ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬ್ಯಾಂಕ್ ವ್ಯವಹಾರ ರಸಪ್ರಶ್ನೆ : ವಿಜೇತ ವಿದ್ಯಾರ್ಥಿಗಳು

By Prasad
|
Google Oneindia Kannada News

Financial literacy quiz competiton winners
ಬೆಂಗಳೂರು, ಮಾ. 22 : ಭಾರತೀಯ ರಿಸರ್ವ್‌ ಬ್ಯಾಂಕಿನ 75ನೇ ವರ್ಷಾಚರಣೆ ಹಿನ್ನೆಲೆಯಲ್ಲಿ ಆರ್ಥಿಕ ಸಾಕ್ಷರತಾ ಯೋಜನೆಯಡಿ ಬ್ಯಾಂಕ್ ವ್ಯವಹಾರಗಳು ಹಾಗೂ ಉಳಿತಾಯ ಸೇವೆಗಳ ಕುರಿತಂತೆ ಮೂರು ವಿಭಾಗಗಳಲ್ಲಿ ಪ್ರೌಢಶಾಲಾ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗೆ ರಾಜ್ಯಮಟ್ಟದ ಕ್ವಿಜ್ ಸ್ವರ್ಧೆಯನ್ನು ಏರ್ಪಡಿಸಲಾಗಿತ್ತು.

ತಾಲ್ಲೂಕು ಹಾಗೂ ಜಿಲ್ಲಾಮಟ್ಟದಲ್ಲಿ ವಿಜೇತರಾದ ಮಕ್ಕಳು ರಾಜ್ಯಮಟ್ಟದ ಸ್ವರ್ಧೆಯಲ್ಲಿ ಭಾಗವಹಿಸಿ ಬಹುಮಾನಗಳಿಸಿರುವುದಲ್ಲದೆ, ಈ ಎಲ್ಲಾ ವಿದ್ಯಾರ್ಥಿಗಳು ತಮ್ಮ ಹೆಸರಿನಲ್ಲೇ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆಗಳನ್ನು ತೆರೆಯುವ ಮೂಲಕ ಬ್ಯಾಂಕಿಂಗ್ ವ್ಯವಹಾರವನ್ನು ಪ್ರಾರಂಭಿಸಿದ್ದಾರೆ. ರಾಜ್ಯಮಟ್ಟದ ಕ್ವಿಜ್‌ನಲ್ಲಿ ವಿಜೇತರಾದ ವಿದ್ಯಾರ್ಥಿಗಳು ಕೇಂದ್ರ ಆರ್ಥಿಕ ಸಚಿವರಾದ ಪ್ರಣಬ್ ಮುಖರ್ಜಿ ಅವರಿಂದ ಬಹುಮಾನವನ್ನು ಪಡೆದುಕೊಂಡಿದ್ದು ವಿಜೇತ ವಿದ್ಯಾರ್ಥಿಗಳ ವಿವರ ಈ ಕೆಳಕಂಡಂತಿದೆ.

8 ಮತ್ತು 9ನೇ ತರಗತಿ ಕನ್ನಡ ವಿಭಾಗ : ಚಿಕ್ಕಮಗಳೂರು ಜಿಲ್ಲೆಯ ಹೊಳೆಕೊಪ್ಪ ಸರ್ಕಾರಿ ಪ್ರೌಢಶಾಲೆಯ ಆದಿತ್ಯ ಎಚ್.ಎನ್. ಮತ್ತು ಹರೀಶ್ ಎಂ.ಸಿ. ಪ್ರಥಮ ಬಹುಮಾನವನ್ನು, ಉತ್ತರ ಕನ್ನಡ ಜಿಲ್ಲೆಯ ಅಂಕೋಲ ಎನ್.ಎಸ್.ಸಿ. ಬೋಸ್ ಸರ್ಕಾರಿ ಕಾಂಪೋಸಿಟ್ ಪ್ರೌಢಶಾಲೆಯ ಅಪರ್ಣ ಎ ನಾಯ್ಕ ಹಾಗೂ ಸುವರ್ಣ ಎ ನಾಯ್ಕ ದ್ವಿತೀಯ ಬಹುಮಾನವನ್ನು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲ್ಲೂಕು ಶಾರದ ಬಾಲಕಿಯರ ಪ್ರೌಢಶಾಲೆಯ ವಿಜಯಲಕ್ಷ್ಮಿ ಜಿ.ಆರ್. ಹಾಗೂ ಜ್ಯೋತಿ ಎಲ್. ತೃತೀಯ ಸ್ಥಾನವನ್ನು ಪಡೆದಿದ್ದಾರೆ.

8 ಮತ್ತು 9ನೇ ತರಗತಿಯ ಆಂಗ್ಲ ವಿಭಾಗ : ಹಾಸನ ಜಿಲ್ಲೆಯ ಸೇಂಟ್ ಜೋಸೆಫ್ ಪ್ರೌಢಶಾಲೆಯ ಪ್ರಜ್ವಲ್ ಕಶ್ಯಪ್ ಹಾಗೂ ಕೆ.ಎಸ್. ಶಿವರಾಂ ಪ್ರಥಮ ಸ್ಥಾನವನ್ನು, ಚಿತ್ರದುರ್ಗ ಜಿಲ್ಲೆಯ ವಾರಿಯರ್ ಇಂಗ್ಲೀಷ್ ಸ್ಕೂಲ್‌ನ ಕೃತ್ತಿಕಾ ಎಸ್. ದ್ವಿತೀಯ ಸ್ಥಾನವನ್ನು, ಬೆಳಗಾವಿ ಜಿಲ್ಲೆಯ ಸೇಂಟ್ ಜೋಸೆಫ್ ಕಾನ್ವೆಂಟ್ ಹೈಸ್ಕೂಲ್‌ನ ಸಹನಾ ಜಾಗೀರ್‌ದಾರ್ ತೃತೀಯ ಬಹುಮಾನವನ್ನು ಪಡೆದಿದ್ದಾರೆ.

