ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸಿ ಆರುವ ಮುನ್ನವೇ ಲೋಡ್ ಶೆಡ್ಡಿಂಗ್

By Mahesh
|
Google Oneindia Kannada News

Load shedding continues after BBMP polls
ಬೆಂಗಳೂರು, ಮಾ 29 : ಪರೀಕ್ಷೆ ನಡೆಯುತ್ತಿರುವ ಈ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಎಚ್ಚರ ವಹಿಸುತ್ತೇವೆ, ಎಷ್ಟೇ ಹಣ ಖರ್ಚಾದರೂ ವಿದ್ಯುತ್ ಖರೀದಿಸಿ ರಾಜ್ಯಕ್ಕೆ ಬೆಳಕು ನೀಡುತ್ತೇವೆ ಎಂದಿದ್ದ ಮುಖ್ಯಮಂತ್ರಿಗಳು ತಮ್ಮ ಮಾತಿಗೆ ತಪ್ಪಿದ್ದಾರೆ. ಬಿಬಿಎಂಪಿ ಚುನಾವಣೆಯ ಕೈಬೆರಳ ಮಸಿ ಆರುವ ಮುಂಚೆಯೇ ಸರಕಾರ ಮತ್ತೆ ಲೋಡ್ ಶೆಡ್ಡಿಂಗ್ ಜಾರಿ ತರಲು ಮುಂದಾಗಿದೆ.

ಇಂಧನ ಖಾತೆಯ ಮೂಲಗಳ ಪ್ರಕಾರ ಬೆಂಗಳೂರಿಗೆ 21 , ಇತರ ನಗರಗಳಿಗೆ 18 ರಿಂದ 20 , ಗ್ರಾಮೀಣ ಭಾಗಗಳಿಗೆ 12 ಗಂಟೆ ವಿದ್ಯುತ್ ಸರಬರಾಜು ಮಾಡಲು ನಿರ್ಧರಿಸಲಾಗಿದೆ. ಗ್ರಾಮೀಣ ಪ್ರದೇಶಗಳಿಗೆ ನೀಡುವ 12 ಗಂಟೆಗಳಲ್ಲಿ 6ಗಂಟೆ ತ್ರೀ ಫೇಸ್, 6ಗಂಟೆ ಸಿಂಗಲ್ ಫೇಸ್ ಕರೆಂಟ್ ನೀಡಲಾಗುವುದು. ಎಪ್ರಿಲ್ ಒಂದರಿಂದ ಎಸ್ಎಸ್ಎಲ್ಸಿ ಪರೀಕ್ಷೆ ಆರಂಭಗೊಳ್ಳುತ್ತಿರುವುದರಿಂದ ಸಂಜೆ 7ರಿಂದ ರಾತ್ರಿ 11ರವರೆಗೆ ವಿದ್ಯುತ್ ಕಟ್ ಮಾಡದಿರಲೂ ಸೂಚನೆ ನೀಡಲಾಗಿದೆ ಎಂದು ಇಲಾಖೆ ಅಧಿಕಾರಿಗಳಿಂದ ತಿಳಿದು ಬಂದಿದೆ.

ಸದ್ಯ ರಾಜ್ಯದಲ್ಲಿ 150 ದಶಲಕ್ಷ ಯುನಿಟ್ ವಿದ್ಯುತ್ ಬೇಡಿಕೆ ಇದ್ದು, ಪೂರೈಕೆ ಯಾಗುತ್ತಿರುವುದು 130 ದಶಲಕ್ಷ ಯುನಿಟ್ ಮಾತ್ರ. ಖಾಸಗಿ ಸಂಸ್ಥೆಗಳಾದ ಟಾಟಾ, ಜಿಂದಾಲ್, ಪಿಟಿಸಿ ಸಂಸ್ಥೆಗಳು ಹೆಚ್ಚು ಕಾಸು ನೀಡುವ ರಾಜ್ಯಗಳಿಗೆ ಅಧಿಕ ಪ್ರಮಾಣದಲ್ಲಿ ವಿದ್ಯುತ್ ಪೂರೈಸಲು ಮುಂದಾಗಿರುವುದರಿಂದ ಸಮಸ್ಯೆ ಇನ್ನಷ್ಟು ಉಲ್ಬಣಗೊಳ್ಳುವ ಸಾಧ್ಯತೆ ಇದೆ ಎಂದು ಇಲಾಖೆ ಅಧಿಕಾರಿಗಳು ಆತಂಕ ವ್ಯಕ್ತ ಪಡಿಸಿದ್ದಾರೆ.

ಭಾನುವಾರ ( ಮಾ 28 ) ಬಿಬಿಎಂಪಿ ಚುನಾವಣಾ ಪ್ರಕ್ರಿಯೆ ಮುಗಿದ ಕೂಡಲೇ ಬೆಂಗಳೂರಿನಲ್ಲಿ ಬಹುತೇಕ ಕಡೆ ವಿದ್ಯುತ್ ಕಡಿತ ಆರಂಭಗೊಂಡಿತ್ತು. ಕಳೆದ ಲೋಕಸಭಾ ಚುನಾವಣೆಯ ನಂತರ ರಾಜ್ಯದ ಎಲ್ಲಾ ಭಾಗಳಲ್ಲಿ ಮನ ಬಂದಂತೆ ಲೋಡ್ ಶೆಡ್ಡಿಂಗ್ ಆರಂಭಗೊಂಡಿತ್ತು. ಗ್ರಾಮ ಪಂಚಾಯಿತಿ ಚುನಾವಣಾ ಪ್ರಕ್ರಿಯೆ ಸದ್ಯದಲ್ಲೇ ಶುರುವಾಗಿರುವುದರಿಂದ ಗ್ರಾಮೀಣ ಭಾಗಗಳಿಗೆ ಒಂದಷ್ಟು ಹೆಚ್ಚು ವಿದ್ಯುತ್ ಪೂರೈಕೆ ನಡೆದರೂ ಅಚ್ಚರಿ ಇಲ್ಲ. ಒಟ್ಟಿನಲ್ಲಿ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ದೇವರೇ ರಾಜ್ಯಕ್ಕೆ ಬೆಳಕು ನೀಡಬೇಕು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X