ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಚುನಾವಣೆ : ಕಾಂಗ್ರೆಸ್ ಪ್ರಣಾಳಿಕೆ

By Mrutyunjaya Kalmat
|
Google Oneindia Kannada News

Congress releases BBMP poll manifesto
ಬೆಂಗಳೂರು, ಮಾ.23 : ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ಕೊಳಗೇರಿ ನಿವಾಸಿಗಳು ಹಾಗೂ ಮಧ್ಯಮ ವರ್ಗದ ಮತದಾರರ ಓಲೈಕೆಯನ್ನು ಗುರಿಯಾಗಿಟ್ಟುಕೊಂಡು ಸಿದ್ಧಪಡಿಸಿರುವ ಪ್ರಣಾಳಿಕೆಯನ್ನು ಕೆಪಿಸಿಸಿ ಅಧ್ಯಕ್ಷ ಆರ್ ವಿ ದೇಶಪಾಂಡೆ ಪಕ್ಷದ ಕಚೇರಿಯಲ್ಲಿ ಬಿಡುಗಡೆ ಮಾಡಿದರು.

ಪ್ರಣಾಳಿಕೆಗಳ ಮುಖ್ಯಾಂಶಗಳು:
*ಬಡಕುಟುಂಬಗಳ ಬಗ್ಗೆ ಮಾಹಿತಿ ಸಂಗ್ರಹ,
*ವಿಶಿಷ್ಟ ಗುರುತಿನ ಚೀಟಿ ಮೂಲಕ ಆರೋಗ್ಯ ವಿಮೆ,
*ಸಾರಿಗೆ ಸೌಲಭ್ಯ, ಉಚಿತ ವಿದ್ಯಾಭ್ಯಾಸ ಮತ್ತಿತರ ಸವಲತ್ತುಗಳು.
*ಮುಂದಿನ ಐದು ವರ್ಷಗಳಲ್ಲಿ ಕೊಳಗೇರಿಗಳ ಸಂಪೂರ್ಣ ನಿವಾರಣೆ.
*ಪಾಲಿಕೆಗೆ ಸೇರಿದ ಶಾಲೆಗಳ ಅಭಿವೃದ್ಧಿ.
*ವಿದ್ಯಾರ್ಥಿಗಳ ಮಧ್ಯಾಹ್ನದ ಊಟದ ಜೊತೆಗೆ ಬೆಳಗಿನ ಉಪಹಾರ.
*ಬಡವರಿಗಾಗಿ ಆರೋಗ್ಯ ತಪಾಸಣೆ ಕೇಂದ್ರ ಸ್ಥಾಪನೆ.
*ನಿರುದ್ಯೋಗಿ ಮಹಿಳೆಯರಿಗೆ ಕೌಶಲ್ಯ ವೃದ್ಧಿ ತರಬೇತಿ.
*ಅಗತ್ಯವಿರುವ ಕಡೆಗೆ ಹೆರಿಗೆ ಕೇಂದ್ರ ಸ್ಥಾಪನೆ.
*ಮಕ್ಕಳ ಆರೋಗ್ಯರಕ್ಷಣಾ ಕೇಂದ್ರ ಸ್ಥಾಪನೆ.
*ಉಗ್ರರ ದಾಳಿ ಹತ್ತಿಕ್ಕಲು ವಿಶೇಷ ತುರ್ತು ಕಾರ್ಯಪಡೆ.
*ಪ್ರತಿ ವಾರ್ಡ್ ನಲ್ಲಿ ಸಮುದಾಯ ಭವನ.
*ನಾಗರಿಕರಿಗಾಗಿ ಏಕಗವಾಕ್ಷಿ ಸಹಾಯವಾಣಿ.
*ಸಾರಿಗೆ ವ್ಯವಸ್ಥೆ ಸುಧಾರಣೆ.
*ರಸ್ತೆಗಳ ಮೇಲ್ದರ್ಜೆಗೆ ಏರಿಸುವುದು.
*ಉದ್ಯಾನವನಗಳ ಅಭಿವೃದ್ಧಿ.
*ಮಳೆ ನೀರು ಶೇಖರಣೆ.
*ಜಲಮಟ್ಟ ನಿರ್ವಹಣೆ.
*ಕ್ರೀಡೆ, ಪ್ರವಾಸೋದ್ಯಮಕ್ಕೆ ಕಾರ್ಯಕ್ರಮ.
*ಬೀದಿ ನಾಯಿಗಳ ಕಾಟ ನಿವಾರಣೆ.
*ಕ್ಷೌರಿಕರು, ಕಮ್ಮಾರರು, ಅಗಸರು, ಚಮ್ಮಾರರು, ಅಟೋ ಚಾಲಕರು, ಮನೆ ಕೆಲಸದವರು, ಬೀಡಿ ಕಾರ್ಮಿಕರ ವ್ಯಾಪಾರಗಳಿಗೆ ನೆರವು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X