ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೂಡ್ಲಿಗಿ ಶಾಸಕನ ಮನೆ ಮೇಲೆ ಆದಾಯ ತೆರಿಗೆ ದಾಳಿ

By Prasad
|
Google Oneindia Kannada News

Income tax raid (suggestive photo)
ಬಳ್ಳಾರಿ, ಮಾ. 19 : ಕೂಡ್ಲಿಗಿಯ ಬಿಜೆಪಿ ಶಾಸಕ ಬಿ. ನಾಗೇಂದ್ರ ಅವರ ಬೆಂಗಳೂರು, ಬಳ್ಳಾರಿ ನಿವಾಸಗಳು, ಹೊಸಪೇಟೆಯ ಕಚೇರಿಯ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಗುರುವಾರ ದಾಳಿ ನಡೆಸಿ ದಾಖಲಾತಿಗಳ ಪರಿಶೀಲನೆಯನ್ನು ನಡೆಸಿದ್ದಾರೆ.

ಬೆಂಗಳೂರಿನ ರಾಜಾಜಿನಗರದ ಮನೆ, ಅಶೋಕ, ಕಾನಿಷ್ಕ ಹೊಟೇಲ್‌ಗಳ ಆವರಣದಲ್ಲಿಯ ಕಚೇರಿಗಳು, ಹೊಸಪೇಟೆಯಲ್ಲಿನ ಕಚೇರಿ ಮತ್ತು ಬಳ್ಳಾರಿಯ ಬಸವೇಶ್ವರನಗರದಲ್ಲಿಯ ಮನೆಗೆ ಭೇಟಿ ನೀಡಿದ ಅಧಿಕಾರಿಗಳ ತಂಡವು, ಶಾಸಕ ಬಿ. ನಾಗೇಂದ್ರ ಅವರು ಸಲ್ಲಿಸಿರುವ ಆದಾಯದ ಮಾಹಿತಿಯ ದಾಖಲಾತಿಗಳನ್ನು ಪರಿಶೀಲನೆ ನಡೆಸಿದ್ದಾರೆ.

ಶಾಸಕ ಬಿ. ನಾಗೇಂದ್ರ ಅವರು ಬೆಂಗಳೂರಿನಲ್ಲೇ ಇದ್ದಾರೆ. ಹೊಸಪೇಟೆಯ ಅವರ ಕಚೇರಿಗೆ ಗುರುವಾರ ಬೆಳಗ್ಗೆ 9 ಗಂಟೆ ಸುಮಾರಿಗೆ 10 ಅಧಿಕಾರಿಗಳ ತಂಡ, ಬಳ್ಳಾರಿಯ ಅವರ ಮನೆಗೆ 20ಕ್ಕೂ ಹೆಚ್ಚಿನ ಅಧಿಕಾರಿಗಳ ತಂಡ ರಾತ್ರಿ 7.45ರ ಸುಮಾರಿಗೆ ಭೇಟಿ ನೀಡಿ ದಾಖಲಾತಿಗಳ ಪರಿಶೀಲನೆ ನಡೆಸಿತು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X