ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಫೋರ್ ಸಮೀಕ್ಷೆಯಲ್ಲಿ ಬಿಜೆಪಿಗೆ ಮೇಲುಗೈ

By Mrutyunjaya Kalmat
|
Google Oneindia Kannada News

BBMP polls survey
ಬೆಂಗಳೂರು, ಮಾ. 25 : ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರಕ್ಕೆ ಉರುಗೋಲಾದವರು ಪಕ್ಷೇತರ ಶಾಸಕರು, ಸದ್ಯ ನಡೆಯುತ್ತಿರುವ ಬಿಬಿಎಂಪಿ ಚುನಾವಣೆಯಲ್ಲಿ ಪಕ್ಷೇತರ ಕಾರ್ಪೋರೇಟರ್ ಗಳದ್ದೇ ಕಾರುಬಾರು ಎಂಬ ಸಂಗತಿ ಹೊರಬಿದ್ದಿದೆ. ಕನ್ನಡ ಪ್ರಭ, ಸುವರ್ಣ ನ್ಯೂಸ್ ವಾಹಿನಿ ಹಾಗೂ ಸಿ-ಫೋರ್ ಸಂಸ್ಥೆಗಳು ನಡೆಸಿದ ಸಮೀಕ್ಷೆಯಲ್ಲಿ ಹೊರಹೊಮ್ಮಿರುವ ಅಂಶವಿದು.

ಸಮೀಕ್ಷೆ ಪ್ರಕಾರ ಆಡಳಿತರೂಢ ಬಿಜೆಪಿ ಬಿಬಿಎಂಪಿ ಗದ್ದುಗೆಯ ಸಮೀಪ ಬಂದು ನಿಲ್ಲುತ್ತದೆ. ಕಾಂಗ್ರೆಸ್ ಜೆಡಿಎಸ್ ಸಹ ಬಿಜೆಪಿಯಿಂಜ ತುಸು ಅಂತರದಲ್ಲಿ ಇರುತ್ತವೆ. ಆಗ ನಿರ್ಣಾಯಕ ಪಾತ್ರವಹಿಸುವವರು 10 ರಿಂದ 20 ಸ್ಥಾನಗಳನ್ನು ಗೆಲ್ಲುವ ಸಂಭವವಿರುವ ಪಕ್ಷೇತರರು. ಸಿಫೋರ್ ಸಮೀಕ್ಷೆಯು ಬಿಜೆಪಿ 85ರಿಂದ 95 ಸ್ಥಾನ ಗೆಲ್ಲಬಹುದು. ಬೆನ್ನಲ್ಲೇ ಇರುವ ಕಾಂಗ್ರೆಸ್ 65 ರಿಂದ 75 ಸ್ಥಾನಗಳಲ್ಲಿ ಜಯಭೇರಿ ಬಾರಿಸಲಿದ್ದಾರೆ. 13 ರಿಂದ 25 ಸ್ಥಾನಗಳನ್ನು ಜೆಡಿಎಸ್ ಗೆದ್ದರೆ, 10 ರಿಂದ 20 ಸ್ಥಾನಗಳು ಪಕ್ಷೇತರರ ಪಾಲಾಗಲಿವೆ.

ಇದರರ್ಥ ಸ್ವಂತ ಬಲದ ಮೇಲೆ ಯಾವ ಪಕ್ಷಗಳು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಹೀಗಾಗಿ ನಿರ್ಣಾಯಕ ಹಂತದಲ್ಲಿ ಬಿಬಿಎಂಪಿ ಗದ್ದುಗೆಗಾಗಿ ಮತ ಚಲಾಯಿಸುವ ಹಕ್ಕು ಹೊಂದಿರುವ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರ ಸಂಖ್ಯೆಯೂ ಮಹತ್ವ ಎನಿಸಲಿದೆ. ಪ್ರಸ್ತಪ ಇದರಲ್ಲಿ ಬಿಜೆಪಿಯೇ ಮುಂದಿದ್ದು, 17 ಶಾಸಕರು, 4 ಮಂದಿ ಸಂಸದರು ಮತ್ತು 6 ಮಂದಿ ವಿಧಾನ ಪರಿಷತ್ ಸದಸ್ಯರನ್ನು ಹೊಂದಿದೆ ಎಂದು ಸಮೀಕ್ಷೆ ತಿಳಿಸಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X