ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಜೆಟ್ ಸಮಯದಲ್ಲಿ ಗೌಡರಿಗೆ ನಿದ್ದೆಯೇ ನಿದ್ದೆ!

By Mrutyunjaya Kalmat
|
Google Oneindia Kannada News

Devegowda
ನವದೆಹಲಿ, ಮಾ. 30 : ಸಂಯುಕ್ತ ರಂಗದ ಸರಕಾರದಲ್ಲಿ ತಾನು ಹಣಕಾಸು ಮಂತ್ರಿಯಾಗಿದ್ದಾಗ ಬಜೆಟ್ ಓದುತ್ತಿರುವ ಸಮಯದಲ್ಲಿ ಅಂದಿನ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ನಿದ್ದೆ ಮಾಡುತ್ತಿದ್ದುದು ನನಗೆ ಈಗಲೂ ನೆನಪಿದೆ ಎಂದು ಬಿಸಿನೆಸ್ ಸ್ಟ್ಯಾಂಡರ್ಡ್ ಪತ್ರಿಕೆಗೆ ನೀಡಿದ ಸಂದರ್ಶನದಲ್ಲಿ ಇಂತಹ ಅನೇಕ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ತಮಿಳುನಾಡಿನಲ್ಲಿ ಎಐಎಡಿಎಂಕೆ ಜತೆ ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದ್ದನ್ನು ಪ್ರತಿಭಟಿಸಿದ್ದ ಚಿದಂಬರಂ, 1996ರಲ್ಲಿ ಮೂಪನಾರ್ ಅವರ 'ತಮಿಳು ಮಾನಿಲ ಕಾಂಗ್ರೆಸ್' ಸೇರಿದ್ದರು. ಆ ಚುನಾವಣೆಯಲ್ಲಿ (1996) ಸಾಕಷ್ಟು ಸ್ಥಾನಗಳನ್ನು ಗೆದ್ದಿದ್ದ ಟಿಎಂಸಿ ನೆರವಿನಿಂದ ಸಂಯುಕ್ತ ರಂಗದ ಸರಕಾರ ಅಧಿಕಾರಕ್ಕೆ ಬಂದಿತ್ತು. ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದ ಈ ಸರಕಾರದಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದರು.

ಹಳೆಯ ದಿನಗಳು ನನ್ನ ಅತ್ಯುತ್ತಮ ದಿನಗಳು. ಸಂಯುಕ್ತ ರಂಗದಲ್ಲಿ ನಮ್ಮನ್ನು ಯಾರೂ ಪ್ರಶ್ನೆ ಮಾಡಿರಲಿಲ್ಲ. ಸರಕಾರವು ಪತನವಾಗುತ್ತದೆ ಎಂಬುದು ನಮಗೆಲ್ಲರಿಗೂ ಗೊತ್ತಿತ್ತು. ಆದರೆ ಅದುವರೆಗೆ ನಾವು ಏನನ್ನು ಬಯಸುತ್ತೇವೋ ಅದನ್ನು ಮಾಡಬಹುದಿತ್ತು. 1997ರ ಆಯವ್ಯಯ ಪಟ್ಟಿಯಲ್ಲಿ (ಬಜೆಟ್) ನಾನು ಬಡ್ಡಿ ದರಗಳನ್ನು ಕಡಿತಗೊಳಿಸಿದ್ದೆ. ವಿದೇಶಿ ನೇರ ಬಂಡವಾಳವನ್ನು ಮುಕ್ತವಾಗಿಸಿ, ಬಂಡವಾಳ ಹಿಂತೆಗೆತಕ್ಕೆ ಒತ್ತು ನೀಡಿದ್ದೆ. ಆಗ ದೇವೇಗೌಡರು ಪ್ರಧಾನ ಮಂತ್ರಿಯಾಗಿದ್ದರು ಎಂದು ಹೇಳಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X