ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಂಸ್ಕೃತ ವಿವಿ ವಿಧೇಯಕ ಆಚಾರ್ಯ ಹರ್ಷ

By Mahesh
|
Google Oneindia Kannada News

VS Acharya
ಉಡುಪಿ, ಮಾ.22: ಸದನದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯ ವಿಧೇಯಕ ಅಂಗೀಕಾರಕೊಂಡದ್ದರಿಂದ ಬಹುಜನರ ಕನಸು ಇಂದು ನನಸಾಗಿದೆ ಎಂದು ಗೃಹಸಚಿವ ವಿಎಸ್ ಆಚಾರ್ಯ ಹರ್ಷ ವ್ಯಕ್ತಪಡಿಸಿದರು. ಉಡುಪಿಯ ಸಂಚಾರ ವ್ಯವಸ್ಥೆ ಸುಧಾರಣೆ ಸಲುವಾಗಿ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಸುಮಾರು 12ಕ್ಕೂ ಅಧಿಕ ರಾಜ್ಯಗಳು ಸಂಸ್ಕೃತ ವಿವಿ ವಿಧೇಯಕವನ್ನು ಅಂಗೀಕರಿಸಿವೆ.ಎಲ್ಲ ಭಾಷೆಗಳ ಮಾತೃ ಸ್ಥಾನದಲ್ಲಿ ಸಂಸ್ಕೃತವಿದೆ. ಸಂಸ್ಕೃತ ಜನ ಸಾಮಾನ್ಯರನ್ನು ತಲುಪಬೇಕು .ಜರ್ಮನಿ, ಜಪಾನ್ ಹಾಗೂ ಅಮೆರಿಕದಲ್ಲಿ ಸಂಸ್ಕೃತ ಭಾಷಾ ಅಧ್ಯಯನ ಪೀಠಗಳಿವೆ.ಆದರೆ, ನಮ್ಮವರು ಏಕೆ ವಿರೋಧ ವ್ಯಕ್ತಪಡಿಸುತ್ತಾರೆ ತಿಳಿಯುತ್ತಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಪ್ರಸಕ್ತ ವರ್ಷ ಸುಮಾರು 200 ಕೋಟಿ ರೂ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕನ್ನಡವನ್ನು ಕಡೆಗಣಿಸುವ ಪೈಕಿ ಅಲ್ಲ ಎಂದರು. ಗೋಹತ್ಯೆ ನಿಷೇಧ ವಿಧೇಯಕವನ್ನು ಸಮರ್ಥಿಸಿಕೊಂಡ ಗೃಹಸಚಿವರು, ಮುಸ್ಲಿಂ ಬಹುಸಂಖ್ಯೆಯಲ್ಲಿರುವ ರಾಜ್ಯಗಳಲ್ಲೇಈ ವಿಧೇಯಕ ಜಾರಿಗೆ ಬಂದು ಎರಡು ಮೂರು ದಶಕಗಳಾಗಿವೆ. ನಮ್ಮ ರಾಜ್ಯದಲ್ಲಿ ಸುಮ್ಮನೆ ವಿರೋಧಿಸುತ್ತಿದ್ದಾರೆ ಎಂದರು.

ಉಡುಪಿ ನಗರದ ಸಂಚಾರ ವ್ಯವಸ್ಥೆ ಹತೋಟಿಗಾಗಿ ಡಿಜಿಟಲ್ ಕ್ಯಾಮೆರಾ, ಲೇಸರ್ ಗನ್, ಅಲ್ಕೋಹಾಲ್ ಬ್ರೆಥ್ ಅನಲೈಸರ್, ರೂಫ್ ಟಾಪ್ ಕ್ಯಾಮೆರಾ, ಡಿಜಿಟಲ್ ವಿಡಿಯೋ ರೆಕಾರ್ಡರ್, ಮೈಕ್, ಸ್ಪೀಕರ್ ಹಾಗೂ ರಿಮೋಟ್ ಪ್ರಿಂಟಿಂಗ್ ವ್ಯವಸ್ಥೆಯುಳ್ಳ ಹೊಸ ವಾಹನವನ್ನು ಸಂಚಾರ ಪೊಲೀಸ್ ವಿಭಾಗಕ್ಕೆ ಸೇಪರ್ಡೆಗೊಳಿಸಿ ಹಸಿರು ನಿಶಾನೆ ತೋರಿದರು. ಉಡುಪಿ ಮಣಿಪಾಲ್ ರಸ್ತೆ ವಿಸ್ತರಣೆ ಕಾರ್ಯ ಶೀಘ್ರದಲ್ಲೇ ಪೂರ್ಣಗೊಳ್ಳಲಿದ್ದು, 80ಕಿ.ಮೀ ವೇಗದಲ್ಲಿ ಸಂಚರಿಸುವ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X