ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಿರನಿದ್ರೆಗೆ ಗಿರಿಜಾ ಪ್ರಸಾದ್ ಕೋಯಿರಾಲ

By Rajendra
|
Google Oneindia Kannada News

Nepalese ex-leader Girija Prasad Koirala dies
ಕಠ್ಮಂಡು, ಮಾ.20: ನೇಪಾಳದ ಮಾಜಿ ಪ್ರಧಾನಿ ಗಿರಿಜಾ ಪ್ರಸಾದ್ ಕೋಯಿರಾಲ(87) ಚಿರನಿದ್ರೆಗೆ ಜಾರಿದ್ದಾರೆ. ಕಳೆದ ಕೆಲ ಕಾಲದಿಂದ ಅವರು ಶ್ವಾಸಕೋಶ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದರು.ಇತ್ತೀಚೆಗೆ ಡಯೇರಿಯಾದಿಂದ ಬಳಲುತ್ತಿದ್ದ ಅವರನ್ನು ಚಿಕಿತ್ಸೆಗಾಗಿ ಆಸ್ಪೆತ್ರೆಗೆ ದಾಖಲಿಸಿದ್ದರು.

ಮೂರು ದಿನಗಳ ಹಿಂದಷ್ಟೆ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು. ವಿದೇಶಾಂಗ ಸಚಿವೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಅವರ ಮಗಳ ಮನೆಯಲ್ಲೆ ಅವರುಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಶ್ವಾಸಕೋಶದ ಸಮಸ್ಯೆಯಿಂದ ಬಳಲುತ್ತಿದ್ದ ಅವರಿಗೆ ಮನೆಯಲ್ಲೆ ವೆಂಟಿಲೇರಟ್ ಗಳ ಮೂಲಕ ಚಿಕಿತ್ಸೆ ಕೊಡಲಾಗುತ್ತಿತ್ತು. ಇಂದು ಅವರ ಪರಿಸ್ಥಿತಿ ವಿಷಮಿಸಿದ ಕಾರಣ ಕೋಯಿರಾಲ ನಿಧನರಾದರು.

ನೇಪಾಳದಲ್ಲಿ 240 ವರ್ಷಗಳ ರಾಜ ಪ್ರಭುತ್ವಕ್ಕೆ ಅಂತ್ಯಹಾಡಿ ಪ್ರಜಾಪ್ರಭುತ್ವವನ್ನು ಸ್ಥಾಪಿಸುವಲ್ಲಿ ಕೋಯಿರಾಲ ಪ್ರಧಾನ ಪಾತ್ರ ವಹಿಸಿದ್ದರು. ನಾಲ್ಕು ಬಾರಿ ಅವರು ನೇಪಾಳದ ಪ್ರಧಾನಿಯಾಗಿ ಆಯ್ಕೆಯಾಗಿದ್ದರು. 2007ರ ಜನವರಿಯಿಂದ 2008ರ ಜುಲೈವರೆಗೆ ರಾಷ್ಟ್ರಪತಿಯಾಗಿ ಕಾರ್ಯನಿರ್ವಹಿಸಿದ್ದರು. ಕೋಯಿರಾಲ ನಿಧನಕ್ಕೆ ಎಲ್ಲ ರಾಜಕೀಯ ಪಕ್ಷಗಳು ತೀವ್ರ ಸಂತಾಪ ಸೂಚಿಸಿವೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X