ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿನಿವಿಂಕ್ ಶಾಸ್ತ್ರಿ ಜಮೀನು ಹರಾಜಿಗೆ ಸಿದ್ಧ

By Mahesh
|
Google Oneindia Kannada News

Vinivinc Shastry
ಹೊಸಕೋಟೆ, ಮಾ.22: ವಿನಿವಿಂಕ್ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿ ಕಳೆದ ಐದು ವರ್ಷಗಳಿಂದ ತಾಳ್ಮೆಯಿಂದ ಕಾಯುತ್ತಿದ್ದ 20 ಸಾವಿರಕ್ಕೂ ಅಧಿಕ ಹೂಡಿಕೆದಾರರಿಗೆ ಸಿಹಿ ಸುದ್ದಿ ಇಲ್ಲಿದೆ. ವಿನಿವಿಂಕ್ ಮಾಲೀಕ ಕೆ ಎನ್ ಶ್ರೀನಿವಾಸ ಶಾಸ್ತ್ರಿ ಅವರ ಬಂಗಾರದಂಥ ಜಮೀನು ಮಾ.24ರಂದು ಸಾರ್ವಜನಿಕವಾಗಿ ಹರಾಜಾಗಲಿದೆ.

ಆರ್ಥಿಕ ಸಂಸ್ಥೆಗಳಲ್ಲಿ ಬಂಡವಾಳ ಹೂಡಿಕೆದಾರರಿಗೆ ಭದ್ರತೆ ಒದಗಿಸುವ ಕಾನೂನಿ(Karnataka Protection of Interest of Depositors in Financial Institutions Act, 2004)ನಡಿ ವಿನಿವಿಂಕ್ ಸೌಹಾರ್ದ ಲಿಮಿಟೆಡ್ ನ ಕೆಎನ್ ಶ್ರೀನಿವಾಸ ಶಾಸ್ತ್ರಿ ಅವರ ಕೆಲವು ಆಸ್ತಿಗಳನ್ನು ಸರ್ಕಾರಬಹಿರಂಗವಾಗಿ ಹರಾಜು ಮಾಡಿ ಹೂಡಿಕೆದಾರರಿಗೆ ಹಣ ಒದಗಿಸುತ್ತಿದೆ .

ಗುರುವಾರ ಬೆಳಗ್ಗೆ 10.30 ಕ್ಕೆ ಸರಿಯಾಗಿ ಹೊಸಕೋಟೆಯ ತಾಲೂಕು ಕಚೇರಿ ಆವರಣದಲ್ಲಿ ಹರಾಜು ಪ್ರಕ್ರಿಯೆ ಆರಂಭವಾಗಲಿದೆ. ಸೂಲಿಬೆಲೆ ಹೋಬಳಿಯ ಏಕರಾಜಪುರಪುರದಲ್ಲಿರುವ 26 ಎಕರೆ ಹಾಗೂ ಜಡಿಗನಹಳ್ಳಿ ಹೋಬಳಿಯ ಮುಗಬಾಲ ಗ್ರಾಮದಲ್ಲಿರುವ 17 ಗುಂಟೆ ವಿಸ್ತೀರ್ಣದ ಭೂಮಿಯನ್ನು ಹರಾಜುಮಾಡಲಾಗುತ್ತಿದೆ. ಹರಾಜಾಗುತ್ತಿರುವ ಎರಡೂ ಭೂಭಾಗ ಹೊಸಕೋಟೆ ತಾಲೂಕಿನಲ್ಲಿದೆ.

ಈ ಹರಾಜು ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಬಿಡ್ ಮಾಡಲು ಇಚ್ಛಿಸುವವರು ಮಾ.24ರೊಳಗೆ ಸಂಬಂಧಪಟ್ಟ ದಾಖಲೆಗಳೊಂದಿಗೆ ಈ ಕೆಳಗಿನ ವಿಳಾಸಕ್ಕೆ ಹೋಗಿ ನೋಂದಾಯಿಸಿಕೊಳ್ಳಬಹುದು.
ಉಪ ಆಯುಕ್ತರು, ದೊಡ್ಡಬಳ್ಳಾಪುರ ಉಪಶಾಖೆ
ಕಚೇರಿ ವಿಳಾಸ: ಪೋಡಿಯಂ ಬ್ಲಾಕ್, ವಿಶ್ವೇಶ್ವರಯ್ಯ ಟವರ್ಸ್, ಅಂಬೇಡ್ಕರ್ ಬೀದಿ, ಬೆಂಗಳೂರು.

ಕೇಸ್ ಹಿಸ್ಟರಿ: ಡಿ.30,2009 ರ ಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ವಿನಿವಿಂಕ್ ಸಂಸ್ಥೆ ಆಸ್ತಿ ವಶಕ್ಕೆ ತೆಗೆದುಕೊಂಡಿತು. ಇದಕ್ಕೆ ಜ.30, 2010 ರಂದು ಬೆಂಗಳೂರು ಗ್ರಾಮಾಂತರ ವಿಶೇಷ ನ್ಯಾಯಾಲಯ ಅನುಮೋದನೆ ನೀಡಿ, ಫೆ.6,2010ರಂದು ಸೇಲ್ ವಾರಂಟ್ ವಿತರಣೆ ಮಾಡಿತ್ತು. ಹೈಕೋರ್ಟ್ ಗೆ ವಿನಿವಿಂಕ್ ಶಾಸ್ತಿ ನೀಡಿರುವ ಹೇಳಿಕೆಯನ್ವಯ ಸುಮಾರು 20,184 ಹೂಡಿಕೆದಾರರು ಸುಮಾರು 203 ಕೋಟಿ ರೂಗಳನ್ನು ವಿನಿವಿಂಕ್ ಸೌಹಾರ್ದ ಲಿ.ನಲ್ಲಿ ಹೂಡಿಕೆ ಮಾಡಿದ್ದರು.ವಿನಿವಿಂಕ್ ಸಂಸ್ಥೆ ಬೆಂಗಳೂರು ಹಾಗೂ ಸುತ್ತಮುತ್ತ 49 ಕ್ಕೂ ಅಧಿಕ ನಿವೇಶನಗಳನ್ನು ಹೊಂದಿದ್ದು, ಅದರಲ್ಲಿ ಈಗ ಹರಾಜಾಗುತ್ತಿರುವ ಭೂಭಾಗವೂ ಸೇರಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X