ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊಡಗಿನ ಕಲಿ ಕಿಕ್ ಗೆ ಟುಸ್ ಆದ ಚೆನ್ನೈ

By Mahesh
|
Google Oneindia Kannada News

Robin Uthappa
ಬೆಂಗಳೂರು, ಮಾ.24: ಕೊಡಗಿನ ಕಲಿ ರಾಬಿನ್ ಉತ್ತಪ್ಪ ಬಾರಿಸಿದ ಭರ್ಜರಿ ಸಿಕ್ಸರ್ ಗಳನ್ನು ಮೂಕವಿಸ್ಮಿತರಾಗಿ ನೋಡುತ್ತಿದ್ದ ಚೆನ್ನೈ ಆಟಗಾರರು, ನಂತರ ವಿನಯ್ ಕುಮಾರ್ ಬೌಲಿಂಗ್ ಮೋಡಿಗೆ ಸಿಲುಕಿ ತತ್ತರಿಸಿಬಿಟ್ಟರು. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 3 ನೇ ಆವೃತಿಯ ಹದಿನೆಂಟನೆಯ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಅಮೋಘ ಜಯ ದಾಖಲಿಸುವ ಮೂಲಕ ಬೆಂಗಳೂರು ರಾಯಲ್ ಚಾಲೆಂಜರ್ಸ್ ತಂಡ ಅಂಕಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.

ಟಾಸ್ ಸೋತರೂ ಮೊದಲು ಬ್ಯಾಟಿಂಗ್‌ ಅವಕಾಶ ಗಿಟ್ಟಿಸಿಕೊಂಡ ಬೆಂಗಳೂರು ತಂಡದ ಆರಂಭ ಕಾಣಲಿಲ್ಲ. ಸತತ ನಾಲ್ಕು ಪಂದ್ಯಗಳಲ್ಲಿ ಅಜೆಯರಾಗಿ ಉಳಿದಿದ್ದ ಜಾಕ್ವಾಸ್ ಕಾಲಿಸ್ (19) ಮೊದಲ ಬಾರಿಗೆ ವಿಕೆಟ್ ಒಪ್ಪಿಸಿ ಹೊರನಡೆದರು. ಭರವಸೆಯ ಆಟಗಾರ ಮನೀಷ್ ಪಾಂಡೆ (20) ಉತ್ತಮ ಆರಂಭ ಪಡೆದರೂ ಹೆಚ್ಚು ಹೊತು ಕ್ರೀಸ್ ನಲ್ಲಿ ನಿಲ್ಲಲಿಲ್ಲ. ದ್ವಿತೀಯ ಕ್ರಮಾಂಕಕ್ಕೆ ಭಡ್ತಿ ಪಡೆದು ಬಂದ ರಾಹುಲ್ ದ್ರಾವಿಡ್ (14) ಕೂಡಾ ದೊಡ್ಡ ಹೊಡೆತಕ್ಕೆ ಕೈ ಹಾಕಿ ವಿಕೆಟ್ ಚೆಲ್ಲಿದರು.

ಆದರೆ , ನಂತರ ಬಂದ ರಾಬಿನ್ ಉತ್ತಪ್ಪ ಎರಡು ಬಾರಿ ಸಿಕ್ಕಿದ ಅಮೂಲ್ಯ ಜೀವದಾನ ಸಿಕ್ಕಿದ ಲಾಭ ಪಡೆದು ಮೈದಾನದಲ್ಲಿ ಸಿಕ್ಸರುಗಳ ಮೇಲೆ ಸಿಕ್ಸರ್ ಸಿಡಿಸಿದರು. ಉತ್ತಪ್ಪ 5 ಹಾಗೂ 25 ರನ್ ಗಳಿಸಿದ್ದಾಗ ಆರ್. ಅಶ್ವಿನ್ ಹಾಗೂ ಮುರಳಿ ವಿಜಯ್ ಕ್ಯಾಚ್ ಕೈಚೆಲ್ಲಿದ್ದರು.ರಾಬಿನ್ ಉತ್ತಪ್ಪ ಬಾರಿಸಿದ ಬಿರುಸಿನ ಅರ್ಧಶತಕ (ಅಜೇಯ 68, 38ಎಸೆತ ,6 ಸಿಕ್ಸರ್, 3 ಬೌಂಡರಿ) . ಬೌಷರ್ (ಅಜೇಯ 11 ರನ್ ) ಜೊತೆ ಸೇರಿ ಉತ್ತಪ್ಪ ಆರನೇ ವಿಕೆಟ್‌ಗೆ ಕೇವಲ 19 ಎಸೆತಗಳಲ್ಲಿ ಮುರಿಯದ 52 ರನ್ ಒಟ್ಟು ಸೇರಿಸಿದ್ದು ನಿಗದಿತ 20 ಓವರುಗಳಲ್ಲಿ 171 ರನ್ನುಗಳ ಸವಾಲಿನ ಮೊತ್ತವನ್ನು ಪೇರಿಸಲು ಸಾಧ್ಯವಾಯಿತು.

