ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೆಹಲಿ ಕನ್ನಡಶಾಲೆ ಚುನಾವಣಾ ಫಲಿತಾಂಶ

By Shami
|
Google Oneindia Kannada News

GM Lingaraju
ನವದೆಹಲಿ, ಮಾ.29 : ದೆಹಲಿ ಕನ್ನಡ ಎಜುಕೇಷನ್ ಸೊಸೈಟಿಯ ಜಿ.ಎಂ. ಲಿಂಗರಾಜು ಅವರು ಸೊಸೈಟಿಯ ಗೌರವ ಅಧ್ಯಕ್ಷರಾಗಿ ಆಯ್ಕೆ ಚುನಾಯಿತರಾಗಿದ್ದಾರೆ. ಮಾರ್ಚ್ 28ರ ಭಾನುವಾರ ಇಲ್ಲಿ ನಡೆದ ಚುನಾವಣೆಯಲ್ಲಿ ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಹಿರಿಯ ವಕೀಲ ಎಸ್.ಎಸ್. ಜವಳಿ ಅವರನ್ನು ನಾಲಕ್ಕು ಮತಗಳ ಅಂತರದಿಂದ ಪರಾಭವಗೊಳಿಸಿ ಜಯಶೀಲರಾಗಿದ್ದಾರೆ. ಲಿಂಗರಾಜು ಅವರಿಗೆ 201 ಮತಗಳು ಬಂದರೆ ಜವಳಿ ಅವರಿಗೆ 197 ಮತಗಳು ಲಭಿಸಿದವು.

ಗೌರವ ಉಪಾಧ್ಯಕ್ಷರಾಗಿ ಡಾ. ಅಹಲ್ಯಾ ಚಿಂತಾಮಣಿ (191 ಮತಗಳು) ಮತ್ತು ಕೆ. ಈಶ್ವರ ಭಟ್ (193 ಮತಗಳು) ಅವರು ಆಯ್ಕೆಯಾದರೆ, ಗೌರವ ಕಾರ್ಯದರ್ಶಿಯಾಗಿ ಅಂಜನಿಗೌಡ (221 ಮತಗಳು) ಮತ್ತು ಖಜಾಂಚಿಯಾಗಿ ಬಸವರಾಜ್ ಮೇಟಿ (201 ಮತಗಳು) ಅವರು ಆಯ್ಕೆಯಾದರು. ಅವರುಗಳು ಕ್ರಮವಾಗಿ ಚಿದಾನಂದಮೂರ್ತಿ, ಲಕ್ಷ್ಮಣ ಮಲ್ಯ, ಎಸ್.ಎಸ್. ಕುಲಕರ್ಣಿ ಮತ್ತು ಕೆ.ಆರ್. ರಾಮಮೂರ್ತಿ ಅವರನ್ನು ಸೋಲಿಸಿದರು.

ಅತ್ಯಂತ ತುರುಸಿನ ಸ್ಪರ್ಧೆಯಲ್ಲಿ ನೇರ ಹಣಾಹಣಿ ನಡೆದು ಗೆಲುವಿನ ಅಂತರ ಕಡಿಮೆಯಾಯಿತು. ಜವಳಿ ಅವರ ವಿರುದ್ಧ ಲಿಂಗರಾಜು ಅವರು ಕೇವಲ ನಾಲ್ಕು ಮತಗಳಿಂದ ಜಯಗಳಿಸಿದರೆ, ಡಾ. ಅಹಲ್ಯಾ ಅವರು ಚಿದಾನಂದಮೂರ್ತಿ ಅವರ ವಿರುದ್ಧ 9 ಮತಗಳ ಅಂತರದಿಂದ ಗೆದ್ದರು. ಈಶ್ವರ ಭಟ್ಟರು ಲಕ್ಷ್ಮಣ ಮಲ್ಯ ಅವರ ವಿರುದ್ಧ 32 ಮತಗಳ ಅಂತರದಿಂದ ಗೆದ್ದರೆ, ಕುಲಕರ್ಣಿ ಅವರ ವಿರುದ್ಧ ಅತಿ ಹೆಚ್ಚು ಅಂದರೆ 43 ಮತಗಳ ಅಂತರದಿಂದ ಅಂಜನಿಗೌಡ ಅವರು ವಿಜಯಿಯಾದರು. ರಾಮಮೂರ್ತಿ ವಿರುದ್ಧ ಮೇಟಿ ಅವರ ಗೆಲುವಿನ ಅಂತರ 11 ಮತಗಳು.

ಒಟ್ಟು 411 ಮತಗಳು ಚಲಾವಣೆಯಾಗಿದ್ದವು. ಅದರಲ್ಲಿ ಐದಕ್ಕೂ ಅಧಿಕ ಕುಲಗೆಟ್ಟ ಮತಗಳಿದ್ದವು ಎಂದು ಚುನಾವಣಾಧಿಕಾರಿಗಳು ತಿಳಿಸಿದರು. ವಿಜೇತ ಸದಸ್ಯರು: ಒಟ್ಟು 10 ಸದಸ್ಯರ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಈ ಕೆಳಕಂಡವರು ವಿಜೇತರಾಗಿದ್ದಾರೆ. ಡಾ. ಪುರುಷೋತ್ತಮ ಬಿಳಿಮಲೆ, ಸಿ.ಎಂ. ನಾಗರಾಜ್, ಬಿ.ಕೆ. ಬಸವರಾಜು, ಎನ್.ಆರ್. ಶ್ರೀನಾಥ್, ಕೆ. ರಾಧಾಕೃಷ್ಣ, ಚೆನ್ನು ಎಸ್. ಮಠದ, ಜಿ.ಎಂ. ಭಾರತಿ, ಸಿ.ಎಂ. ಮಂಜುನಾಥಶೆಟ್ಟಿ, ಶಕುಂತಲಾ ನಾಯಕ್, ಡಾ. ಎಂ.ಎಸ್ ಶಶಿಕುಮಾರ್.

ಈ ಸಮಿತಿಯು ಎರಡು ವರ್ಷಗಳ ಕಾಲ ದೆಹಲಿ ಕನ್ನಡ ಎಜುಕೇಷನ್ ಸೊಸೈಟಿಯ ಆಡಳಿತ ಮಂಡಳಿಯನ್ನು ನಡೆಸಿಕೊಂಡು ಹೋಗಲು ಅರ್ಹತೆ ಪಡೆದುಕೊಂಡಿತು. ಇದು ಕನ್ನಡ ಶಾಲೆಯ ಸುವರ್ಣ ಮಹೋತ್ಸವ ವರ್ಷವೂ ಆಗಿರುವುದರಿಂದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳನ್ನು ಹಮ್ಮಿಕೊಳ್ಳಲು ಹೊಸ ತಂಡ ಉತ್ಸುಕವಾಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X