10ನೇ ತರಗತಿಯ ಕನ್ನಡ ವಿಭಾಗ : ರಾಯಚೂರಿನ ರೋಡಲಾ ಬಂಡ ಸರ್ಕಾರಿ ಪ್ರಾಥಮಿಕ ಶಾಲೆಯ ಶಾಂತವೀರ್ ಹಾಗೂ ಶ್ರೀಧರ್ ಪ್ರಥಮ ಬಹುಮಾನವನ್ನು, ಉತ್ತರ ಕನ್ನಡ ಜಿಲ್ಲೆಯ ವೀರೇಂದ್ರ ನಾಯಕ್ ಹಾಗೂ ಸಂಜಯ್ ನಾಯಕ್ ಇವರು ದ್ವಿತೀಯ ಬಹುಮಾನವನ್ನು, ಚಿಕ್ಕಮಗಳೂರು ಬಸವನಹಳ್ಳಿ ಸರ್ಕಾರಿ ಬಾಲಕಿಯರ ಕಿರಿಯ ಕಾಲೇಜಿನ ದಿವ್ಯ ಸಿ.ಎ. ಹಾಗೂ ಉಷಾ ಎನ್. ತೃತೀಯ ಬಹುಮಾನವನ್ನು ಪಡೆದಿದ್ದಾರೆ.

10ನೇ ತರಗತಿ ಇಂಗ್ಲೀಷ್ ವಿಭಾಗ : ಉಡುಪಿ ಜಿಲ್ಲೆಯ ಕಾರ್ಕಳ ಭುವನೇಂದ್ರ ಪ್ರಾಥಮಿಕ ಶಾಲೆಯ ಆಕಾಶ್ ಕೆ. ಹಾಗೂ ನೀಲಿಮಾ ಕೆ. ಕಾಮತ್ ಪ್ರಥಮ ಬಹುಮಾನವನ್ನು, ಹಾವೇರಿ ಜಿಲ್ಲೆಯ ಸವಣೂರಿನ ಮುರಾರ್ಜಿ ದೇಸಾಯಿ ವಸತಿ ಶಾಲೆ ಆನಂದ್ ಜಾದರ್ ಹಾಗೂ ಸಂತೋಷ್ ಹೊರಟ್ಟಿ ಇವರು ದ್ವಿತೀಯ ಸ್ಥಾನವನ್ನು, ಚಿಕ್ಕಬಳ್ಳಾಪುರ ಜಿಲ್ಲೆಯ ಶ್ರೀ ಸತ್ಯಸಾಯಿ ಕಾಲೇಜಿನ ನವೀನ್ ರಾಜ್ ಸಿ. ಹಾಗೂ ಚಿದಾನಂದ್ ಎಚ್.ಎ. ಇವರು ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪದವಿಪೂರ್ವ ಕನ್ನಡ ವಿಭಾಗ : ಉತ್ತರ ಕನ್ನಡ ಜಿಲ್ಲೆಯ ದುರ್ಗಾದೇವಿ ಪದವಿಪೂರ್ವ ಕಾಲೇಜಿನ ಮಹಾಮಾಯ ಎಸ್. ಕಾಮತ್ ಪ್ರಥಮ ಬಹುಮಾನವನ್ನು, ಚಿಕ್ಕಮಗಳೂರು ಜಿಲ್ಲೆಯ ಸರ್ಕಾರಿ ಕಿರಿಯ ಕಾಲೇಜಿನ ಮಹಮ್ಮದ್ ಅಬ್ರಾರ್ ಮತ್ತು ಟಿ. ರಾಕೇಶ್ ಇವರು ದ್ವಿತೀಯ ಸ್ಥಾನ, ಗುಲ್ಬರ್ಗಾ ಜಿಲ್ಲೆಯ ಮಹಾಂತಮ್ಮ ಪಿ.ಯು. ಕಾಲೇಜಿನ ಶಬನಾ ಮತ್ತು ಅನಿತಾ ಎಂ. ಪಾಟೀಲ್ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪದವಿಪೂರ್ವ ಆಂಗ್ಲ ವಿಭಾಗ : ಮಂಡ್ಯ ಜಿಲ್ಲೆಯ ವಿಶ್ವಮಾನವ ಪಿ.ಯು. ಕಾಲೇಜಿನ ನೀಲಂ ಜೈನ್ ಹಾಗೂ ಸ್ಪೂರ್ತಿ ವಿ. ಆಚಾರ್ಯ ಮೊದಲ ಬಹುಮಾನವನ್ನು, ಗುಲ್ಬರ್ಗಾ ಜಿಲ್ಲೆಯ ಜಿ.ಡಿ.ಎ.ಪಿ.ಯು. ಕಾಲೇಜಿನ ಮನೀಶ್ ಭಟ್ ಹಾಗೂ ಭಾಗ್ಯಶ್ರೀ ಚೌಹಾನ್ ದ್ವಿತೀಯ ಬಹುಮಾನವನ್ನು ಪಡೆದಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X