ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಿತಿನ್ ಗಡ್ಕರಿ ಟೀಂಗೆ ರಾಜ್ಯದ 8 ಮಂದಿ

By Mahesh
|
Google Oneindia Kannada News

DV Sadananda Gowda
ನವದೆಹಲಿ, ಮಾ. 17: ಭಾರತೀಯ ಜನತಾ ಪಕ್ಷ(ಬಿಜೆಪಿ) ತನ್ನ ರಾಷ್ಟ್ರೀಯ ಕಾರ್ಯಕಾರಿ ತಂಡವನ್ನು ಯುಗಾದಿ ದಿನ(ಮಾ.16)ದಂದು ಪ್ರಕಟಿಸಿದೆ. ನೂತನ ಅಧ್ಯಕ್ಷ ನಿತಿನ್ ಗಡ್ಕರಿ ಅವರ ಹೊಸ ತಂಡದಲ್ಲಿ ರಾಜ್ಯದ ಎಂಟು ಮಂದಿಗೆ ಸ್ಥಾನ ಲಭಿಸಿದೆ. ಮಾಜಿ ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಲ್ಲಿ ಸ್ಥಾನ ಸಿಗಲಿದೆ ಎನ್ನುವ ಸುದ್ದಿ ಇತ್ತಾದರೂ, ಅವರು ಅವಕಾಶ ವಂಚಿತರಾಗಿದ್ದಾರೆ.

ರಾಜ್ಯದಿಂದ 8 ಮಂದಿ ತಂಡಕ್ಕೆ: ಮಾಜಿ ಸಂಸದ ಸಿ.ಎಚ್.ವಿಜಯಶಂಕರ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ನೇಮಕವಾಗಿದ್ದಾರೆ. ಖಾಯಂ ಆಹ್ವಾನಿತರಾಗಿ ಮುಖ್ಯಮಂತ್ರಿ ಯಡಿಯೂರಪ್ಪ , ಗೃಹ ಸಚಿವ ಆಚಾರ್ಯ, ಹಾಗೂ ರಾಜ್ಯ ಬಿಜೆಪಿ ಮಾಜಿ ಅಧ್ಯಕ್ಷ ಸದಾನಂದ ಗೌಡ ನೇಮಕಗೊಂಡಿದ್ದಾರೆ. ಸಚಿವರಾದ ಎಸ್.ಸುರೇಶ್‌ಕುಮಾರ್, ಗೋವಿಂದ ಕಾರಜೋಳ ಹಾಗೂ ಡಾ.ವಾಮನಾಚಾರ್ಯ ವಿಶೇಷ ಆಹ್ವಾನಿತರು. ಅನಂತ್ ಕುಮಾರ್ ಅವರು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಪುನರಾಯ್ಕೆಗೊಂಡಿದ್ದಾರೆ. ಅನಂತ್ ಕುಮಾರ್ ಅವರು ಸಂಸದೀಯ ಮಂಡಳಿಯ ಕಾರ್ಯದರ್ಶಿಯೂ ಆಗಿ ಪ್ರಮುಖ ಹೊಣೆಗಾರಿಕೆ ಕೂಡ ಪಡೆದಿದ್ದಾರೆ.

ಉಪಾಧ್ಯಕ್ಷರು: ಶಾಂತ ಕುಮಾರ್, ಕಲ್‌ರಾಜ್ ಮಿಶ್ರಾ, ವಿನಯ ಕತಿಯಾರ್, ಭಗತ್ ಸಿಂಗ್ ಕೋಶಿಯಾರಿ, ಮುಕ್ತಾರ್ ಅಬ್ಬಾಸ್ ನಖ್ವಿ, ಕರುಣಾ ಶುಕ್ಲಾ, ನಜ್ಮಾ ಹೆಪ್ತುಲ್ಲಾ , ಹೇಮ ಮಾಲಿನಿ,ವಿಜಯ್ ಚಕ್ರವರ್ತಿ,ಪುರುಷೋತ್ತಮ್ ರೂಪಾಲ, ಕಿರಣ್ ಘಾಯಿ.

ಪ್ರಧಾನ ಕಾರ್ಯದರ್ಶಿಗಳು: ಅನಂತ್ ಕುಮಾರ್, ತಾವರ್‌ಚಂದ್ ಗೆಹ್ಲೋಟ್, ವಸುಂಧರ ರಾಜೆ, ವಿಜಯ್ ಗೋಯೆಲ್, ಅರ್ಜುನ್ ಮುಂಡಾ,
ರವಿಶಂಕರ್ ಪ್ರಸಾದ್, ಧರ್ಮೇಂದ್ರ ಪ್ರಧಾನ್, ನರೇಂದ್ರ ಸಿಂಗ್ ತೋಮಾರ್,ಜಗತ್ ಪ್ರಕಾಶ್‌ನಡ್ಡಾ,ರಾಮ್‌ಲಾಲ್.

