ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧ್ಯಾನಪೀಠಕ್ಕೆ ನಿತ್ಯಾನಂದ ರಾಜೀನಾಮೆ

By Shami
|
Google Oneindia Kannada News

Nithyananda swamy
ಬೆಂಗಳೂರು, ಮ.30 : ತಮಿಳು ನಟಿ ಜೊತೆ ಮಲಗುವ ಕೋಣೆಯಲ್ಲಿ ಚಕ್ಕಮಕ್ಕ ನಡೆಸಿ ನಾಪತ್ತೆಯಾಗಿದ್ದ ನಿತ್ಯಾನಂದ ಸ್ವಾಮಿ ತಮ್ಮ ವಿಶ್ವ ಪ್ರಸಿದ್ಧ ಧ್ಯಾನಪೀಠದ ಎಲ್ಲಾ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ 'ಪರಮಹಂಸ ನಿತ್ಯಾನಂದ ಮಿಷನ್' ಅಂತರ್ಜಾಲದಲ್ಲಿ ಘೋಷಿಸಿದ್ದಾನೆ.

ಸದ್ಯಕ್ಕೆ ಆಧ್ಯಾತ್ಮಿಕದ ಕಡೆಗೆ ಹೆಚ್ಚಿನ ಒಲವು ತೋರಲು ನಿರ್ಧರಿಸಿದ್ದು ಹಿರಿಯ ಆಚಾರ್ಯರ ಸಮ್ಮತಿಯಂತೆ ತಾನು ಹೊಂದಿರುವ ಆಶ್ರಮದ ಹುದ್ದೆಗೆ ರಾಜೀನಾಮೆ ನೀಡಿರುವುದಾಗಿ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.

ಹರಿದ್ವಾರದಲ್ಲಿ ಹಿಂದೂ ಧಾರ್ಮಿಕ ಮುಖಂಡರು, ಆಚಾರ್ಯರು ಮತ್ತು ಸ್ವಾಮೀಜಿಗಳೊಂದಿಗೆ ಮಾತುಕತೆ ನಡೆಸಿ ರಾಸಲೀಲೆ ಪ್ರಕರಣದ ಬಗ್ಗೆ ವಿವರಿಸಿದ್ದೇನೆ. ಧ್ಯಾನಪೀಠಕ್ಕೆ ಸಾಧಕರೊಬ್ಬರನ್ನು ಮುಖ್ಯ ಸ್ವಾಮೀಜಿಯಾಗಿ ನೇಮಿಸುವಂತೆ ಆಡಳಿತ ಮಂಡಳಿಗೆ ಕೇಳಿಕೊಂಡಿದ್ದೇನೆ. ಆಡಳಿತ ಮಂಡಳಿಯ ಎಲ್ಲಾ ಟ್ರಸ್ಟಿಗಳನ್ನು ಹೊಸದಾಗಿ ನೇಮಕ ಮಾಡಲಾಗುವುದು. ನೂತನವಾಗಿ ನೇಮಕವಾಗಲಿರುವ ಸ್ವಾಮೀಜಿಗೆ ಎಲ್ಲರೂ ಸಹಕಾರ ನೀಡುವಂತೆ ಕೋರುತ್ತೇನೆ ಎಂದು ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಿದ್ದಾನೆ.

ಇತ್ತೀಚಿನ ವಿದ್ಯಮಾನಗಳು ನನಗೆ ಯಾವುದೇ ರೀತಿಯ ಭಂಗ ತರುವುದಿಲ್ಲ. ನಾನು ಮತ್ತೆ ಧ್ಯಾನಪೀಠಕ್ಕೆ ಹಿಂದಿರುಗುತ್ತೇನೆ. ನನ್ನ ವಿವರಣೆ ಅಗತ್ಯ ಎಂದು ಕಂಡುಬಂದಲ್ಲಿ ಭಕ್ತಕೋಟಿಗೆ ಸಂಪೂರ್ಣ ವಿವರಣೆ ನೀಡುತ್ತೇನೆ. ಲಕ್ಷಾಂತರ ಭಕ್ತರು ತುಂಬು ಹೃದಯದಿಂದ ನೀಡುತ್ತಿದ್ದ ತನು,ಮನ ಮತ್ತು ಧನ ಸಹಕಾರವನ್ನು ಮುಂದುವರಿಸಿಕೊಂಡು ಬನ್ನಿ ಎಂದು ನಿತ್ಯಾನಂದ ತನ್ನ ಪ್ರಕಟಣೆಯಲ್ಲಿ ತಿಳಿಸಿದ್ದಾನೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X