ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಧಾರವಾಡದಲ್ಲಿ ಹೀರೋಹೊಂಡಾ ಘಟಕ

By Mrutyunjaya Kalmat
|
Google Oneindia Kannada News

Hero honda
ಬೆಂಗಳೂರು, ಮಾ. 29 : ದ್ವಿಚಕ್ರ ವಾಹನ ಉದ್ಯಮದ ದಿಗ್ಗಜ ಹೀರೋಹೊಂಡಾ ಕಂಪನಿ ಧಾರವಾಡದಲ್ಲಿ ಉತ್ಪಾದನಾ ಘಟಕ ಆರಂಭಿಸಲು ಸಜ್ಜಾಗಿದೆ. ಈ ಸಂಬಂಧ ರಾಜ್ಯ ಸರಕಾರ 500 ಎಕರೆ ಭೂಮಿಯನ್ನು ಮಂಜೂರು ಮಾಡಿದೆ.

ಉತ್ಪಾದನಾ ಘಟಕ ಆರಂಭಕ್ಕೆ ಸಂಬಂಧಿಸಿದಂತೆ ಕಂಪನಿ ತಾತ್ವಿಕ ಒಪ್ಪಿಗೆ ನೀಡಿದೆ. ಹುಬ್ಬಳ್ಳಿ ವಿಮಾನ ನಿಲ್ದಾಣದ ಬಳಿ ನಿವೇಶನ ಮಂಜೂರು ಮಾಡಿದ್ದೇವೆ. ಬಿಬಿಎಂಪಿ ಚುನಾವಣೆ ಕಾರಣದಿಂದ ಅಂತಿಮ ಸುತ್ತಿನ ಮಾತುಕತೆ ವಿಳಂಬವಾಗಿದ್ದು, ಶೀಘ್ರದಲ್ಲಿ ಕಂಪನಿಯಿಂದ ಘಟಕಕ್ಕೆ ಅಧಿಕೃತ ಅನುಮೋದನೆ ದೊರೆಯಲಿದೆ. ಮುಂದಿನ 18ತಿಂಗಳೊಳಗೆ ಘಟಕದ ಕಾಮಗಾರಿ ಆರಂಭವಾಗಲಿದೆ ಎಂದು ಬೃಹತ್ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.

ಆರಂಭದಲ್ಲಿ ಕಂಪನಿ 2,000 ಕೋಟಿ ರುಪಾಯಿಗಳನ್ನು ಹೂಡಿಕೆ ಮಾಡಲಿದ್ದು, ವಾರ್ಷಿಕ 1 ಲಕ್ಷ ವಾಹನ ಸಾಮರ್ಥ್ಯ ಹೊಂದಿರುವ ಘಟಕಕ್ಕೆ ಸುಮಾರು 800-1000 ಉದ್ಯೋಗಿಗಳನ್ನು ಕಂಪನಿ ನೇಮಕ ಮಾಡಿಕೊಳ್ಳಲಿದೆ ಎಂದು ಅವರು ವಿವರಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X