ಕಾರ್ಯದರ್ಶಿಗಳು: ಸಂತೋಷ್ ಕುಮಾರ್ ಗಂಗ್ವಾರ್,ಮುರಳೀಧರ ರಾವ್, ವರುಣ್ ಗಾಂಧಿ, ಸ್ಮೃತಿ ಇರಾನಿ,ನವಜೋತ್ ಸಿಧು,ಸರೋಜ್ ಪಾಂಡೆ, ಕಿರಣ್ ಮಾಹೇಶ್ವರಿ, ತಾಪಿರ್ ಗಾವೋ, ಅಶೋಕ್ ಪ್ರಧಾನ್, ಡಾ.ಕಿರೀಟ್ ಸೋಮಯ್ಯ, ಡಾ.ಲಕ್ಷ್ಮಣ್, ಕ್ಯಾ.ಅಭಿಮನ್ಯು, ಆರತಿ ಮೆಹ್ರಾ,ಭೂಪೇಂದ್ರ ಯಾದವ್, ವಾಣಿ ತ್ರಿಪಾಠಿ.

ಸಂಘಟನಾ ಕಾರ್ಯದರ್ಶಿಗಳು :ವಿ.ಸತೀಶ್ ಮತ್ತು ಸೌದಾನ್ ಸಿಂಗ್.
ಖಜಾಂಚಿ : ಪೀಯೂಶ್ ಗೋಯಲ್.

ವಕ್ತಾರರು: ಪ್ರಕಾಶ್ ಜಾವ್ಡೇಕರ್, ರಾಜೀವ್ ಪ್ರತಾಪ್ ರೂಡಿ, ಶಹನಾವಾಜ್ ಹುಸೇನ್, ರಾಮನಾಥ್ ಕೋವಿಂದ್, ತರುಣ್ ವಿಜಯ್, ಶ್ರೀಮತಿ ನಿರ್ಮಲ ಸೀತಾರಾಮ್. ತರುಣ್ ವಿಜಯ್ ಪಾಂಚಜನ್ಯ ಸಂಪಾದಕರಾಗಿದ್ದು, ಶಹನಾವಾಜ್ ಹುಸೇನ್ ಪ್ರಧಾನ ಕಾರ್ಯದರ್ಶಿ ಹುದ್ದೆಗೇರಿರುವುದು, ಮಹಿಳಾ ವಕ್ತಾರರೊಬ್ಬರು ಪಕ್ಷಕ್ಕೆ ಲಭಿಸಿರುವುದು ವಿಶೇಷ ಗಮನ ಸೆಳೆದಿದೆ.

ಸಂಸದೀಯ ಮಂಡಳಿ: ಪಕ್ಷದ ನೀತಿ ನಿರೂಪಣಾ ಮಂಡಳಿಯಾದ ಸಂಸದೀಯ ಮಂಡಳಿಯಲ್ಲಿ ಗಡ್ಕರಿ, ವಾಜಪೇಯಿ, ಆಡ್ವಾಣಿ, ಡಾ.ಮುರಳಿ ಮನೋಹರ ಜೋಶಿ, ವೆಂಕಯ್ಯ ನಾಯ್ಡು,ರಾಜನಾಥ್ ಸಿಂಗ್, ಸುಷ್ಮಾ ಸ್ವರಾಜ್, ಅರುಣ್ ಜೇಟ್ಲಿ, ಬಾಳ್‌ಆಪ್ಟೆ, ಅನಂತ ಕುಮಾರ್, ತಾವರ್‌ಚಂದ್ ಗೆಹ್ಲೋಟ್, ರಾಮ್ ಲಾಲ್ ಇರುತ್ತಾರೆ.

ನಿತಿನ್ ಗಡ್ಕರಿ ಅವರ ಆಶಯದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಪಕ್ಷದ ಜವಾಬ್ದಾರಿ ನಿಭಾಯಿಸಲು ಸಿದ್ಧರಾಗಿದ್ದಾರೆ. ಕೇಂದ್ರೀಯ ಚುನಾವಣಾ ಸಮಿತಿ, ವಿವಿಧ ಮೋರ್ಚಾ ಅಧ್ಯಕ್ಷರು, ಘಟಕಗಳ ಸಂಚಾಲಕರನ್ನು ಬಳಿಕ ಪ್ರಕಟಿಸಲಾಗುವುದು ಎಂದು ವಕ್ತಾರ ರವಿಶಂಕರ್‌ಪ್ರಸಾದ್ ಸಿಂಗ್ ತಿಳಿಸಿದ್ದಾರೆ. ದೇಶದ ಎಲ್ಲ ಭಾಗಗಳಿಗೆ ಪ್ರಾತಿನಿಧ್ಯ ನೀಡಲಾಗಿದೆ ಎಂದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X