ವಿರಾಟ್ ಕೊಹ್ಲಿ ಕೂಡ 24 ರನ್ ಗಳಿಸಿ ತಂಡದ ಮೊತ್ತಕ್ಕೆ ಉತ್ತಮ ಕೊಡೂಗೆ ನೀಡಿದರು.
ಆರ್ ಸಿಬಿ ಮೊತ್ತ ಬೆನ್ನಟ್ಟಿದ ಚೆನ್ನೈಸೂಪರ್ ಕಿಂಗ್ಸ್ ಆರಂಭದಿಂದಲೂ ಒತ್ತಡಕ್ಕೊಳಗಾಗಿ ಆಡಿತು. ಆರಂಭಿಕ ಆಟಗಾರ ಪಾರ್ಥಿವ್ ಪಾಟೇಲ್ (1), ಮ್ಯಾಥ್ಯೂ ಹೇಡನ್ (32), ಜಾರ್ಜ್ ಬೈಲಿ (18), ನಾಯಕ ಸುರೇಶ್ ರೈನಾ (9) ಮ್ತತು ಮುರಳಿ ವಿಜಯ್ (3) ವಿಕೆಟ್ ಒಪ್ಪಿಸಿ ಚೆನ್ನೈ ಅಭಿಮಾನಿಗಳಿಗೆ ನಿರಾಶೆ ಮೂಡಿಸಿದರು.

ಅಂತಿಮ ಹಂತದಲ್ಲಿ ಎಸ್ ಬದರಿನಾಥ್ (31) ಮತ್ತು ಆಲ್ಬಿ ಮೊರ್ಕೆಲ್ (19) ವ್ಯರ್ಥ ಹೋರಾಟ ನಡೆಸಿದ್ದು ಪ್ರಯೋಜನಕ್ಕೆ ಬರಲಿಲ್ಲ. ಅಂತಿಮವಾಗಿ ರೈನಾ ಪಡೆ 20 ಓವರುಗಳಲ್ಲಿ ಏಳು ವಿಕೆಟ್ ನಷ್ಟಕ್ಕೆ 135 ರನ್ ಗಳಿಸಲಷ್ಟೇ ಸಾಧ್ಯವಾಯಿತು.ಆರ್ ಸಿಬಿ ಪರ ಮಾರಕ ದಾಳಿ ನಡೆಸಿದ ದಾವಣಗೆರೆ ಎಕ್ಸ್ ಪ್ರೆಸ್ ವಿನಯ್ ಕುಮಾರ್ ನಾಲ್ಕು ಹಾಗೂ ಅನುಭವಿ ಬೌಲರ್ ಅನಿಲ್ ಕುಂಬ್ಳೆ ಮತ್ತು ಪ್ರವೀಣ್ ಕುಮಾರ್ ತಲಾ ಒಂದು ವಿಕೆಟ್ ಗಳಿಸಿದರು.

ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಚೆನ್ನೈ ವಿರುದ್ಧದ ಪಂದ್ಯವನ್ನು 36 ರನ್ನುಗಳ ಅಂತರದಿಂದ ಗೆದ್ದು ಜಯಭೇರಿ ಬಾರಿಸಿತು.ಈ ಮೂಲಕ ಸತತ ನಾಲ್ಕನೇ ಜಯ ದಾಖಲಿಸಿರುವ ಅನಿಲ್ ಕುಂಬ್ಳೆ ಬಳಗ ಎಂಟು ಪಾಯಿಂಟ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ್ಕಕೇರಿದೆ.ಬಿರುಸಿನ ಬ್ಯಾಟಿಂಗ್ ನಡೆಸಿದ ಉತ್ತಪ್ಪ ಪಂದ್ಯಶ್ರೇಷ್ಠ ಪ್ರಶಸ್ತಿ ಗಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X