ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದ ಅಗ್ರ 5 ಶ್ರೇಯಾಂಕಿತ ಪಟ್ಟಿಗೆ ಸೈನಾ

By Mahesh
|
Google Oneindia Kannada News

Saina Nehwal
ಹೈದರಾಬಾದ್ , ಮಾ. 18: ಭಾರತದ ಉದಯೋನ್ಮುಖ ಬಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಅವರು ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ವಿಶ್ವದ ಅಗ್ರ 5 ಶ್ರೇಯಾಂಕಿತರ ಪಟ್ಟಿಗೆ ತಮ್ಮ ಹೆಸರನ್ನು ದಾಖಲಿಸಿದ್ದಾರೆ.

ಇತ್ತೀಚಿಗೆ ಆಲ್ ಇಂಗ್ಲೆಂಡ್ ಒಪನ್ ಬಾಡ್ಮಿಂಟನ್ ಟೂರ್ನಿಯ ಉಪಾಂತ್ಯ ಹಂತ ತಲುಪಿದ ಸಾಧನೆ ಮೆರೆದ ಪ್ರಥಮ ಭಾರತೀಯ ಮಹಿಳಾ ಕ್ರೀಡಾಪಟು ಎಂಬ ಹಿರಿಮೆಯನ್ನು ಗಳಿಸಿದ್ದರು. ಸೆಮಿಫೈನಲ್ ನಲ್ಲಿ ಸೋತರೂ ಮುಂಬರುವ ಟೂರ್ನಿಗಳಲ್ಲಿ ಉತ್ತಮವಾಗಿ ಆಡಲು ಇಂಗ್ಲೆಂಡ್ ಒಪನ್ ನಲ್ಲಿ ಆಡಿದ ಅನುಭವ ಪೂರಕವಾಗಲಿದೆ.

ಕಳೆದ ವರ್ಷಸೈನಾ ಅವರಿಗೆ ಶುಭಪ್ರದವಾಗಿತ್ತು. ಇಂಡೋನೇಷಿಯನ್ ಓಪನ್ ಸೂಪರ್ ಸೀರಿಸ್ ಟೂರ್ನಿಮೆಂಟ್ ಗೆದ್ದ ನಂತರ ವರ್ಲ್ಡ್ ಸೂಪರ್ ಸೀರಿಸ್ ಮಾಸ್ಟರ್ ಟೂರ್ನಿಯ ಸೆಮಿಫೈನಲ್ ತಲುಪಿದ್ದರು. ವಿಶ್ವ ಚಾಂಪಿಯನ್ ಹಣಾಹಣಿ, ಮಲೇಷಿಯಾ ಓಪನ್ , ಡೆನ್ಮಾರ್ಕ್ ಓಪನ್, ಫ್ರೆಂಚ್ ಸೂಪರ್ ಸೀರಿಸ್, ಸ್ವಿಸ್ ಓಪನ್, ಇಂಡಿಯನ್ ಓಪನ್ ಹಾಗೂ ಸಿಂಗಪುರ್ ಓಪನ್ ನಲ್ಲಿ ಕ್ವಾಟರ್ ಫೈನಲ್ಸ್ ಹಂತ ತಲುಪಿದ್ದರು.

ಈ ಮುಂಚೆ 2006 ರಲ್ಲಿ ಫಿಲಿಫೈನ್ ಓಪನ್, 2008 ರಲ್ಲಿ ತೈಪೆ ಓಪನ್ ಗೆದ್ದ ಕೀರ್ತಿಸೈನಾ ಅವರದ್ದಾಗಿದೆ. ಹರಿಯಾಣದಲ್ಲಿ ಹುಟ್ಟಿ, ಬೆಳೆದ 20 ರ ಹರೆಯದ ಈ ಬಾಡ್ಮಿಂಟನ್ ತಾರೆ ಸದ್ಯ ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ. ಭಾರತದ ಪ್ರತಿಭಾವಂತ ಆಟಗಾರ ಪಿ ಗೋಪಿಚಂದ್ ಅವರು ಸೈನಾಗೆ ತರಬೇತುದಾರರಾಗಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X