಜೊತೆಗೆ ಶಾಲಾ ಕಟ್ಟಡ ನಿರ್ಮಾಣಕ್ಕೂ ನೆರವು ದೊರಕಿಸಲಾಗುವುದು ಎಂದು ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಹೊರತರಲಾದ ಪುಸ್ತಕಗಳನ್ನು ಗ್ರಾಮೀಣಾಭಿವೃದ್ಧಿ ಸಚಿವರಾದ ಜಗದೀಶ್ ಶೆಟ್ಟರ್, ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ಆರ್. ನಿರಾಣಿ ಅವರು ಬಿಡುಗಡೆ ಮಾಡಿದರು. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇದೇ ಸಂದರ್ಭದಲ್ಲಿ ಡಾ ರಾಮು ಮೂಲಗಿಯವರ ಕಂಠದಾನದ ಧ್ವನಿ ಸುರಳಿಯನ್ನು ಬಿಡುಗಡೆಮಾಡಿದರು.

ಕನ್ನಡ ಪ್ರಭ ಪತ್ರಿಕೆಯ ಸಂಪಾದಕ ಶಿವಸುಬ್ರಹ್ಮಣ್ಯ ಅವರು ಐದನೇ ಕನ್ನಡ ಪ್ರಭ ವರ್ಷದ ಶ್ರೇಷ್ಠ ವ್ಯಕ್ತಿ ಪ್ರಶಸ್ತಿ ಪಡೆದ ಡಾ ರಾಮು ಮೂಲಗಿಯವರ ಬಗ್ಗೆ ಪರಿಚಯಿಸಿದರು. ಸಮಾರಂಭದಲ್ಲಿ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಆರ್.ಪಿ. ಜಗದೀಶ್ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X