ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಕ್ಸಲ್ ಸಂಸ್ಥಾಪಕ ಸನ್ಯಾಲ್ ಆತ್ಮಹತ್ಯೆ

By Mahesh
|
Google Oneindia Kannada News

Kanu Sanyal
ಸಿಲಿಗುರಿ ( ಪ.ಬ), ಮಾ 23 : ನಕ್ಸಲ್ ಚಳುವಳಿಯ ಸಂಸ್ಥಾಪಕರಾಗಿದ್ದ ಕಾನು ಸನ್ಯಾಲ್ ತಮ್ಮ ನಿವಾಸದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ವರದಿಯಾಗಿದೆ. ಇಲ್ಲಿಂದ 25 ಕಿ.ಮೀ ದೂರದ ಸೇಫ್ತುಲ್ಲಾಜೋಟೆ ಎನ್ನುವ ಗ್ರಾಮದ ತಮ್ಮ ನಿವಾಸದಲ್ಲಿ ಸನ್ಯಾಲ್ ಮೃತ ಪಟ್ಟಿದ್ದಾರೆ.

75 ವರ್ಷದ ಅವಿವಾಹಿತ ಸನ್ಯಾಲ್ ವಯಸ್ಸಿಗೆ ಸಂಬಂಧಪಟ್ಟ ಕಾಯಿಲೆಯಿಂದ ಬಳಲುತ್ತಿದ್ದರು. 1969 ರಲ್ಲಿ ಇವರು ಸಿಪಿಐ ( ಮಾರ್ಕಿಸ್ಟ್ ಲೆನಿನ್) ಪಕ್ಷವನ್ನು ಸ್ಥಾಪಿಸಿದ್ದರು. ಮೇ 25 , 1967 ರಲ್ಲಿ ಸನ್ಯಾಲ್ ಚಾರು ಮಜುಂದಾರ್ ಜೊತೆ ಸೇರಿ ಉತ್ತರ ಬಂಗಾಳದ ನಕ್ಸಲ್ಬಾರಿ ಎನ್ನುವ ಸಣ್ಣ ಗ್ರಾಮದಲ್ಲಿ ನಕ್ಸಲ್ ಚಳುವಳಿ ಆರಂಭಿಸಿದ್ದರು. ಮರಣೋತ್ತರ ಪರೀಕ್ಷೆ ನಡೆದಿದ್ದು ಶವವನ್ನು ಸಂಬಂಧಪಟ್ಟವರಿಗೆ ನೀಡಲಾಗಿದೆ ಎಂದು ಉತ್ತರ ಬಂಗಾಳದ ಪೋಲಿಸ್ ನಿರ್ದೇಶಕ ಕೆ ಎಲ್ ತಮ್ತಾ ಹೇಳಿಕೆ ನೀಡಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X