ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗರ್ಭಿಣಿಯರಿಗೆ ಸರಕಾರದ ವತಿಯಿಂದ ಆರತಿ

By Mrutyunjaya Kalmat
|
Google Oneindia Kannada News

Mass seemantha
ಬ್ರಹ್ಮಾವರ(ಉಡುಪಿ), ಮಾ. 22 : ಸಾಮೂಹಿಕ ಮದುವೆಗೆ ಚಾಲನೆ ನೀಡುವ ಮೂಲಕ ಅದ್ಧೂರಿ ಮದುವೆಗೆ ಕಡಿವಾಣ ಹಾಕುವಲ್ಲಿ ಸಫಲವಾಗಿದ್ದ ಸರಕಾರ ಇದೀಗ ಸರಳ, ಸಾಮೂಹಿಕ ಸೀಮಂತ ಕಾರ್ಯಕ್ರಮ ಮಾಡುವುದಕ್ಕೆ ಮುಂದಾಗಿದೆ. ಕರ್ನಾಟಕದಲ್ಲಿ ಇದು ಹೊಸ ಬೆಳವಣಿಗೆ. ಗರ್ಭಿಣಿಯರನ್ನು ಒಂದು ಕಡೆ ಕುಳ್ಳಿರಿಸಿ ಆರತಿ ಎತ್ತುವ ಇಂಥ ಕಾರ್ಯಕ್ರಮ ಜಗತ್ತಿನಲ್ಲೇ ಮೊಟ್ಟಮೊದಲೇನೋ.

ಉಡುಪಿ ಜಿಲ್ಲಾ ಕುಟುಂಬ ಮತ್ತು ಕಲ್ಯಾಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಮಿಷನ್ ಜಿಲ್ಲಾ ಘಟಕ, ಮಂದರ್ತಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸ್ಥಳೀಯ ಯುವಕ ಮಂಡಳಗಳ ಸಹಯೋಗದೊಂದಿಗೆ ಸಾಮೂಹಿಕ ಸೀಮಂತ ಕಾರ್ಯಕ್ರಮವನ್ನು ಕಳೆದ ಶನಿವಾರ ಏರ್ಪಡಿಸಿ, ಯಶಸ್ವಿಗೊಳಿಸಲಾಯಿತು.

ಸಾಮೂಹಿಕ ಸೀಮಂತ ಕಾರ್ಯಕ್ರಮದಿಂದ ಗ್ರಾಮೀಣ ಪ್ರದೇಶದ ಮಹಿಳೆಯರಲ್ಲಿರುವ ಮೂಢನಂಬಿಕೆಗಳೂ ಹೋಗಲಾಡಿಸಲು ಸಹಕಾರಿಯಾಗಲಿದೆ. ಮಗುವಿನ ಪಾಲನೆ ಪಾಲನೆ ಪೋಷಣೆ ಬಗೆಗೆ ಭಾವಿ ತಾಯಿಯರಿಗೆ ತಿಳವಳಿಕೆ ನೀಡುವುದು ಇಂಥ ಕಾರ್ಯಕ್ರಮಗಳಿಂದ ಸಾಧ್ಯವಾಗುತ್ತದೆ. ಜತೆಗೆ, ಸೀಮಂತ ಮಾಡುವುದಕ್ಕೆ ಆರ್ಥಿಕವಾಗಿ ಹಿಂದುಳಿದ ಮನೆಯವರಿಗೆ ಸಾಮೂಹಿಕ ಕಾರ್ಯಕ್ರಮ ಆಸರೆಯಾಗುತ್ತದೆ.

ಗ್ರಾಮೀಣ ಪ್ರದೇಶದಲ್ಲಿ ಗರ್ಭಿಣಿ ಮಹಿಳೆಯರಲ್ಲಿರುವ ಹೆರಿಗೆ ಕುರಿತಾದ ಅನೇಕ ಭಯಗಳನ್ನು ದೂರು ಮಾಡುವುದು ಒಂದು ಉದ್ದೇಶ. ಇದರೊಂದಿಗೆ ಸರಕಾರಿ ಆಸ್ಪತ್ರೆ ಸೇವೆಯನ್ನು ಪ್ರತಿಯೊಬ್ಬರು ಪಡೆದುಕೊಳ್ಳುವಂತೆ ಪ್ರೇರೇಪಿಯುವುದು ಮುಖ್ಯ. ಗ್ರಾಮೀಣ ಪ್ರದೇಶದಲ್ಲಿರುವ ಮೂಢನಂಬಿಕೆಗಳಿಂದಾಗಿ ಗರ್ಭಿಣಿ ಮಹಿಳೆಯರು ಸಾಕಷ್ಟು ತೊಂದರೆಗೆ ಸಿಲುಕಿರುವ ಘಟನೆಗಳು ಜರುಗಿವೆ.

ಹೀಗಾಗಿ ಸೀಮಂತ ಕಾರ್ಯಕ್ರಮ ಹಮ್ಮಿಕೊಳ್ಳುವ ಜನರಲ್ಲಿ ಅರಿವುಂಟು ಮಾಡಲು ಈ ಕಾರ್ಯಕ್ರಮ ಸರಕಾರದ ವತಿಯಿಂದ ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಸೀಮಂತ ಕಾರ್ಯಕ್ರಮದಲ್ಲಿ ತಾಲ್ಲೂಕಿನ ಕಡೂರು, ಶಿರೂರು, ಹೆಗ್ಗುಜ್ಜೆ, ಆವರ್ಸೆ, ನಡೂರು, ಹಲಿಯಾನ್, ವಂದಾರು ಮತ್ತು ಕುಕ್ಕಾಜೆ ಪ್ರದೇಶದಿಂದ ಗರ್ಭಿಣಿ ಮಹಿಳೆಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X