ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಠ-ಮಾನ್ಯಗಳಿಗೆ ನೆರವು: ಸಿಎಂ ಸಮರ್ಥನೆ

By Mahesh
|
Google Oneindia Kannada News

BS Yeddyurappa
ಬೆಂಗಳೂರು, ಮಾ.19: ಮಠಮಾನ್ಯಗಳಿಗೆ ಅನುದಾನ ನೀಡಿರುವ ಸರ್ಕಾರದ ಕ್ರಮವನ್ನು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ವಿಧಾನಸಭೆಯಲ್ಲಿ ಬಜೆಟ್ ಚರ್ಚೆಗೆ ಉತ್ತರಿಸಿದ ಅವರು, ವಿಪಕ್ಷಗಳ ಆರೋಪಕ್ಕೆ ಪ್ರತಿಕ್ರಿಯೆ ನೀಡಿ, ತಮ್ಮ ಸರ್ಕಾರ ನೀಡುತ್ತಿರುವ ಅನುದಾನ ಎಲ್ಲವೂ ಸಕ್ರಮ ಎಂದರು.

ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಅನ್ನದಾಸೋಹ, ಜ್ಞಾನದಾಸೋಹ ನೀಡುವ ಮೂಲಕ ಸರ್ಕಾರದ ಜವಾಬ್ದಾರಿಯನ್ನು ಗಣನೀಯ ಪ್ರಮಾಣದಲ್ಲಿ ಕಡಿಮೆ ಮಾಡಿರುವ ಮಠ ಮಾನ್ಯಗಳಿಗೆ ನೆರವು ನೀಡುವುದರಲ್ಲಿ ತಪ್ಪೇನಿದೆ? ಮಠ ಮಾನ್ಯಗಳು ಯಾವುದೇ ವ್ಯಕ್ತಿಯ ಆಸ್ತಿಯಲ್ಲ. ಇವು ನಿರ್ದಿಷ್ಟ ಸಮುದಾಯದ ಜನತೆಯ ಆಸ್ತಿ. ಹೀಗಾಗಿ ಜನಸೇವೆಗಾಗಿ ಹಣವನ್ನು ಕಾಣಿಕೆಯಾಗಿ ನೀಡುವುದು ತಪ್ಪೇ? ಆಯವ್ಯಯದಲ್ಲಿ ಮತಭೇದವಿಲ್ಲದೇ ಎಲ್ಲ ಧರ್ಮಗಳಿಗೂ ಧನ ಸಹಾಯ ಮಾಡಲು ತಾವು ಬದ್ಧ ಎಂದರು.

ಜುಲೈ ವೇಳೆಗೆ 70 ಸಾವಿರ ಮನೆಗಳ ನಿರ್ಮಾಣ
ನೆರೆಪೀಡಿತ ಪ್ರದೇಶಗಳಲ್ಲಿ ಕೈಗೊಂಡಿರುವ ಮನೆಗಳ ನಿರ್ಮಣಕಾರ್ಯ ಪ್ರಗತಿಯಲ್ಲಿದ್ದು, ಜುಲೈ ವೇಳೆಗೆ 70 ಸಾವಿರ ಮನೆಗಳನ್ನು ನಿರ್ಮಿಸಲಾಗುವುದು ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದರು.

ಪರಿಹಾರ ಕಾರ್ಯಗಳಿಗೆ ಈವರೆಗೆ 1878ಕೋಟಿ ರೂಪಾಯಿ ಬಿಡುಗಡೆಯಾಗಿದ್ದು, 1500 ಕೋಟಿ ರೂಪಾಯಿ ವೆಚ್ಚವಾಗಿದೆ ಎಂದು ಅವರು ತಿಳಿಸಿದರು. ಕೈಗಾರಿಕಾ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು, 2014 ರ ವೇಳೆಗೆ 3ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆ 10 ಲಕ್ಷ ಉದ್ಯೋಗ ಸೃಷ್ಟಿಸುವುದು ಗುರಿಯಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X