ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಂಜನಗೂಡು-ಕಳಲೆ ರಥೋತ್ಸವ

By Shami
|
Google Oneindia Kannada News

Lord Kalale Lakshmikantha swamy
ಮೈಸೂರು, ಮಾ. 29 : ನಂಜನಗೂಡು ತಾಲೂಕಿನಲ್ಲಿರುವ ಪುರಾಣ ಪ್ರಸಿದ್ದ ಗ್ರಾಮ ಕಳಲೆಯಲ್ಲಿರುವ ಶ್ರೀ ಲಕ್ಷ್ಮೀಕಾಂತ ಸ್ವಾಮಿಯವರ ಬ್ರಹ್ಮ ರಥೋತ್ಸವವು ಗುರುವಾರ ಎಪ್ರಿಲ್ ಒಂದರಿಂದ ಆರಂಭವಾಗಲಿವೆ.

ಮುಜರಾಯಿ ಇಲಾಖೆ ಮತ್ತು ಮೈಸೂರಿನಲ್ಲಿರುವ ಶ್ರೀಲಕ್ಷ್ಮೀಕಾಂತ ಸೇವಾಭಿವರ್ಧಿನಿ ಸಭಾಗಳು ಜಂಟಿಯಾಗಿ ರಥೋತ್ಸವವನ್ನು ಹಮ್ಮಿಕೊಂಡಿವೆ. 1908 ರಿಂದ ಕಳಲೆ ಉತ್ಸವನ್ನು ನಡೆಸುತ್ತಾ ಬಂದಿರುವ ಕೀರ್ತಿ ಸೇವಾಭಿವರ್ಧಿನಿ ಸಂಸ್ಥೆಗೆ ಸಲ್ಲುತ್ತದೆ. ಇದರ ಅಂಗವಾಗಿ ಒಟ್ಟು ಒಂಬತ್ತು ದಿನಗಳ ಕಾಲ ನಾನಾ ಉತ್ಸವಗಳು ನಡೆಯಲಿದೆ. ರಥೋತ್ಸವಕ್ಕೆ ಬರುವವರಿಗಾಗಿ ನಂಜನಗೂಡಿನಿಂದ ವಿಶೇಷ ವಾಹನ ಸೌಲಭ್ಯ ಏರ್ಪಡಿಸಲಾಗಿದೆ. ಇದರ ಜತೆಗೆ ನಂಜನಗೂಡಿನಿಂದ ಕಳಲೆಗೆ ಪ್ರತಿ 45 ನಿಮಿಷಕ್ಕೆ ಕೆಎಸ್ಆರ್ಟಿಸಿ ಬಸ್ ಸೌಲಭ್ಯವಿದೆ.

ಊರು, ಉತ್ಸವ, ದೇವಸ್ಥಾನ ಮುಂತಾದ ವಿವರಗಳು ಈಗ ವೆಬ್ ನಲ್ಲಿ ಸಿಗುತ್ತವೆ. ಕಳಲೆ ರಥೋತ್ಸವಕ್ಕೆ ಖುದ್ದಾಗಿ ಹೋಗಲು ಸಾಧ್ಯವಾಗದವರು ವೆಬ್ ಮುಖಾಂತರ ಸ್ವಾಮಿ ದರ್ಶನ ಮಾಡಬಹುದು. ನೋಡಿ: www.kalalelakshmikantaswamy.org

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X