ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದುಬೈ ಬೀದಿಗಳಲ್ಲಿ ಕಿಸ್ ಹೊಡೆದೀರಿ, ಜೋಕೆ

By Shami
|
Google Oneindia Kannada News

Kissing
ದುಬೈ, ಮಾ. 17 : ಸಾರ್ವಜನಿಕ ಸ್ಥಳದಲ್ಲಿ, ಎಲ್ಲರಿಗೂ ಕಾಣಿಸುವಂತೆ ಮುತ್ತು ಕೊಟ್ಟುಕೊಂಡರು ಎಂಬ ಆಪಾದನೆಯ ಮೇಲೆ ಬ್ರಿಟಿಷ್ ದಂಪತಿಗಳನ್ನು ಒಂದು ತಿಂಗಳ ಕಾಲಕ್ಕೆ ಸೆರೆಮನೆಗೆ ಕಳಿಸಿದ ಘಟನೆ ಗಲ್ಫ್ ಅರಬ್ ಎಮಿರೇಟ್ಸ್ ನಿಂದ ವರದಿಯಾಗಿದೆ.

24 ಪ್ರಾಯದ ಅಯ್ ಮಾನ್ ನಜಾಫಿ ಮತ್ತು ಅವಳ ಸಂಗಾತಿ ಚಾರ್ಲೋಟೆ ಆಡಮ್ಸ್ ಅವರು ಎಸಗಿದ ಈ ಮೇಲೆ ಹೇಳಿದ ಅಪರಾಧಕ್ಕಾಗಿ ನವೆಂಬರ್ 2009 ರಲ್ಲಿ ಬಂಧನಕ್ಕೊಳಗಾಗಿದ್ದರು. ಸಾರ್ವಜನಿಕ ಜಾಗದಲ್ಲಿ ಅವರು ಪರಸ್ಪರ ಒಬ್ಬರನ್ನೊಬ್ಬರು ಸ್ಪರ್ಶಿಸಿದ್ದರು, ತುಟಿಗೆ ತುಟಿಕೊಟ್ಟರು ಮತ್ತು ಮದ್ಯ ಪಾನವನ್ನು ಮಾಡಿದ್ದರು ಎಂದು ಆರೋಪಿಸಿ ಬಂದಿಸಿ ಜೈಲಿಗೆ ಅಟ್ಟಲಾಗಿತ್ತು.

ಆರೋಪಿಗಳ ವಕೀಲರು 14 ಮಾರ್ಚ್ ರಂದು ನ್ಯಾಯಾಲಯದಲ್ಲಿ ವಾದ ಮಂಡಿಸಿ ತಮ್ಮ ಕಕ್ಷಿದಾರರು ನಿರಪರಾಧಿಗಳು ಎಂದು ಹೇಳಿದರು. ಆರೋಪಿಸಲಾಗಿರುವಂತೆ ಸಂಗಾತಿಗಳು ತುಟಿಗೆ ತುಟಿಗೆ ಕಚ್ಚಿ ಮುತ್ತನ್ನೇನೂ ಕೊಟ್ಟಿಲ್ಲ. ಇದು ಪರಸ್ಪರ ಆತ್ಮೀಯತೆಯನ್ನು ಪ್ರದರ್ಶಿಸುವ ಒಂದು ಸಹಜ ಚುಂಬನ ಕ್ರಿಯೆ ಆಗಿತ್ತೇ ವಿನಾ ಅಸಭ್ಯ ಎನ್ನುವಂಥದ್ದು ಏನನ್ನೂ ಅವರು ಮಾಡಿಲ್ಲ ಎಂದು ವಕೀಲ ಖಲಾಫ್ ಅಲ್ ಹೊಸಾಲಿ ನ್ಯಾಯಾಲಯಕ್ಕೆ ತಿಳಿಸಿದರು.

ಬ್ರಿಟಿಷ್ ದಂಪತಿಗಳು ಅರಬರ ನೆಲದಲ್ಲಿ ಈ ಕೆಲಸ ಮಾಡಿದ್ದು ತಪ್ಪೇ, ಸರಿಯೇ ಎಂಬ ಬಗ್ಗೆ ನ್ಯಾಯಾಲಯದ ತೀರ್ಪು ಏಪ್ರಿಲ್ 4 ರಂದು ಹೊರಬೀಳಲಿದೆ. ಕಳೆದ ಎರಡು ವರ್ಷದ ಅವಧಿಯಲ್ಲಿ ಇಂಥ ಮೂರು ಪ್ರಕರಣಗಳು ದುಬೈ ನಗರದಲ್ಲಿ ಸಂಭವಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬ್ರಿಟಿಷರು ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದು ಈ ಮೂರೂ ಆರೋಪಗಳ ಹುರುಳು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X