ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಬಿಎಂಪಿ ಚುನಾವಣೆ : ಅಭ್ಯರ್ಥಿಗಳೊಂದಿಗೆ ಮುಕ್ತ ಚರ್ಚೆ

By Prasad
|
Google Oneindia Kannada News

BBMP election : Meet the candidates
ಬೆಂಗಳೂರು, ಮಾ. 20 : ಮಾರ್ಚ್ 28ರಂದು ನಡೆಯಲಿರುವ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಅಖಾಡ ಸಿದ್ಧವಾಗಿದೆ. ಚುನಾವಣೆ ಅನೇಕಾನೇಕ ರಾಜಕೀಯ ಕಾರಣಗಳಿಂದ ವಿಳಂಬವಾಗಿದ್ದರಿಂದ ನಗರದಲ್ಲಿ ಅಭಿವೃದ್ಧಿ ಕಾರ್ಯ ಎದುರು ನೋಡುತ್ತಿರುವ ಬೆಂಗಳೂರಿನ ನಾಗರಿಕರು ಸೂಕ್ತವಾದ ಪ್ರತಿನಿಧಿಯ ಆಯ್ಕೆಗಾಗಿ ಕಾದು ನಿಂತಿದ್ದಾರೆ.

ನಿಮ್ಮ ವಾರ್ಡ್ ನಲ್ಲಿ ನಿಂತಿರುವ ಅಭ್ಯರ್ಥಿಗಳು ಎಂಥವರು, ಅವರಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ, ಅವರಿಂದ ಏನೇನು ಭರವಸೆಗಳ ಪ್ರವಾಹ ಹರಿದುಬರಲಿದೆ ಎಂಬುದನ್ನು ತಿಳಿಯಲು ಸಿಟಿಜನ್ ಮ್ಯಾಟರ್ಸ್ ಅಂತರ್ಜಾಲ ತಾಣ ಮತ್ತು ರೆಸಿಡೆಂಟ್ಸ್ ಅಸೋಸಿಯೇಶನ್ ಜಂಟಿಯಾಗಿ ಬೆಂಗಳೂರಿನ ನಾಗರಿಕರಿಗೆ ಉತ್ತಮ ವೇದಿಕೆ ಕಲ್ಪಿಸಿ ಕೊಡುತ್ತಿವೆ.

ಶನಿವಾರ ಸಂಜೆ 4 ಗಂಟೆಗೆ ಜೆಪಿ ನಗರ (ವಾರ್ಡ್ 177) ಮತ್ತು ಸಾರಕ್ಕಿ (178) ನಾಗರಿಕರು ತಮ್ಮ ಅಹವಾಲುಗಳನ್ನು ಮಂದಿಟ್ಟುಕೊಂಡು ಚುನಾವಣೆಗೆ ನಿಂತಿರುವ ಅಭ್ಯರ್ಥಿಗಳೊಂದಿಗೆ ಚರ್ಚೆ ನಡೆಸಬಹುದು.

ಭಾನುವಾರ ಸಂಜೆ 4 ಗಂಟೆಗೆ ಬಿಟಿಎಂ ಬಡಾವಣೆ (176) ಮತ್ತು ಮಡಿವಾಳ (172) ಪ್ರದೇಶದ ನಾಗರಿಕರು ಅಭ್ಯರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಸಮಸ್ಯೆಗಳ ನಿವಾರಣೆಗೆ ದಾರಿ ಕಂಡುಕೊಳ್ಳಬಹುದು.

ವಿಳಾಸ ಹೀಗಿದೆ

ಶನಿವಾರ, ಮಾ. 20 : ಮಹಾತ್ಮ ಚಿಲ್ಡ್ರನ್ಸ್ ಹೋಮ್ ಮೈದಾನ, 9ನೇ ಅಡ್ಡರಸ್ತೆ, 8ನೇ ಮುಖ್ಯರಸ್ತೆ, ಜೆಪಿ ನಗರ ಮೂನೇ ಫೇಸ್, ಬೆಂಗಳೂರು.

ಭಾನುವಾರ, ಮಾ. 21 : ಐಕೊಬೂ ನಗರ ಸಂಘದ ಮೈದಾನ, ಬಿಟಿಎಂ ರಿಂಗ್ ರಸ್ತೆ, ಅದ್ವೈತ್ ಪೆಟ್ರೋಲ್ ಬಂಕ್/ಅಡ್ಯಾರ್ ಆನಂದ ಭವನ ಹತ್ತಿರ, ಬೆಂಗಳೂರು.

ಹೆಚ್ಚಿನ ಮಾಹಿತಿಗಾಗಿ : http://bangalore.citizenmatters.in/

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X